Advertisement
ಶಾಲಾ ಮಕ್ಕಳಿಗೆ ತನ್ನ ಭಾವಚಿತ್ರವಿರುವ ಪುಸ್ತಕ ನೀಡುವ ಮೂಲಕ ವಿವಾದಕ್ಕೀಡಾಗಿದ್ದರು. ಸುರತ್ಕಲ್‌ನಲ್ಲಿ ಹೊಸ ಮಾರುಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ಕೆಲವು ಮಾರಾಟಗಾರರಿಗೆ ಆದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅಯ್ಯಪ್ಪ ಸ್ವಾಮಿ ಭಕ್ತಿಗೀತೆಯ ಧಾಟಿಯಲ್ಲಿ ತನ್ನ ಸಾಧನೆಯನ್ನು ಪ್ರಚುರಪಡಿಸುವ ಮೂಲಕವೂ ಸುದ್ದಿಗೆ ಗ್ರಾಸವಾಗಿದ್ದರು. ಜತೆಗೆ ಸಾಮಾಜಿಕ ಜಾಲ ತಾಣಗಳಲ್ಲೂ ಬಾವಾ ಪರ ಹಾಗೂ ವಿರೋಧ ಚರ್ಚೆ ನಡೆಯುವಂತಾಯಿತು. ಹೀಗೆ ಹಲವು ವಿಚಾರಗಳ ಮಧ್ಯೆಯೇ ಅಭಿವೃದ್ಧಿ ವಿಚಾರದಲ್ಲಿ ಮೊದಿನ್ ಬಾವಾ ಯಾವುದೇ ರಾಜಿ ಮಾಡದೆ ಗುರುತಿಸಿಕೊಂಡಿರುವುದು ಉಲ್ಲೇಖನೀಯ.
Related Articles
Advertisement
ಇನ್ನು ಅಪಾಯಕಾರಿ ಪ್ರದೇಶದಲ್ಲಿ ಜನರು ವಾಸಿಸುತ್ತಿರುವುದರಿಂದ ಒಂದು ಅಗ್ನಿಶಾಮಕ ಠಾಣೆ, ಒಂದು ಆಸ್ಪತ್ರೆಯ ವ್ಯವಸ್ಥೆ ಇಲ್ಲಿಬೇಕಾಗಿದೆ. ಈ ಭಾಗದ ಜನತೆ ಓಡಾಟಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನೇ ನಂಬಿದ್ದಾರೆ. ಇಲ್ಲಿ ಬೈಪಾಸ್ ರಸ್ತೆ ಅಗತ್ಯ. ಈಗಾಗಲೇ ಯೋಜನೆ ರೂಪಿಸಿ ಸರಕಾರಕ್ಕೆ ನೀಡಲಾಗಿದೆ. ದೀರ್ಘಕಾಲೀನ ಪ್ರಕ್ರಿಯೆ ಇದಾಗಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನ ಖಚಿತ. ವಸತಿ ರಹಿತರಿಗೆ ಆಶ್ರಯ, ಅಂಬೇಡ್ಕರ್ ವಸತಿ ಯೋಜನೆ ನೀಡಿದ ಸರಕಾರ ನಮ್ಮದು. ವಸತಿ ರಹಿತರ ಕನಸು ನನಸು ಮಾಡಿದ್ದೇವೆ. ಆರೋಗ್ಯ ಭಾಗ್ಯಕ್ಕಾಗಿ ಮುಖ್ಯಮಂತ್ರಿಗಳ ಹೊಸ ಯೋಜನೆ ಸರ್ವರಿಗೂ ಲಭ್ಯವಾಗಲಿದೆ ಎನ್ನುತ್ತಾರೆ ಬಾವಾ.
