Advertisement
ಬೆಂಗಳೂರು ಉತ್ತರದಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುತ್ತಾರೋ ಅಥವಾ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ, ಎರಡು ಲೋಕಸಭಾ ಕ್ಷೇತ್ರದಿಂದ ಕಾರ್ಯಕರ್ತರ ಒತ್ತಡವಿದೆ. ಅದರಲ್ಲಿಯೂ ತುಮಕೂರಿನಿಂದ ಸ್ಪರ್ಧಿಸಬೇಕು ಎಂದು ಜೆಡಿಎಸ್ ಮುಖಂಡರು ದೇವೇಗೌಡರನ್ನು ಭೇಟಿ ಮಾಡಿ, ಮನವಿ ಮಾಡಿದ್ದಾರೆ.
Related Articles
Advertisement
ಮಾ.24ರಂದು ಸಭೆ: ನಗರ ಸಮೀಪದ ಎಚ್.ಎಂ.ಎಸ್.ಕಾಲೇಜಿನಲ್ಲಿ ಮಾ.24ರಂದು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳು ಇದ್ದು, ಈ ಸಭೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿಯೇ ನಡೆಯಲಿದೆ. ಈ ಸಭೆಯಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರಿಗೆ ಟಿಕೆಟ್ ವಂಚನೆಯಾಗಿ ಮೂಡಿರುವ ಅಸಮಾಧಾನದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳು ಇದ್ದು, ಈ ಸಭೆ ಮಹತ್ವ ಪಡೆದಿದೆ.
ದೇವೇಗೌಡರದ್ದು ರಾಕ್ಷಸ ಕುಟುಂಬತುಮಕೂರು: ದೇವೇಗೌಡರದ್ದು ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಹೆದುರುವುದಿಲ್ಲ. ಯಾರಿಗೂ ಹೆದುರುವುದಿಲ್ಲ. ಅವರು ಜೀವನದಲ್ಲಿ ಗೆಲ್ಲಲಿ, ಸೋಲಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ತುಮಕೂರಿನಲ್ಲಿಯೂ ಹೋರಾಟ ಮಾಡಿ ಗೆಲ್ಲುತ್ತಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಮತ್ತೆ ಗೌಡರ ಕುಟುಂಬವನ್ನು ರಾಕ್ಷಸ ಕುಟುಂಬಕ್ಕೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಸಚಿವ ಎಸ್.ಆರ್.ಶ್ರೀನಿವಾಸ್ ಈ ರೀತಿಯ ವಿವಾದಿತ ಹೇಳಿಕೆಗಳನ್ನು ನೀಡುವುದು ಇದೇನು ಹೊಸತಲ್ಲ. ಈ ಹಿಂದೆ ದೇವೇಗೌಡರ ಕಾರ್ಯವೈಖರಿ ಬಗ್ಗೆ ಪ್ರಶಂಸಿಸುವ ಭರದಲ್ಲಿ ದೇವೇಗೌಡರು ಹುಚ್ಚು ನಾಯಿ ರೀತಿ ಸುತ್ತುತ್ತಾರೆ ಎಂದು ಹೇಳಿದ್ದರು. ಯಾವುದಕ್ಕೂ ಹೆದರುವುದಿಲ್ಲ: ಈಗ ಜೆಡಿಎಸ್ ಬಗ್ಗೆ ಮತ್ತು ದೇವೇಗೌಡರ ಬಗ್ಗೆ ಟೀಕಿಸುವವರಿಗೆ ಟಾಂಗ್ ಕೊಡುವ ರೀತಿಯಲ್ಲಿ ಮಾತನಾಡುತ್ತಿರುವಾಗ ದೇವೇಗೌಡರದ್ದು ರಾಕ್ಷಸ ಕುಟುಂಬ. ಅವರು ಮಾಡಬೇಕು ಎನ್ನುವ ಕೆಲಸವನ್ನು ಮಾಡಿಯೇ ಮಾಡುತ್ತಾರೆ. ಅವರು ಯಾವುದಕ್ಕೂ ಹೆದುರುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೆ ಸೋಲುತ್ತೇವೆ ಎಂದು ಹೆದರಿ ತುಮಕೂರಿಗೆ ದೇವೇಗೌಡರು ಬರುತ್ತಿದ್ದಾರೆ ಎಂದು ಮಾಡುತ್ತಿರುವ ಆರೋಪಕ್ಕೆ ತಿರಿಗೇಟು ನೀಡುವ ಭರದಲ್ಲಿ ರಾಕ್ಷಸರ ಕುಟುಂಬ ಎನ್ನುವ ಪದಬಳಕೆ ಮಾಡಿದ್ದಾರೆ. ಮಾ.25ರಂದು ನಾಮಪತ್ರ ಸಲ್ಲಿಕೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾ.25ಕ್ಕೆ ನಾಮಪತ್ರ ಸಲ್ಲಿಸುತ್ತಾರೆ ಎಂದು ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಕಾಂಗ್ರೆಸ್ ಜೊತೆಯಲ್ಲಿ ಮಾತನಾಡಿದ್ದೇವೆ. ಮಾ.24ರಂದು ಜೆಡಿಎಸ್, ಕಾಂಗ್ರೆಸ್ ಮುಖಂಡರ ಒಟ್ಟಿಗೆ ಸಭೆ ನಡೆಸಿ, ನಂತರ ದೇವೇಗೌಡರು ನಾಮಪತ್ರ ಸಲ್ಲಿಸುವ ಬಗ್ಗೆ ಚರ್ಚಿಸಿ, ಮಾ.25ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು. ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುತ್ತಾರೆ ಎನ್ನುವ ವಿಚಾರವಾಗಿ ಮಾತನಾಡಲು ಸಚಿವ ಎಸ್.ಆರ್.ಶ್ರೀನಿವಾಸ್, ಬೆಮೆಲ್ ಕಾಂತರಾಜು, ಎಚ್.ನಿಂಗಪ್ಪ ಬಂದಿದ್ದರು. ನಮ್ಮ ಪಕ್ಷದ ಮುಖಂಡರು ಮಾತನಾಡಿದ್ದೇವೆ. ಆದರೆ, ನಮಗೆ ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನೀಡುವ ಮಾರ್ಗದರ್ಶನದಲ್ಲಿ ನಡೆಯುತ್ತೇವೆ.
-ಎಸ್.ರಫೀಕ್ ಅಹಮದ್, ಕಾಂಗ್ರೆಸ್ ಮಾಜಿ ಶಾಸಕ * ಚಿ.ನಿ.ಪುರುಷೋತ್ತಮ್