Advertisement

ತಂಬಾಕು ಉತ್ಪನ್ನಗಳ ರಫ್ತಿಗೆ ಸ್ವಯಂಚಾಲಿತ ತೆರಿಗೆ ರಿಫ‌ಂಡ್‌ ಇಲ್ಲ

09:40 PM Aug 01, 2023 | Team Udayavani |

ನವದೆಹಲಿ: ತಂಬಾಕು, ಪಾನ್‌ ಮಸಾಲಾ ಸೇರಿದಂತೆ ಹಲವು ವಸ್ತುಗಳ ರಫ್ತಿಗೆ ಅಕ್ಟೋಬರ್‌ 1ರಿಂದ ಏಕೀಕೃತ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಅನ್ವಯ ಸ್ವಯಂ ಚಾಲಿತವಾಗಿ ತೆರಿಗೆ ಮೊತ್ತ ರಿಫ‌ಂಡ್‌ ಆಗಲಾರದು. ಅಂಥ ವಸ್ತುಗಳನ್ನು ರಫ್ತು ಮಾಡುವ ವ್ಯಕ್ತಿಗಳು, ಸಂಸ್ಥೆಗಳು ತಮ್ಮ ತಮ್ಮ ವ್ಯಾಪ್ತಿಯ ತೆರಿಗೆ ಕಚೇರಿಗಳ ಮೂಲಕ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕ್ಲೇಮು ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ. ತಂಬಾಕು, ಪಾನ್‌ ಮಸಾಲಾ, ಗುಟ್ಕಾ, ಸಿಗರೇಟ್‌ ಮತ್ತು ಸಿಗಾರ್‌ಗಳಿಗೆ ಬಳಕೆ ಮಾಡುವ ತಂಬಾಕು ಉತ್ಪನ್ನಗಳಿಗೆ ಸೇರಿಸುವ ಅಂಶಗಳು, ಹುಕ್ಕಾಗಳಿಗೆ ಐಜಿಎಸ್‌ಟಿ ಮೂಲಕ ಸ್ವಯಂಚಾಲಿತವಾಗಿ ತೆರಿಗೆ ರಿಫ‌ಂಡ್‌ ಆಗುತ್ತಿತ್ತು. ಜತೆಗೆ ಆ ವಸ್ತುಗಳಿಗೆಲ್ಲ ಶೇ.28 ಐಜಿಎಸ್‌ಟಿ ಮತ್ತು ಸೆಸ್‌ ವಿಧಿಸಲಾಗುತ್ತಿದೆ.

Advertisement

ವಿವಿಧ ಹಂತಗಳಲ್ಲಿ ಅಧಿಕಾರಿಗಳೇ ಉತ್ಪನ್ನಗಳನ್ನು ಪರಿಶೀಲನೆ ಮಾಡುವ ಮೂಲಕ ತೆರಿಗೆ ವಂಚನೆ ತಡೆಯುವುದು, ಎಲ್ಲ ಹಂತದಲ್ಲಿಯೂ ಕ್ರಮಬದ್ಧವಾಗಿ ತೆರಿಗೆ ಪಾವತಿ ನಿಯಮಿತವಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next