Advertisement

ಇಟಲಿಯಲ್ಲಿ 80 ವರ್ಷ ಮೆಲ್ಪಟ್ಟವರಿಗೆ ಚಿಕಿತ್ಸೆ ಇಲ್ಲ; ಭೀಕರತೆ ತೆರೆದಿಟ್ಟ ಕೇರಳದ ನರ್ಸ್!

11:21 AM Mar 27, 2020 | Sriram |

ರೋಮ್‌: “80 ವರ್ಷ ಮೇಲ್ಪಟ್ಟ ಕೋವಿಡ್‌ 19 ಸೊಂಕಿತರಿಗೆ ಚಿಕಿತ್ಸೆ ನೀಡುವುದು ಬೇಡ. 80 ವರ್ಷ ಕೆಳಗಿನವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಉಪಚರಿಸಿದರೆ ಸಾಕು’ ಇದು ಇಟಲಿ ಆರೋಗ್ಯ ಇಲಾಖೆ ಅಲ್ಲಿನ ಆಸ್ಪತ್ರೆಗಳಿಗೆ ನೀಡಿರುವ ಸೂಚನೆ. ಇಟಲಿಯಲ್ಲಿ ಕೋವಿಡ್‌ 19 ವೇಗವಾಗಿ ವ್ಯಾಪ್ತಿಸುತ್ತಿದೆ. ಅಪಾರ ಪ್ರಮಾಣದ ಸಾವು ನೋವುಗಳಿಂದ ತತ್ತರಿಸಿದೆ. ಅಲ್ಲಿನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೇರಳ ಮೂಲದ ನರ್ಸ್‌ ಒಬ್ಬರು ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

Advertisement

ಇಟಲಿಯ ಶೇ. 25ರಷ್ಟು ಜನರು 80 ವರ್ಷಗಳಿಗೆ ಮೇಲ್ಪಟ್ಟವರಾಗಿದ್ದಾರೆ. ಆದರೆ ವಯಸ್ಸಿನ ಎಲ್ಲೆ ಇಲ್ಲದೇ ಹರಡಿರುವ ಕೋವಿಡ್‌ 19ಗೆ 80 ವರ್ಷ ಮೇಲ್ಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಕೋವಿಡ್‌ 19ಕ್ಕೆ ಸೂಕ್ತವಾದ ಚಿಕಿತ್ಸೆ ಇಲ್ಲದೇ ಇರುವ ಕಾರಣಕ್ಕೆ ಅವರು ಬದುಕುವ ಸಾಧ್ಯತೆ ತುಂಬಾ ಕಡಿಮೆ. ಈ ಕಾರಣಕ್ಕೆ ಯಾರನ್ನು ಆಸ್ಪತ್ರೆಗೆ ಸೇರಿಸಬೇಕು, ಯಾರನ್ನು ಸೇರಿಸಿಕೊಳ್ಳಬಾರದು ಎಂದು ಅಲ್ಲಿನ ಆಸ್ಪತ್ರೆಯ ವೈದ್ಯರು ನಿರ್ಧರಿಸುತ್ತಿದ್ದಾರೆ. ಹಲವು ದಿನಗಳಿಂದ 80 ವರ್ಷ ಕೆಳಗಿನ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿದೆ.

ಮುಖ್ಯವಾಗಿ ಇಟಲಿಯ ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ ತುಂಬಾ ಕಾಡುತ್ತಿದೆ. ಇದು ಪರೋಕ್ಷವಾಗಿ ಅಲ್ಲಿನ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದೆ. ಅಸೌಖ್ಯಗೊಂಡರೆ ಆಸ್ಪತ್ರೆಯಲ್ಲಿ ದಾಖಲಾಗುವುದು ತುಂಬಾ ಕಷ್ಟ. ಇಂತಹ ಮರಣಶಯ್ಯದ ನಿರೀಕ್ಷೆಯಲ್ಲಿದ್ದ ಇಟಲಿ ಆಸ್ಪತ್ರೆಗಳಲ್ಲಿ ಜಾಗದ ಕೊರತೆ ಸಾವಿನ ಕ್ಷಿಪ್ರ ಏರಿಕೆಗೆ ಕಾರಣವಾಗಿದೆ.

ಐಸಿಯುಗಳು ಭರ್ತಿ
ಬಹುತೇಕ ಆಸ್ಪತ್ರೆಗಳ ಐಸಿಯುಗಳು ಭರ್ತಿಯಾಗಿವೆ. ಆಸ್ಪತ್ರೆಗಳಲ್ಲಿ 240 ಐಸಿಯು ಬೆಡ್‌ಗಳಿದ್ದು, ಸುಮಾರು 2,500 ಮಂದಿ ಅಗತ್ಯವಾಗಿ ಐಸಿಯು ಚಿಕಿತ್ಸೆಯ ಅಗತ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಐಸಿಯುನಲ್ಲಿ ಚಿಕಿತ್ಸೆ ದೊರೆತರೆ ಮಾತ್ರ ಅವರು ಜೀವಿಸುವ ಸಾಧ್ಯತೆ ಹೆಚ್ಚು. ಆದರೆ ಸ್ಥಳಾವಕಾಶದ ಕೊರತೆಯಿಂದ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ.

