Advertisement

ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಬದಲಾವಣೆಯಿಲ್ಲ

11:18 PM Jul 12, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವದಂತಿಗೆ ತೆರೆಬಿದ್ದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಧ್ಯಪ್ರದೇಶ ಭೇಟಿ ವೇಳೆ ನಡೆದ ಸಭೆಯಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣುದತ್ತ ಶರ್ಮ ಅವರೇ ತಮ್ಮ ಸ್ಥಾನದಲ್ಲಿ ಮುಂದು­ವರಿಯಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯಾಧ್ಯಕ್ಷ ವಿಷ್ಣುದತ್ತ ಮತ್ತು ಶಿವರಾಜ್‌ ಸಿಂಗ್‌ ನಡುವೆ ಭಿನ್ನಮತ ತೀವ್ರವಾಗಿರುವುದರಿಂದ ಸ್ಥಾನಗಳಲ್ಲಿ ಬದಲಾವಣೆಯಾಗಬಹುದು ಎಂಬ ವದಂತಿ ಹಬ್ಬಿತ್ತು.

Advertisement

ಅಮಿತ್‌ ಶಾ ಅವರು ಮಂಗಳವಾರ ರಾತ್ರಿ ಭೋಪಾಲ್‌ಗೆ ತೆರಳಿದ್ದರು. ಪಕ್ಷದ ಪ್ರಮುಖರೊಂದಿಗೆ ಅವರು ಸುಮಾರು ಎರಡೂ­ವರೆ ಗಂಟೆ ಸಭೆ ಸಭೆ ನಡೆಸಿದರು. ಎಲ್ಲರೂ ಒಗ್ಗಟ್ಟಾಗಿ ಮುಂಬರುವ ವಿಧಾನಸಭೆ ಚುನಾವಣೆ ಎದುರಿಸುವಂತೆ, “ವಿಜಯ ಸಂಕಲ್ಪ ಅಭಿಯಾನ’ಕ್ಕೆ ಸಕಲ ಸಿದ್ಧತೆ ನಡೆಸುವಂತೆ ಹಾಗೂ ಪ್ರಚಾರದಲ್ಲಿ ತೀವ್ರವಾಗಿ ತೊಡಗಿಕೊಳ್ಳುವಂತೆ ಇದೇ ವೇಳೆ ಮಧ್ಯಪ್ರದೇಶ ಬಿಜೆಪಿ ಘಟಕಕ್ಕೆ ಅವರು ಸೂಚಿಸಿದರು.

ಚುನಾವಣಾ ತಯಾರಿ ಕುರಿತು ಪ್ರತಿನಿತ್ಯದ ಆಧಾರದಲ್ಲಿ ಸ್ವತಃ ಅಮಿತ್‌ ಶಾ ಅವರೇ ಪರಿಶೀಲನೆ ನಡೆಸಲಿದ್ದಾರೆ. ಸಭೆಯಲ್ಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ದತ್‌ ಶರ್ಮ, ರಾಜ್ಯ ಗೃಹ ಸಚಿವ ನರೋತ್ತಮ್‌ ಮಿಶ್ರಾ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯ, ನಾಯಕರಾದ ಭೂಪೇಂದ್ರ ಯಾದವ್‌, ಅಶ್ವಿ‌ನಿ ವೈಷ್ಣವ್‌ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next