Advertisement

ತಂಗೋಡದಲ್ಲಿ ರುದ್ರಭೂಮಿಯೇ ಇಲ್ಲ

02:06 PM Jan 19, 2020 | Suhan S |

ಶಿರಹಟ್ಟಿ: ತಾಲೂಕಿನ ತಂಗೋಡ ಗ್ರಾಮದಲ್ಲಿ 1500
ಜನಸಂಖ್ಯೆಯಿದ್ದು, ಇಲ್ಲಿಯವರೆಗೆ ಗ್ರಾಮಕ್ಕೆ ಶವ ಸಂಸ್ಕಾರ ಮಾಡಲು
ಭೂಮಿಯೇ ಇಲ್ಲ. ತಂಗೋಡ ಗ್ರಾಮದಲ್ಲಿ ಯಾರಾದರು
ಸತ್ತರೆ ಮಾತ್ರ ಅವರಿಗೆ ಸ್ಮಶಾನದ ನೆನಪಾಗುತ್ತದೆ. ಶವ ಸಂಸ್ಕಾರ
ಮಾಡಲು ಹಳ್ಳದ ದಂಡೆಯೇ ಅವಲಂಬಿಸಬೇಕಾಗಿದೆ. ಇನ್ನು
ಶವವನ್ನು ಸುಡಬೇಕಾದಲ್ಲಿ ಹಳ್ಳದಲ್ಲಿಯೇ ಕಾರ್ಯವನ್ನು
ಪೂರೈಸುವ ಅನಿವಾರ್ಯತೆಯಿದೆ. ಹಳ್ಳ ಬಂದರೆ ಶವ ಸಂಸ್ಕಾರ
ಮಾಡಲು ಜಾಗವೇ ಇಲ್ಲದಾಗಿ ಪರದಾಡುವ ಪರಿಸ್ಥಿತಿಯಿದೆ.

Advertisement

ರೈತರ ಕೈಕಾಲು ಹಿಡಿಯುವ ಪರಿಸ್ಥಿತಿ!: ಗ್ರಾಮದಲ್ಲಿ ಹಳ್ಳ
ಬಂದರೆ ಶವ ಸಂಸ್ಕಾರ ಮಾಡಲು ಊರಿನ ಪಕ್ಕದಲ್ಲಿರುವ
ರೈತರ ಕೈಕಾಲು ಹಿಡಿದಿಕೊಂಡು ಅವರ ಜಮೀನಿನಲ್ಲಿ ಶವಸಂಸ್ಕಾರ
ಮಾಡಲಾಗುತ್ತಿದೆ. ಕೆಲ ರೈತರು ಶವ ಸಂಸ್ಕಾರ ಮಾಡಲು ಬಂದವರು
ಹೊಲದಲ್ಲಿ ಅಡ್ಡಾದಿಡಿ ಓಡಾಡಿ ಬೆಳೆ ನಾಶ ಮಾಡುತ್ತಾರೆಂದು
ಒಪ್ಪಿಗೆಯೇ ಸೂಚಿಸುವುದಿಲ್ಲ. ಇಂತಹ ಪರಿಸ್ಥಿತಿಯಿದ್ದರೂ
ಸಂಬಂಧಿದವರು ಮುಖ ಜಾಣತನ ಪ್ರದರ್ಶಿಸುತ್ತಿದ್ದಾರೆ.

ತಂಗೋಡ ಗ್ರಾಮದಲ್ಲಿ ಈಗಾಗಲೇ ರುದ್ರಭೂಮಿಗಾಗಿ
ನಿವೇಶನ ಒದಗಿಸುವುದಕ್ಕಾಗಿ ಮನವರಿಕೆ
ಮಾಡಿಕೊಡಲಾಗಿದ್ದು, ಕೆಲವರು ನಿವೇಶನ ಒದಗಿಸಲು
ಮುಂದಾಗಿದ್ದಾರೆ. ಮುಂದಿನ ವಾರದಲ್ಲಿ ಗ್ರಾಪಂನ ಸಾಮಾನ್ಯ
ಸಭೆ ಕರೆಯಲಾಗುತ್ತಿದ್ದು, ಸಭೆಯಲ್ಲಿ ಚರ್ಚಿಸಿ ನಂತರ ಅಂತಿಮ
ತೀರ್ಮಾನ ಮಾಡಲಾಗುವುದು.
ಶ್ರೀವಿದ್ಯಾ ಕಂಪಲಿ, ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next