ಅಲ್ಲಿನ ವಾರ್ಡ್‌ಗಳನ್ನು, ರೋಗಿಗಳ ವೈಟಿಂಗ್‌ ಹಾಲ್‌, ಆಪರೇಶನ್‌ ಥಿಯೇಟರ್‌, ರೆಸ್ಟ್‌ ರೂಮ್‌ಗಳನ್ನು ಐಸಿಯುಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಒಟ್ಟು 240 ಐಸಿಯು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ. ಖಾಲಿ ಜಾಗಗಳನ್ನು ಐಸಿಯುಗಳನ್ನಾಗಿ ಪರಿವರ್ತಿಸಲಾಗಿದ್ದರೂ, ಅಗತ್ಯ ಸಂಖ್ಯೆಯಲ್ಲಿ ವೆಂಟಿಲೇಟರ್‌ಗಳು, ಆಕ್ಸಿಜನ್‌ ಸಿಲಿಂಡರ್‌ಗಳು ಇಲ್ಲದೇ ಸಮಸ್ಯೆಯಾಗುತ್ತಿವೆ. ಲಭ್ಯವಿರುವ ಆ್ಯಂಬುಲೆನ್ಸ್‌ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲೂ ವೆಂಟಿಲೇಟರ್‌ನ ಸಮಸ್ಯೆ ಕಂಡುಬಂದಿವೆ.

Advertisement

ಕಣ್ಣಮುಂದೆಯೇ ವೆಂಟಿಲೇಟರ್‌ ಬದಲಾವಣೆ
ವೆಂಟಿಲೇಟರ್‌, ಆಕ್ಸಿಜನ್‌ ಸಿಲಿಂಡರ್‌ಗಳ ಸಮಸ್ಯೆಯಿಂದ ನರ್ಸ್‌ಗಳು ತೀವ್ರವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ವೆಂಟಿಲೇಟರ್‌ ತೆಗೆದರೆ ಸಾಯುತ್ತಾನೆ ಎಂಬ ಅರಿವಿದ್ದರೂ, ಒಬ್ಬನಿಂದ ವೆಂಟಿಲೇಟರ್‌ ತೆಗೆದು ಮತ್ತೂಂದು ಬದುಕಬಲ್ಲ ರೋಗಿಗೆ ಅಳವಡಿಸಲಾಗುತ್ತದೆ. ವೆಂಟಿಲೇಟರ್‌ ಪೂರೈಕೆ ನಿಂತ ಬಳಿಕ ಹೆಚ್ಚೆಂದರೆ 30 ನಿಮಿಷದಿಂದ 1 ಗಂಟೆಗಳ ಕಾಲ ಬದುಕಬಲ್ಲರು.

ಎಲ್ಲೆಲ್ಲೂ ಸೋಂಕಿತರೇ
ಕಾರಿಡಾರ್‌ಗಳು, ಆಸ್ಪತ್ರೆಗಳ ಮೆಟ್ಟಿಲುಗಳು, ವಾಹನಗಳನ್ನು ಪಾರ್ಕ್‌ ಮಾಡುವ ಜಾಗಗಳಲ್ಲಿ ಕೋವಿಡ್‌ 19 ರೋಗಿಗಳು ಜೀವನ್ಮರಣದ ವ್ಯವಸ್ಥೆಯಲ್ಲಿ ನರಳಾಡುತ್ತಿದ್ದಾರೆ. ಆಸ್ಪತೆಯಲ್ಲಿ ಸ್ಥಳದ ಅವಕಾಶ ಇಲ್ಲದಿರುವ ಅರಿವಿದ್ದರೂ ಜನ ಮಾತ್ರ ಆಸ್ಪತ್ರೆಯತ್ತ ಮುಖಮಾಡುತ್ತಿರುವುದು ಕಡಿಮೆಯಾಗಿಲ್ಲ.

ಈ ಸ್ಥಿತಿ ಬರದೇ ಇರಲಿ ಎಂದ ಕೇರಳದ ನರ್ಸ್‌
ಇಟಲಿಯ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಕೇರಳ ಮೂಲದ ನರ್ಸ್‌ ಒಬ್ಬರು ಅಲ್ಲಿನ ನರಕಯಾತನೆಯನ್ನು ವಾಟ್ಸ್‌ಆ್ಯಪ್‌ ವಾಯ್ಸ ಮೂಲಕ ಹಂಚಿಕೊಂಡಿದ್ದಾರೆ. ಐಸಿಯು, ವಾರ್ಡ್‌ಗಳಲ್ಲಿ ವೆಂಟಿಲೇಟರ್‌ ಅಳವಡಿಸುವ ಕರ್ತವ್ಯ ಅವರದ್ದು. ಬದುಕುವ ಸಾಧ್ಯತೆ ಕಡಿಮೆ ಇರುವ ಸೋಂಕಿತನಿಂದ ವೆಂಟಿಲೇಟರ್‌ ತೆಗೆಯುವಾಗ ಸೋಂಕಿತ ಸಾವಿನ ಭಯದಲ್ಲಿ ನೋಡುವ ನೋಟ ಯಾರಿಗೂ ಬೇಡ ಎಂದಿದ್ದಾರೆ. ಅಂತಹ ಕಠೊರ ಪರಿಸ್ಥಿತಿ ತಾಯ್ನಾಡಿಗೆ ಬರದೇ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next