Advertisement

ಅಸಹಜ ಅತ್ಯಾಚಾರ ಪ್ರಕರಣ ದಾಖಲಿಸಲು ಅವಕಾಶವೇ ಇಲ್ಲ

10:14 AM Oct 04, 2018 | Team Udayavani |

ಹೊಸದಿಲ್ಲಿ: ಮಹಿಳೆಯಿಂದ ಮಹಿಳೆ ಅಥವಾ ಪುರುಷನಿಂದ ಪುರುಷನ ಮೇಲೆ ಅತ್ಯಾಚಾರ ಪ್ರಕರಣ ನಡೆದರೆ ಈಗ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಹೊಸದಿಲ್ಲಿಯಲ್ಲಿ ಇಂಥ ವಿಶೇಷ ಪ್ರಕರಣ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್‌ ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿ ಭಾರತೀಯ ದಂಡ ಸಂಹಿತೆಯ 377ನೇ ವಿಧಿ ರದ್ದು ಮಾಡಿದ ಬಳಿಕ ಈ ಪ್ರಕರಣ ವರದಿಯಾಗಿದೆ. 

Advertisement

ಹೊಸ ಪ್ರಕರಣದಲ್ಲಿ ಈಶಾನ್ಯ ರಾಜ್ಯದ 25 ವರ್ಷದ ಯುವತಿ, ತನ್ನ ಮೇಲೆ 19 ವರ್ಷದ ಮತ್ತೂಬ್ಬ ಯುವತಿ ಅಸಹ ಜವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೊಸದಿಲ್ಲಿಯ ಸೀಮಾಪುರಿ ಠಾಣೆ ಪೊಲೀಸರಿಗೆ ದೂರು ನೀಡಿದರೂ ಸ್ವೀಕರಿಸಲು ಒಪ್ಪಲಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ “ನ್ಯೂಸ್‌ 18′ ವರದಿ ಮಾಡಿದೆ. ಈ ವರ್ಷದ ಮಾರ್ಚ್‌ನಿಂದ ಕಿರುಕುಳ ಆರಂಭವಾಗಿತ್ತು. ಜತೆಗೆ 2 ತಿಂಗಳ ಕಾಲ ಬಂಧನದಲ್ಲಿ ಇರಿಸಲಾಗಿತ್ತು. ಬಳಿಕ ರೋಹಿತ್‌ ಮತ್ತು ರಾಹುಲ್‌ ಎಂಬವರು ತನ್ನ ಮೇಲೆ ಅತ್ಯಾಚಾರ ಎಸಗಿದರು. ಅದನ್ನು ವಿಡಿಯೋ ಚಿತ್ರೀಕರಣ ನಡೆಸಿ ಬ್ಲಾಕ್‌ವೆುàಲ್‌ ನಡೆಸಲಾಗುತ್ತಿತ್ತು ಎಂದು ದೂರಿದ್ದಾರೆ. ಮತ್ತೂಬ್ಬ ಯುವತಿ  ಸೆಕ್ಸ್‌ ಟಾಯ್‌ ಮೂಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ. ಜತೆಗೆ ಗುಂಪು ಸೆಕ್ಸ್‌ ನಡೆಸಲೂ ಒತ್ತಡ ಹೇರಿದ್ದಾರೆ.  ಸಂಘಟನೆಯೊಂದರ ನೆರವಿನಿಂದ ಪಾರಾಗಿರುವುದಾಗಿ ಯುವತಿ ಹೇಳಿಕೊಂಡಿದ್ದಾರೆ. 

ಮ್ಯಾಜಿಸ್ಟ್ರೇಟ್‌ಗೆ ಈ ಮಾಹಿತಿ ನೀಡಬಾರದು ಎಂದು ಪೊಲೀಸರು ಹೇಳಿದ್ದರು. ಇದರ ಹೊರತಾಗಿಯೂ ಸೆ.26ರಂದು ಕಾರ್ಕದೂಮಾ ಮ್ಯಾಜಿಸ್ಟ್ರೇಟ್‌ ಮುಂಭಾಗದಲ್ಲಿ ಹೇಳಿಕೆ ದಾಖಲಿಸಿರುವುದಾಗಿ ಯುವತಿ ಹೇಳಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಎಂಬಾತನನ್ನು ಬಂಧಿಸಲಾಗಿದೆ. ಮತ್ತೂಬ್ಬ ಪರಾರಿಯಾಗಿದ್ದಾನೆ.

 ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ನೊಂದ ಮಹಿಳೆ ದೂರು ನೀಡಿದರೂ, ಕಾನೂನಾತ್ಮಕವಾಗಿ ಮುಂದುವರಿಯಲು ತೊಂದರೆ ಎದುರಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ. ಸೀಮಾಪುರಿ ಠಾಣೆ ಅಧಿಕಾರಿ ಮಾತನಾಡಿ ಯುವತಿ ನೀಡಿದ ಲಿಖೀತ ಹೇಳಿಕೆ ಆಧಾರದಲ್ಲಿ ಎಫ್ಐಆರ್‌ ದಾಖಲಿಸಿಕೊಂಡಿದ್ದೇವೆ ಎಂದಿದ್ದಾರೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ ಎಂದಿದ್ದಾರೆ. ಮತ್ತೂಬ್ಬ ಮಹಿಳೆ ವಿರುದ್ಧ ಕೇಸು ದಾಖಲಿಸಲು ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ತೊಂದರೆಯಾಗಿದೆ ಎಂದಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next