ಮಂಗಳೂರಿನಿಂದ ಸುಮಾರು 14 ಕಿ.ಮೀ. ದೂರವಿರುವ ಸುರತ್ಕಲ್‌ನಲ್ಲಿ ವಲಯ ಕಚೇರಿ ಆಗಬೇಕೆಂಬಬಹು ದಿನದ ಆಸೆ ಇದೀಗ ಈಡೇರಿದೆ. 58 ಕೋ.ರೂ. ವೆಚ್ಚದಲ್ಲಿ ಸುರತ್ಕಲ್ -ಗಣೇಶಪುರ ಚತುಷ್ಪಥ, ಸೈಕ್ಲಿಂಗ್, ಉದ್ಯಾನವನ ಸಹಿತ ರಸ್ತೆ ರಾಜ್ಯದಲ್ಲೇ ಪ್ರಥಮ ಎನ್ನಬಹುದಾದ ಕಾಮಗಾರಿ. ಇದರ ಜತೆಗೆ ಕೈಗಾರಿಕಾ ಪ್ರದೇಶದಲ್ಲಿ 11 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ, ಪ್ರೀಮಿಯರ್ ಎಫ್‌ಐಆರ್ ಅನುದಾನದಲ್ಲಿ ಗುಡ್ಡೆಕೊಪ್ಲ ರಸ್ತೆ ವಿಸ್ತರಣೆ, ಎಂಆರ್‌ಪಿಎಲ್ ರಸ್ತೆ ವಿಸ್ತರಣೆ -ಕಾಂಕ್ರಿಟೀಕರಣ, 120 ಕೋ. ರೂ. ಸುರತ್ಕಲ್ ಮಾರುಕಟ್ಟೆ ಅಭಿವೃದ್ಧಿ, ಎರಡು ಕೆರೆಗಳ ಅಭಿವೃದ್ಧಿ ನಡೆದಿವೆ.
2.75 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ, ಗುಡ್ಡೆಕೊಪ್ಲ ರಸ್ತೆಗೆ 1.13 ಕೋ.ರೂ. ವೆಚ್ಚದಲ್ಲಿ ಶಿಲಾನ್ಯಾಸ, 40 ಲಕ್ಷ ರೂ.ವೆಚ್ಚದ ಒಳರಸ್ತೆ, ಉಳಾಯಿಬೆಟ್ಟು ರಸ್ತೆಗೆ 23 ಕೋ.ರೂ. ವ್ಯಯಿಸಿ ಕಾಂಕ್ರಿಟೀಕರಣ, ಈಶ್ವರಕಟ್ಟೆ ರಸ್ತೆಗೆ 5 ಕೋ.ರೂ., ಮುಚ್ಚಾರು -ಗಂಜಿಮಠ ರಸ್ತೆಗೆ 11 ಕೋ.ರೂ, ಮುತ್ತೂರು ಬಡಗಬೆಳ್ಳೂರು ತೂಗು ಸೇತುವೆ, ಕಿಂಡಿ ಅಣೆಕಟ್ಟು ಮೂಲಕ ನೀರಿನ ಯೋಜನೆ, ಕೆರೆ ಅಭಿವೃದ್ಧಿ, ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 7 ಕೋ.ರೂ.ಗೂ ಮಿಕ್ಕಿ ಹಣ ವಿತರಣೆ, ಮೊರಾರ್ಜಿ ದೇಸಾಯಿ ಶಾಲೆ ಆರಂಭ, ಗುರುಪುರದಲ್ಲಿ ಸರಕಾರಿ ಕಾಲೇಜು, ಮುತ್ತೂರಿನಲ್ಲಿ ಕಾಲೇಜು, ಪಿಲಿಕುಳ-ವಾಮಂಜೂರು ರಸ್ತೆಗೆ 4.9 ಕೋ.ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿಯಾಗುತ್ತಿದೆ. ಬೈಲಾರೆ ತೋಡು ನಿರ್ಮಾಣಕ್ಕೆ 5 ಕೋ.ರೂ, ಹೊಸಬೆಟ್ಟು ತಡೆಗೋಡೆ ರಚನೆಗೆ 5 ಕೋ.ರೂ., ಕಟ್ಲ ಚರಂಡಿ ನಿರ್ಮಾಣಕ್ಕೆ 2 ಕೋ.ರೂ, ಸುರತ್ಕಲ್ ವಲಯ ಕಚೇರಿಗೆ 2.25 ಕೋ.ರೂ, ಮೀನಕಳಿಯದಲ್ಲಿ ಕಡಲ್ಕೊರೆತ ತಡೆಗೆ 4.70 ಕೋ.ರೂ. ಮತ್ತಿತರ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ಹಂತದಲ್ಲಿವೆ ಎನ್ನುತ್ತಾರೆ ಮೊಯಿದಿನ್ ಬಾವಾ.
