Advertisement

ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಇಲ್ಲ: ರಾಜ್ಯ ಸರಕಾರ

12:45 PM Aug 06, 2020 | mahesh |

ಮುಂಬಯಿ: ಬೀದಿ ಬದಿ ವ್ಯಾಪಾರಿಗಳಿಗೆ ಈಗಿನಂತೆ ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರ ಬಾಂಬೆ ಹೈಕೋರ್ಟ್‌ ಮುಂದೆ ತನ್ನ ನಿಲುವನ್ನು ಪುನರುಚ್ಚರಿಸಿದೆ. ಸಾಮಾಜಿಕ ಕಾರ್ಯಕರ್ತ ಮನೋಜ್‌ ಓಸ್ವಾಲ್‌ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಉತ್ಪನ್ನಗಳು ಅಥವಾ ಆಹಾರವನ್ನು ಮಾರಾಟ ಮಾಡುವುದರ ಮೇಲೆ ಸಂಪೂರ್ಣ ನಿಷೇಧ ಹೇರುವುದು ಕಾನೂನುಬಾಹಿರ ಅಥವಾ ಅಸಂವಿಧಾನಿಕವಾಗಿದೆ. ಇದು ಜನರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ತಿಳಿಸಿದೆ.

Advertisement

ಇದಕ್ಕೆ ಉತ್ತರಿಸಿದ ರಾಜ್ಯ ಸರಕಾರ, ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಬೀದಿ ಬದಿ ವ್ಯಾಪಾರಿಗಳಿಗೆ ಕಂಟೈನ್‌ಮೆಂಟ್‌ ವಲಯಗಳು ಮತ್ತು ಲಾಕ್‌ಡೌನ್‌ ಹೇರಲಾಗುವ ಪ್ರದೇಶಗಳಲ್ಲಿ ವ್ಯವಹಾರವನ್ನು ಪುನರಾರಂಭಿಸಲು ಅವಕಾಶ ನೀಡುವ ಬಗ್ಗೆ ಯೋಚಿಸುವ ಸಂದರ್ಭ ಇದಲ್ಲ ಎಂದು ಹೇಳಿದೆ. ಈಗಿನಂತೆ, ಲಾಕ್‌ಡೌನ್‌ ಪ್ರದೇಶಗಳು ಮತ್ತು ಕಂಟೈನ್‌ಮೆಂಟ್‌ ವಲಯಗಳ ಹೊರಗಿನ ಇತರ ಪ್ರದೇಶಗಳಲ್ಲಿ ವ್ಯವಹಾರಗಳನ್ನು ಪುನರಾರಂಭಿಸಲು ಅವರಿಗೆ ಅನುಮತಿಸಲಾಗುವುದಿಲ್ಲ ಎಂದು ಪರಿಹಾರ ಮತ್ತು ಪುನರ್ವಸತಿ ಇಲಾಖೆಯ ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ಕಿಶೋರ್‌ ನಿಂಬಲ್ಕರ್‌ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಈ ವ್ಯವಹಾರಗಳ ನಡವಳಿಕೆಗಾಗಿ ಹೊರಡಿಸಲಾದ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿ ಸಿಕೊಳ್ಳಲು ಪೊಲೀಸ್‌ ಮತ್ತು ಬಿಎಂಸಿ ಸಿಬಂದಿಗಳು ಸೇರಿದಂತೆ ಬೃಹತ್‌ ಮಾನವಶಕ್ತಿಯ ಅಗತ್ಯವಿರುತ್ತದೆ. ಆದರೆ ಈ ಎಲ್ಲ ಏಜೆನ್ಸಿಗಳು ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೆಚ್ಚಿನ ಹೊರೆಯಿಂದ ಈಗಾಗಲೇ ದಣಿದಿವೆ ಎಂದು ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳು ಹೆಚ್ಚಿನ ಸೋಂಕು ಹರಡಲು ಕಾರಣವಾಗಬಹುದು ಎಂಬ ಬಗ್ಗೆ ಯಾವುದೇ ಸಂಶೋಧನೆಗಳಿಂದ ತಿಳಿದು ಬಂದಿಲ್ಲ. ಅಥವಾ ವಿಜ್ಞಾನಿಗಳು ಇದರ ಬಗ್ಗೆ ತಿಳಿಸಿಲ್ಲ. ಇವರು ಬಡವರಾಗಿರುವುದರಿಂದ, ಅವರನ್ನು ಅಧಿಕ ಸೋಂಕು ಹರಡುವವರು ಎಂಬ ದೃಷ್ಟಿಯಿಂದ ನೋಡಲಾಗುತ್ತಿದೆ ಎಂದು ಮನೋಜ್‌ ಓಸ್ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next