Advertisement

ರಣಜಿ ಮಾದರಿಯಲ್ಲಿ ಬದಲಾವಣೆ ಇಲ್ಲ

11:20 PM May 27, 2020 | mahesh |

ಹೊಸದಿಲ್ಲಿ: ರಣಜಿ ಟ್ರೋಫಿ ಕ್ರಿಕೆಟ್‌ ಮಾದರಿಯಲ್ಲಿ ಬದಲಾವಣೆ ಸಂಭವಿಸಲಿದೆ ಎಂಬ ಮಾಧ್ಯಮಗಳ ವರದಿಯನ್ನು ಬಿಸಿಸಿಐ ಕ್ರಿಕೆಟ್‌ ಆಪರೇಶನ್ಸ್‌ನ ಜಿಎಂ ಸಾಬಾ ಕರೀಂ ತಳ್ಳಿಹಾಕಿದ್ದಾರೆ.

Advertisement

ಈಗಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ 4 ಗುಂಪುಗಳ ಮಾದರಿಯಲ್ಲಿ ನಡೆಯುತ್ತದೆ. ಎ ಮತ್ತು ಬಿ ವಿಭಾಗಗಳಲ್ಲಿ ತಲಾ 9 ತಂಡ, ಸಿ ವಿಭಾಗದಲ್ಲಿ 10 ತಂಡ ಹಾಗೂ ಪ್ಲೇಟ್‌ ಗ್ರೂಪ್‌ 10 ತಂಡಗಳನ್ನು ಹೊಂದಿರುತ್ತದೆ. ಎ ಮತ್ತು ಬಿ ವಿಭಾಗಗಳಿಂದ 5 ತಂಡ, ಸಿ ವಿಭಾಗದಿಂದ 2 ತಂಡ ಹಾಗೂ ಪ್ಲೇಟ್‌ ವಿಭಾಗದಿಂದ ಒಂದು ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುತ್ತದೆ. ಇದರಲ್ಲಿ ಎ, ಬಿ ಮತ್ತು ಸಿ ಎಲೈಟ್‌ ಗ್ರೂಪ್‌ಗ್ಳಾಗಿವೆ.ಆದರೆ ಕೆಲವು ಬಲಿಷ್ಠ ತಂಡಗಳ ನಾಕೌಟ್‌ ಪ್ರವೇಶಕ್ಕೆ ಈ ಮಾದರಿ ಅನನುಕೂಲವಾಗಿ ಪರಿಣಮಿಸಿರುವುದು ತೀವ್ರ ಅಸಮಾ ಧಾನಕ್ಕೆ ಕಾರಣವಾಗಿದೆ.

ಎಲೈಟ್‌ “ಎ’, “ಬಿ’ ಮತ್ತು “ಸಿ’ಗಳನ್ನು ಮೂರರ ಬದಲು 5 ಗುಂಪುಗಳಾಗಿ ವಿಭಜಿ ಸುವುದು; ಪ್ರತೀ ಎಲೈಟ್‌ ಗುಂಪಿನಲ್ಲಿ ತಲಾ 6 ತಂಡಗಳು, ಪ್ಲೇಟ್‌ ವಿಭಾಗದಲ್ಲಿ 8 ತಂಡಗಳಿರುವ ಮಾದರಿಯನ್ನು ರೂಪಿಸು ವುದು ಎಂದು ವರದಿಯಾಗಿತ್ತು. ಹಿಂದಿನ ಋತುವಿನ ಅಗ್ರ 2 ತಂಡಗಳನ್ನು ಎಲೈಟ್‌ ಇ ವಿಭಾಗಕ್ಕೆ ಭಡ್ತಿ ಕೊಡುವುದು ಕೂಡ ಈ ಬದಲಾವಣೆಯ ಪ್ರಮುಖ ಅಂಶವಾಗಿತ್ತು.

ಎಲೈಟ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆದ 5 ತಂಡಗಳಿಗೆ ನೇರ ಕ್ವಾರ್ಟರ್‌ ಫೈನಲ್‌ ಪ್ರವೇಶ ನೀಡಿ, ಉಳಿದ 3 ತಂಡಗಳನ್ನು ಪ್ಲೇ-ಆಫ್ ಮಾದರಿ ಯಲ್ಲಿ ಆರಿಸುವುದೆಂದಾಗಿತ್ತು. ಪ್ಲೇ- ಆಫ್ನಲ್ಲಿ 6 ತಂಡಗಳ ಮುಖಾಮುಖಿ ಏರ್ಪಡಿಸಲು ತೀರ್ಮಾ ನಿಸಲಾಗಿತ್ತು. ಎಲೈಟ್‌ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ತಂಡಗಳು (5) ಹಾಗೂ ಪ್ಲೇಟ್‌ ವಿಭಾಗದ ಅಗ್ರಸ್ಥಾನಿ ತಂಡ ವನ್ನೊಳಗೊಂಡಂತೆ ಈ ಹಣಾಹಣಿ ನಡೆಸುವುದೆಂದಿತ್ತು. ಇಂಥ ಯೋಜನೆ ಇಲ್ಲ ಎಂದಿದ್ದಾರೆ ಸಾಬಾ ಕರೀಂ.

Advertisement

Udayavani is now on Telegram. Click here to join our channel and stay updated with the latest news.

Next