Advertisement

“ರಕ್ತದಾನಕ್ಕಿಂತ ಶ್ರೇಷ್ಠ ದಾನ ಬೇರೊಂದಿಲ್ಲ’

04:48 PM Apr 27, 2019 | mahesh |

ಮಂಗಳೂರು: ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೂಂದಿಲ್ಲ ಹಾಗೂ ಇನ್ನೋರ್ವ ವ್ಯಕ್ತಿಯ ಜೀವ ಉಳಿಸಲು ಮಾಡುವ ಈ ಪುಣ್ಯ ಕಾರ್ಯವನ್ನು ಸರಿಗಟ್ಟುವುದು ಯಾವುದರಿಂದಲೂ ಅಸಾಧ್ಯ ಎಂದು ಪುಂಜಾಲಕಟ್ಟೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್‌ ಕುಳಮರ್ವ ಹೇಳಿದರು.

Advertisement

ಜೇಸಿಐ ಮಂಗಳೂರು ಸ್ಫೂರ್ತಿ ಪ್ರಾಯೋಜಕತ್ವದಲ್ಲಿ ಕುಡಾಳ್‌ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಕುಡಾಳ್‌ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಮಹಿಳಾ ಸಂಘ, ಬೆಳ್ತಂಗಡಿ ವಲಯ ಹಾಗೂ ಎನ್‌.ಎಸ್‌.ಎಸ್‌. ಘಟಕ, ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಮತ್ತು ಮಂಗಳೂರಿನ ದ.ಕ. ಜಿಲ್ಲಾ ವೆನಾÉಕ್‌ ಆಸ್ಪತ್ರೆಯ ಸಹಯೋಗದೊಂದಿಗೆ ಶ್ರೀ ಪೂರ್ಣಾನಂದ ಸ್ವಾಮೀಜಿಯವರ ಆರಾಧನ ಮಹೋತ್ಸವದ ಅಂಗವಾಗಿ ಪುಂಜಾಲಕಟ್ಟೆಯ ನಂದಗೋಕುಲ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ವೆನಾಕ್‌ ಆಸ್ಪತ್ರೆಯ ವೈದ್ಯ ಡಾ| ಯಶವಂತ್‌ ಮಾತನಾಡಿ, ರಕ್ತದಾನದ ಮಹತ್ವ ಹಾಗೂ ರಕ್ತದಾನ ಯಾರೆಲ್ಲ ಮಾಡಬಹುದು ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಬಡ ಜನರಿಗೆ ತಲುಪುತ್ತದೆ
ಮುಖ್ಯ ಅತಿಥಿಯಾಗಿದ್ದ ಕುಡಾಳ್‌ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡೆಚ್ಚಾರು ಗಣಪತಿ ಶೆಣೈ ಮಾತನಾಡಿ, ಶ್ರೇಷ್ಠ ಸಮಾಜ ಸೇವಾ ಕಾರ್ಯವಾದ ರಕ್ತದಾನವು ಹಲವು ಜೀವಗಳನ್ನು ಉಳಿಸುವಂತಹ ಪುಣ್ಯ ಕಾರ್ಯ, ಮಾತ್ರವಲ್ಲದೆ ಸರಕಾರಿ ಆಸ್ಪತ್ರೆಗೆ ರಕ್ತದಾನ ಮಾಡುವುದರಿಂದ ಅದು ನಿಜವಾದ ಫಲಾನುಭವಿಗಳಾದ ಬಡ ಜನರಿಗೆ ತಲುಪುತ್ತದೆ ಎಂದರು.
ಹಿರಿಯರಾದ ಮಂಗಳೂರಿನ ಸಂಜೀವ ಸಾಮಂತ್‌ ಮರೋಳಿ, ಜೇಸಿಐ ಮಂಗಳೂರು ಸ್ಫೂರ್ತಿಯ ಆಡಳಿತ ವಿಭಾಗದ ಉಪಾಧ್ಯಕ್ಷೆ ಡಾ| ದೀಪ್ತಿ ನಾಯಕ್‌, ಮಾಲತಿ, ಮಮತಾ ಉಪಸ್ಥಿತರಿದ್ದರು.

ಪುಂಜಾಲಕಟ್ಟೆಯ ಪೊಲೀಸ್‌ ಠಾಣಾಧಿಕಾರಿ ಹಾಗೂ ಸಿಬಂದಿ ವರ್ಗದವರು ಭಾಗವಹಿಸಿ ರಕ್ತದಾನ ಮಾಡಿದರು.
ಭಾಗವಹಿಸಿದ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಕುಡಾಳ್‌ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜ ಬಾಂಧವರು, ಎನ್‌.ಎಸ್‌.ಎಸ್‌. ಘಟಕ, ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ ಹಾಗೂ ಸಾರ್ವಜನಿಕರು ಭಾಗವಹಿಸಿ ರಕ್ತದಾನ ಮಾಡಿದರು.
ಪ್ರಭಾಕರ್‌ ಭಟ್‌ ಇಡ್ಯಾ ಪ್ರಾರ್ಥಿಸಿ, ಕುಡಾಳ್‌ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘದ ಬೆಳ್ತಂಗಡಿ ವಲಯದ ಅಧ್ಯಕ್ಷ ಪ್ರಭಾಕರ ಪ್ರಭು, ವೇಣೂರು ಸ್ವಾಗತಿಸಿ, ಪ್ರಸ್ತಾವಿಸಿದರು.
ಪೂರ್ಣಾನಂದ ಸೇವಾ ಪ್ರತಿಷ್ಠಾನ, ಬೆಳ್ತಂಗಡಿ ವಿಭಾಗದ ಅಧ್ಯಕ್ಷ ದಯಾನಂದ ನಾಯಕ್‌ ವಂದಿಸಿದರು. ಯೋಗೀಶ್‌ ನಾಯಕ್‌ ಬಿ. ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next