Advertisement

Kundapura: ಮೂಡು ತಾರಿಬೇರು ಶಾಲೆ: ರಂಗಮಂದಿರಕ್ಕೆ ಶಿಲಾನ್ಯಾಸ

02:05 PM Sep 10, 2024 | Team Udayavani |

ಕುಂದಾಪುರ: ಆಲೂರು ಗ್ರಾಮದ ಮೂಡು ತಾರಿಬೇರು ಸರಕಾರಿ ಕಿ.ಪ್ರಾ. ಶಾಲೆಯಲ್ಲಿ ಕೊನೆಗೂ ರಂಗ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ರಂಗ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ.

Advertisement

ಈ ಶಾಲೆ ಆರಂಭಗೊಂಡು 70 ವರ್ಷಗಳಾದರೂ ಇನ್ನೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಂಗ ಮಂದಿರ ಇರಲಿಲ್ಲ ಅನ್ನುವ ಕೊರಗಿತ್ತು. ಅದನ್ನು ಈಗ ನಿವಾರಿಸಲು ಹಳೆ ವಿದ್ಯಾರ್ಥಿ ಸಂಘದವರು ಮುಂದಾಗಿದ್ದು, ಅವರಿಗೆ ಊರಿನ ಅನೇಕರು ಕೈಜೋಡಿಸುತ್ತಿದ್ದಾರೆ.

ರಂಗಮಂದಿರಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾಗೇಶ್‌ ಚಾತ್ರ, ಅಧ್ಯಕ್ಷ ಕಿರಣ್‌ ಗಾಣಿಗ, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಊರಿನ ಗಣ್ಯರು, ಪೋಷಕರು, ಊರವರು ಉಪಸ್ಥಿತರಿದ್ದರು.

ಬೈಂದೂರು ವಲಯದ ಆಲೂರು ಗ್ರಾಮದ ಮೂರು ತಾರಿಬೇರು ಶಾಲೆಯಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸಭಾಭವನ ಅಥವಾ ರಂಗ ಮಂದಿರವಿಲ್ಲದೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ತರಗತಿ ಕೊಠಡಿಯಲ್ಲಿಯೇ ನಡೆಯುವಂತಾಗಿತ್ತು. ಶಾಲಾ ವಾರ್ಷಿಕೋತ್ಸವ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಸಮಸ್ಯೆಯಾಗುತ್ತಿತ್ತು.

1954ರಲ್ಲಿ ಆರಂಭಗೊಂಡಿರುವ ಮೂಡು ತಾರಿಬೇರು ಶಾಲೆ ಈಗ 70ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಸಾವಿರಾರು ಮಂದಿ ಮಕ್ಕಳ ಬದುಕು ರೂಪಿಸಿದ ಶಿಕ್ಷಣ ಸಂಸ್ಥೆಯಿದು.

Advertisement

ಸುದಿನ ವರದಿ
ಮೂಡುತಾರಿಬೇರು ಶಾಲೆಯಲ್ಲಿ ರಂಗ ಮಂದಿರ ಅಥವಾ ಸಭಾಭವನ ಇಲ್ಲದೇ ಇರುವುದರಿಂದ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ ಅನ್ನುವುದರ ಬಗ್ಗೆ “ಉದಯವಾಣಿ ಸುದಿನ’ವು ಕಳೆದ ವರ್ಷದ ಆ. 20ರಂದು ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next