Advertisement

Small savings ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಇಲ್ಲ

12:59 AM Jun 29, 2024 | Team Udayavani |

ಹೊಸದಿಲ್ಲಿ: ಪ್ರಸಕ್ತ ವಿತ್ತ ವರ್ಷದ ಜು.1ರಿಂದ ಆರಂಭವಾಗುವ 2ನೇ ತ್ತೈಮಾಸಿಕದಲ್ಲಿ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಕೇಂದ್ರ ಸರಕಾರ ನಿರ್ಧರಿಸಿದೆ. “ಜು.1ರಿಂದ ಸೆ.30ರ ವರೆಗಿನ 2ನೇ ತ್ತೈಮಾಸಿಕದಲ್ಲಿ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮೊದಲ ತ್ತೈಮಾಸಿಕದಲ್ಲೂ ಬಡ್ಡಿ ದರ ಪರಿಷ್ಕರಣೆ ಮಾಡಿರಲಿಲ್ಲ’ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸುಕನ್ಯಾ ಸಮೃದ್ಧಿ ಠೇವಣಿ ಮೇಲಿನ ಬಡ್ಡಿದರ ಶೇ.8.2ರಷ್ಟು, ಪಿಪಿಎಫ್ ಮತ್ತು ಅಂಚೆ ಕಚೇರಿಯಲ್ಲಿನ ಉಳಿತಾಯ ಖಾತೆಯ ಬಡ್ಡಿದರ ಶೇ.7.1, ಕಿಸಾನ್‌ ವಿಕಾಸ್‌ ಪತ್ರಕ್ಕೆ ಶೇ.7.5 ಬಡ್ಡಿದರ ನಿಗದಿಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next