Advertisement

ಮೋದಿಗೆ ಪರ್ಯಾಯ ಅಭ್ಯರ್ಥಿ ಯಾರೂ ಇಲ್ಲ

12:45 AM Apr 11, 2019 | Lakshmi GovindaRaju |

ಬೆಂಗಳೂರು: ಈ ಬಾರಿಯ ಲೋಕಾಸಭಾ ಚುನಾವಣೆಯಲ್ಲಿ ಪ್ರಧಾನಿ ಸ್ಥಾನವನ್ನು ನರೇಂದ್ರ ಮೋದಿಯವರನ್ನು ಬಿಟ್ಟರೆ ಸಮರ್ಥವಾಗಿ ನಿಭಾಯಿಸಬಲ್ಲ ಪರ್ಯಾಯ ಅಭ್ಯರ್ಥಿ ಯಾರೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್‌ರವರು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಬೆಂಗಳೂರು ದಕ್ಷಿಣ ಲೋಕಾಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಡೆ ಚಂದ್ರಬಾಬು ನಾಯ್ಡುು, ಕೆ.ಚಂದ್ರಶೇಖರ್‌ ರಾವ್‌, ಮಮತಾ ಬ್ಯಾನರ್ಜಿ, ಶರದ್‌ ಪವಾರ್‌ ಪ್ರಧಾನಿಯಾಗಲು ಕನಸು ಕಾಣುತ್ತಿದ್ದು, ಯಾರೊಬ್ಬರೂ ಮೋದಿಯವರಷ್ಟು ಸಮರ್ಥರಲ್ಲ ಎಂದರು.

ಈ ಬಾರಿ ಚುನಾವಣೆ ಫ‌ಲಿತಾಂಶ ಆರು ವಾರಗಳ ಮೊದಲೇ ಹೊರಬಿದ್ದಿದೆ. ಮತ್ತೂಮ್ಮೆ ಮೋದಿಯವರು ಪ್ರಧಾನಿಯಾಗುತ್ತಾರೆ ಎಂದು ಜನ ನಿರ್ಧರಿಸಿದ್ದಾರೆ. ಬೆಂಗಳೂರು ದಕ್ಷಿಣದಲ್ಲೂ ಜನರ ಆಶೀರ್ವಾದದಿಂದ ತೇಜಸ್ವಿ ಸೂರ್ಯ ಗೆಲವಿಗೆ ಸೂಕ್ತ ವಾತಾವರಣ ಸೃಷ್ಟಿಯಾಗಿದೆ. ಶ್ರೀಸಾಮಾನ್ಯರು ಮೋದಿಯನ್ನು ಮತ್ತೂಮ್ಮೆ ಬಯಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನ ಜಾಗತಿಕ ಕನಿಷ್ಠ ಆದಾಯ ಯೋಜನೆಯನ್ನು ಹೀಗಳೆದ ರಾಮ್‌ಮಾಧವ್‌ ಅವರು, ನಾಗರಿಕರನ್ನು ಸೋಮಾರಿಗಳನ್ನಾಗಿಸಲು ರೂಪಿಸಿರುವ ಯೋಜನೆ ಇದಾಗಿದೆ. ಅದರ ಬದಲು ದೇಶದಲ್ಲಿ ಉದ್ಯೋಗದ ಸೃಷ್ಟಿಸಲು ಬಿಜೆಪಿ ಯೋಜನೆಗಳನ್ನು ರೂಪಿಸಿದೆ. ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಭ್ರಷ್ಟರಾಗಿರಲಿಲ್ಲ. ಆದರೆ, ಅವರ ಸುತ್ತ ಭ್ರಷ್ಟಾಚಾರದ ವಾತಾವರಣವಿತ್ತು ಎಂದರು.

ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ನಗದು ಜಮೆ ಮಾಡುವ ಯೋಜನೆಗಳಿಂದಾಗಿ ಕಾರ್ಯಾಂಗ, ಆಡಳಿತ ವರ್ಗದಲ್ಲಿ ಭ್ರಷ್ಟಾಚಾರ ತಗ್ಗಿದೆ. ಮೋದಿ ಸರ್ಕಾರ ಜಾರಿಗೆ ತಂದ ಸ್ಟಾರ್ಟ್‌ ಅಪ್‌, ಸ್ಟಾಂಡ್‌ ಅಪ್‌ ಯೋಜನೆಗಳಡಿ ಏಳು ಕೋಟಿ ಜನರಿಗೆ ಭದ್ರತಾ ರಹಿತ ಸಾಲ ನೀಡಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ವಿವರಿಸಿದರು.

Advertisement

ಜಾಗತಿಕವಾಗಿ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐದು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಬಯಲು ಶೌಚ ಮುಕ್ತ ಯೋಜನೆಯಡಿ 9 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ಬದಲಾದ ಭಾರತದಲ್ಲಿ ಮೋದಿ ಅಲ್ಲದಿದ್ದರೆ ಅವರ ಸ್ಥಾನವನ್ನು ಯಾರೂ ನಿಭಾಯಿಸಲಾರರು ಎಂದು ಅಭಿಪ್ರಾಯಪಟ್ಟರು.

ವಿ.ವಿ.ಪುರಂನ ಶ್ರೀ ಸಂಭವ್‌ನಾಥ್‌ ಭವನದಲ್ಲಿ ಏರ್ಪಡಿಸಿದ್ದ “ಮೋದಿ ಮತ್ತೂಮ್ಮೆ’ ಸಂವಾದದಲ್ಲೂ ರಾಮ್‌ಮಾಧವ್‌ ಅವರು ಭಾಗವಹಿಸಿದ್ದರು. ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್‌, ಬಿಜೆಪಿ ನಗರ ಜಿÇÉಾಧ್ಯಕ್ಷ ಸದಾಶಿವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, “ಕಳೆದ ಹತ್ತು ದಿನಗಳಿಂದ ನೋಡುತ್ತಿದ್ದೇನೆ, ಜಯನಗರದ ಶ್ರೀಮಂತ ಬಡಾವಣೆ ನಿವಾಸಿಗಳಿಂದ ಹಿಡಿದು, ಎಚ್‌ಎಸ್‌ಆರ್‌ ಲೇಔಟ್‌ನ ಮಂಗಮ್ಮನ ಪಾಳ್ಯದ ಕಾರ್ಮಿಕರು, ಬೊಮ್ಮನಹಳ್ಳಿ ಗಾರ್ಮೆಂಟ್ಸ್‌ ನೌಕರರು,

ಬಿಟಿಎಂನಲ್ಲಿ ಇಸ್ತ್ರಿ ಮಾಡುವ ಸಾಮಾನ್ಯ ಜನರವರೆಗೆ ಎಲ್ಲರ ಬಾಯಲ್ಲೂ ಬರುವ ಒಂದೇ ಒಂದು ಮಾತು “ನರೇಂದ್ರ ಮೋದಿ ಮತ್ತೂಮ್ಮೆ’. ಇಂದು ಮತದಾರರು ಕಾರ್ಯಕರ್ತರಾಗಿ ಬದಲಾಗಿದ್ದಾರೆ. ನವ ಭಾರತ, ನವ ಬೆಂಗಳೂರು ನಿರ್ಮಾಣಕ್ಕಾಗಿ ನಾನು ಸಂಸತ್ತಿನಲ್ಲಿ ಕನ್ನಡಿಗರ ಯುವ ಪ್ರತಿನಿಧಿಯಾಗುತ್ತೇನೆ,’ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next