Advertisement

ಖಾತೆಗೆ ಅನ್ಯರಿಂದ ಹಣ ಜಮೆ ಇಲ್ಲ: ಎಸ್‌ಬಿಐ

04:12 PM Sep 12, 2018 | Harsha Rao |

ಮುಂಬಯಿ: ಹಣದ ಕಳ್ಳ ವ್ಯವಹಾರಗಳನ್ನು ತಪ್ಪಿಸುವ ಸಂಬಂಧ, ಸದ್ಯದಲ್ಲೇ ತನ್ನ ನಿಯಮಗಳಲ್ಲಿ ಬದಲಾವಣೆ ತರುವುದಾಗಿ ಘೋಷಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಬ್ಯಾಂಕ್‌ಗಳ ಕೌಂಟರ್‌ಗಳಲ್ಲಿ ಓರ್ವರ ಖಾತೆಗೆ ಮತ್ತೂಬ್ಬರು ಹಣ ತುಂಬಬಹುದಾದ ಸೌಲಭ್ಯವನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.

Advertisement

ಹೊಸ ನಿಯಮದಲ್ಲಿ, ನಿರ್ದಿಷ್ಟ ಖಾತೆದಾರನ ಖಾತೆಗೆ ಅವರ ಕುಟುಂಬದ ಸದಸ್ಯರಿಗೂ ಹಣ ತುಂಬಲು ಅವಕಾಶ ಇರುವುದಿಲ್ಲ ಎಂದು ಬ್ಯಾಂಕ್‌ ಸ್ಪಷ್ಟಪಡಿಸಿದೆ. 2013ರಲ್ಲಿ ಕೇಂದ್ರ ಸರಕಾರ ಕೈಗೊಂಡ ಅಪನಗದೀಕರಣದ ಅನಂತರ ಹಲವಾರು ಖಾತೆಗಳಲ್ಲಿ ಅನ್ಯರ ಹಣ ಹರಿದುಬಂದಿದ್ದನ್ನು ಗಮನಿಸಿ ಈ ಕ್ರಮ ಕೈಗೊಂಡಿ ರುವುದಾಗಿ ಎಸ್‌ಬಿಐ ತಿಳಿಸಿದೆ. ಆದರೆ, ಬ್ಯಾಂಕ್‌ನ ಈ  ನಿರ್ಧಾರ ದಿಂದ ಲಕ್ಷಾಂತರ  ಗ್ರಾಹಕರಿಗೆ ತೊಂದರೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next