Advertisement

Actor Dolly Dhananjaya: ಚುನಾವಣೆ ಸ್ಪರ್ಧೆ ಬಗ್ಗೆ ಚರ್ಚೆ ಆಗಿಲ್ಲ; ನಟ ಡಾಲಿ ಧನಂಜಯ

09:33 PM Feb 22, 2024 | Team Udayavani |

ಮಂಡ್ಯ: ರಾಜಕೀಯ ಹಾಗೂ ಸ್ಪರ್ಧೆ ಬಗ್ಗೆ ಚರ್ಚೆಯಾಗಿಲ್ಲ. ನಾನು ಸಿನಿಮಾಗೆ ಸೀಮಿತನಾಗಿರುತ್ತೇನೆ. ಇಲ್ಲಿಂದಲೇ ಕೆಲಸ ಮಾಡಬಹುದು ಎಂದು ನಟ ಡಾಲಿ ಧನಂಜಯ ಚುನಾವಣೆ ಸ್ಪರ್ಧೆ ಬಗ್ಗೆ ಸ್ಪಷ್ಟಪಡಿಸಿದರು.

Advertisement

ಶ್ರೀರಂಗಪಟ್ಟಣದ ಕೆ.ಶೆಟ್ಟಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯಕ್ಕೆ ನಾನು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾದಲ್ಲಿ ಜನರಿಂದ ಸಿಕ್ಕಿರುವ ಪ್ರೀತಿ ದೊಡ್ಡದು. ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಅದ್ಭುತವಾಗಿ ಕೆಲಸ ಮಾಡಬೇಕು. ನಾನು ಸಿನಿಮಾ ಮಾಡುತ್ತೇನೆ ಎಂದರು. ಹೈದರಾಬಾದ್‌ಗೆ ಹೋಗಿದ್ದೆ ಅಲ್ಲಿಂದ ಬರುವಷ್ಟರಲ್ಲಿ ಸ್ಪರ್ಧೆಯ ಉಹಾಪೋಹ ಎದ್ದಿದೆ. ಮಾಧ್ಯಮದವರೇ ಟಿಕೆಟ್‌ ಕೊಡಿಸಿ ಚುನಾವಣೆಗೂ ನಿಲ್ಲಿಸಿ ಬಿಟ್ಟಿದ್ದೀರಿ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ತುಂಬಾ ಕನಸು ಕಟ್ಟಿಕೊಂಡು ಸಿನಿಮಾಗೆ ಬಂದಿದ್ದೇನೆ. ಇಲ್ಲಿದ್ದುಕೊಂಡೇ ಕೆಲಸ ಮಾಡಬಹುದು. ಚುನಾವಣೆ ಸ್ಪರ್ಧೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next