ವಿಶೇಷ ಯೋಜನೆಗಳುಕೋಸ್ಟ್ ಗಾರ್ಡ್ ಬೃಹತ್ ತರಬೇತಿ ಹಾಗೂ ಕೇಂದ್ರ 1,020 ಕೋ.ರೂ. ವೆಚ್ಚದಲ್ಲಿ ಬೈಕಂಪಾಡಿ ಸಮೀಪ ತಲೆ ಎತ್ತಲಿದೆ. ವಾಹನ ದಟ್ಟಣೆ ಕಡಿಮೆ ಮಾಡಲು ಬೈಪಾಸ್ ರಸ್ತೆ, ಹೆದ್ದಾರಿ 66ರನ್ನು ಎನ್ ಐಟಿಕೆ ಬಳಿಕ ನೇರವಾಗಿ ಹೆದ್ದಾರಿ 169 (ಬೆಂಗಳೂರು ಹೆದ್ದಾರಿಗೆ) ಸಂಪರ್ಕ, ಬೈಕಂಪಾಡಿ ವಿಮಾನ ನಿಲ್ದಾಣ ರಸ್ತೆ, ಬೃಹತ್ ಕ್ರೀಡಾಂಗಣ, ಉದ್ಯಾನವನ, ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ ಯೋಜನೆ. ಫಲ್ಗುಣಿ ನದಿಯಲ್ಲಿ ಬೋಟಿಂಗ್‌ಗೆ ಅವಕಾಶವಿದೆ. ಆದರೆ ಇದರ ಸದುಪಯೋಗ ಪಡಿಸಿಕೊಳ್ಳುವ ಭಾಗ್ಯ ಕೂಡಿ ಬಂದಿಲ್ಲ. ಆದರೆ ಇದಕ್ಕೆ ಬೇಕಾದ ವ್ಯವಸ್ಥೆ ಕೈಗೊಳ್ಳಲಾಗಿದೆ ಎನ್ನುತ್ತಾರೆ ಶಾಸಕ ಮೊಯಿದಿನ್ ಬಾವಾ. ಆಗಬೇಕಾದ್ದು ಇನ್ನೂ ಇದೆ
ಕುಳಾಯಿ ಕಿರು ಬಂದರು ಕಳೆದ ಹತ್ತು ಹಲವು ವರ್ಷಗಳಿಂದ ಆಗುತ್ತದೆ ಎಂಬ ಭರವಸೆ ಇದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಾಗಲೇ ಮಂಗಳೂರಿನಲ್ಲಿ ದೋಣಿಗಳನ್ನಿಡಲು ಜಾಗದ ಕೊರತೆ ಎದುರಾಗಿದ್ದು, ಕುಳಾಯಿ ಜೆಟ್ಟಿಯ ನಿರ್ಮಾಣ ಅಗತ್ಯವಾಗಿದೆ. ಇದರ ಜತೆಗೆ ಮೀನುಗಳ ಸಾಗಾಟಕ್ಕೆ ಮೀನುಗಾರಿಕಾ ರಸ್ತೆಯ ಆವಶ್ಯಕತೆಯಿದೆ. ಗುರುಪುರದಲ್ಲಿ ನಾಡ ಕಚೇರಿ ಬೇಡಿಕೆ ಹಲವು ವರ್ಷಗಳ ಹಿಂದಿನದಾಗಿದೆ. ಇನ್ನು ಎಪಿಎಂಸಿ ಬಹುತೇಕ ಪಳೆಯುಳಿಕೆಯಂತಿದ್ದು, ಇದರ ಅಭಿವೃದ್ಧಿಗೆ ಸಂಕಲ್ಪ ತೊಡಬೇಕಿದೆ. ರೈತ ಕೇಂದ್ರಗಳು ಬಲಗೊಳ್ಳಬೇಕಿವೆ. ನೀರುಮಾರ್ಗ, ಪಡು, ಅದ್ಯಪಾಡಿ ಪ್ರದೇಶದಲ್ಲಿ ಸರಕಾರಿ ಬಸ್‌ನ ಬೇಡಿಕೆಯಿದ್ದು ಇನ್ನೂ ಈಡೇರಿಲ್ಲ. ಲಕ್ಷ್ಮೀನಾರಾಯಣ ರಾವ್