Advertisement

ಬೆಳಗಾವಿ ಗಲಾಟೆಗೂ ಬಸ್ ಸಂಚಾರ ಸ್ಥಗಿತಕ್ಕೂ ಯಾವುದೇ ಸಂಬಂಧವಿಲ್ಲ: ಸ್ಪಷ್ಟನೆ

12:32 PM Dec 18, 2021 | Team Udayavani |

ಬೆಳಗಾವಿ: ಮಹಾರಾಷ್ಟ್ರ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದಲೇ ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿ ಗಲಾಟೆಗೂ ಬಸ್ ಸಂಚಾರ ಸ್ಥಗಿತಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವಾ.ಕ.ರ.ಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವೈ. ನಾಯಕ ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರ ಸಾರಿಗೆ ನೌಕರರು ವೇತನ ಹೆಚ್ಚಳಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಸಾರಿಗೆ ಬಸ್ ಗಳು ಕರ್ನಾಟಕಕ್ಕೆ ಕಾರ್ಯಾಚರಿಸುತ್ತಿಲ್ಲ‌. ಅದರಂತೆ ಕರ್ನಾಟಕದ ಬಸ್ ಗಳಿಗೂ ಮಹಾರಾಷ್ಟ್ರಕ್ಕೆ ಪ್ರವೇಶವಿಲ್ಲ. ಸುಮಾರು ಎರಡು ತಿಂಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ನಿಷೇಧಾಜ್ಞೆ ಮಧ್ಯೆಯೂ ಶಿವಾಜಿ ಮೂರ್ತಿಗೆ ಕ್ಷೀರಾಭಿಷೇಕ

ಬೆಳಗಾವಿ ಗಲಾಟೆಗೂ ಬಸ್ ಸ್ಥಗಿತಗೊಂಡಿರುವುದಕ್ಕೆ ಯಾವುದೇ ಸಂಬಂಧ ಇಲ್ಲ.‌ ಮಹಾರಾಷ್ಟ್ರದಲ್ಲಿ ಮುಷ್ಕರ ಮುಗಿದರೆ ಬಸ್ ಸಂಚಾರ ಆರಂಭವಾಗಲಿದೆ ಎಂದು ‘ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next