Advertisement

Heavy Rain: ಐದು ರಾಜ್ಯಗಳ ಮಳೆ ಅನಾಹುತಕ್ಕೆ 37 ಸಾವು

02:01 AM Sep 03, 2024 | Team Udayavani |

ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಹಲವು ರಾಜ್ಯಗಳನ್ನು ತತ್ತರಿಸುವಂತೆ ಮಾಡಿದ್ದು, ಕಳೆದ ಮೂರು ದಿನಗಳಿಂದ 5ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಒಟ್ಟು 37 ಮಂದಿ ಸಾವನ್ನಪ್ಪಿದ್ದಾರೆ. ತೆಲಂಗಾಣ, ಆಂಧ್ರ ಪ್ರದೇಶ, ಮಹಾ ರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರಾ ಖಂಡಗಳಲ್ಲಿ ಸೋಮವಾರವೂ ಭಾರೀ ಮಳೆ ಮುಂದುವರಿದಿದೆ.

Advertisement

ತೆಲಂಗಾಣ: ತೆಲಂಗಾ ಣ ದಲ್ಲಿ ಮಳೆ ಸಂಬಂಧಿ ದುರ್ಘ‌ಟನೆಗಳಿಗೆ 16 ಮಂದಿ ಅಸುನೀಗಿದ್ದಾರೆ. ಪ್ರಾಥಮಿಕ ಅಂದಾಜಿ ನಂತೆ 5 ಸಾವಿರ ಕೋಟಿ ರೂ. ನಷ್ಟ ಉಂಟಾ ಗಿದ್ದು, 2 ಸಾವಿರ ಕೋಟಿ ರೂ. ಒದ ಗಿ ಸು ವಂತೆ ಕೇಂದ್ರಕ್ಕೆ ತೆಲಂಗಾಣ ಸರಕಾರ ಮನವಿ ಮಾಡಿದೆ. ಮೃತರ ಕುಟುಂಬ ಗ ಳಿಗೆ ಸಿಎಂ ರೇವಂತ್‌ ರೆಡ್ಡಿ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ ರಾಜ್ಯದ ಪ್ರವಾ ಹ ವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿ ಸು ವಂತೆ ಕೇಂದ್ರ ಸರಕಾ ರಕ್ಕೆ ಮನವಿ ಮಾಡಿ ದ್ದಾ ರೆ. ಭಾರೀ ಮಳೆ ಯಿಂದ ರೈಲು ಹಳಿ ಗಳ ಮೇಲೆ ನೀರು ನಿಂತ ಕಾರಣ, ದಕ್ಷಿಣ ಕೇಂದ್ರ ರೈಲ್ವೇಯ 432 ರೈಲು ಗಳ ಸಂಚಾರ ರದ್ದಾ ಗಿದೆ. 139 ರೈಲು ಗಳ ಮಾರ್ಗ ಬದ ಲಿ ಸ ಲಾ ಗಿ ದೆ.

ಆಂಧ್ರಪ್ರದೇಶ: ಕಳೆದ 3 ದಿನ ಗ ಳಿಂದ ಸುರಿಯುತ್ತಿರುವ ನಿರಂತರ ಮಳೆಯು ಆಂಧ್ರಪ್ರದೇಶವನ್ನು ತತ್ತರಿಸುವಂತೆ ಮಾಡಿದೆ. ಸಾವಿನ ಸಂಖ್ಯೆ 15ಕ್ಕೇರಿದ್ದು, 4.5 ಲಕ್ಷ ಮಂದಿ ಸಂಕ ಷ್ಟಕ್ಕೆ ಸಿಲು ಕಿ ದ್ದಾರೆ. ಈಗಾ ಗಲೇ ತಗ್ಗು ಪ್ರ ದೇ ಶ ಗ ಳಿಂದ 31,238 ಮಂದಿ ಯನ್ನು ಸುರ ಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸ ಲಾಗಿದೆ. 39 ಜಾನುವಾರು ಗಳು ಸಾವ ನ್ನಪ್ಪಿದ್ದು, 38 ಮೀನುಗಾರಿಕೆ ದೋಣಿ ಗಳು ಹಾನಿಗೀಡಾ ಗಿವೆ. 20 ಎಸ್‌ ಡಿ ಆ ರ್‌ ಎಫ್, 19 ಎನ್‌ ಡಿ ಆ ರ್‌ ಎಫ್ ಪಡೆ ಗ ಳನ್ನು ರಕ್ಷಣ ಕಾರ್ಯಗಳಿಗೆಂದು ನಿಯೋಜಿಸಲಾಗಿದೆ. ನೂರಾರು ಗ್ರಾಮ ಗಳು ಜಲಾ ವೃ ತ ವಾ ಗಿದ್ದು, ವಿಜಯ ವಾ ಡ ದಲ್ಲಿ ಹಾಲು, ಆಹಾ ರ ವಿ ಲ್ಲದೇ ಜನರು ಪರ ದಾ ಡು ತ್ತಿ ದ್ದಾರೆ.

ಮಹಾರಾಷ್ಟ್ರ: ಇದೇ ವೇಳೆ, ಮಹಾರಾಷ್ಟ್ರದಲ್ಲೂ ವರುಣ ಅಬ್ಬರಿಸುತ್ತಿದ್ದು, ಮರಾ ಠ ವಾ ಡ ದಲ್ಲಿ ಸೋಮ ವಾರ ಮಳೆ ಸಂಬಂಧಿ ದುರ್ಘ‌ಟನೆಗ ಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಹಿಮಾಚಲದ 8 ಜಿಲ್ಲೆಯಲ್ಲಿ ದಿಢೀರ್‌ ಪ್ರವಾಹ?
ಶಿಮ್ಲಾ: ಹಿಮಾ ಚಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಯಿಂದಾಗಿ ಒಟ್ಟು 109 ರಸ್ತೆ ಗಳೇ ಬಂದ್‌ ಆಗಿವೆ. ಮಂಡಿ, ಶಿಮ್ಲಾ, ಕುಲು ಸೇರಿ ದಂತೆ ಒಟ್ಟು 8 ಜಿಲ್ಲೆ ಗ ಳಲ್ಲಿ ದಿಢೀರ್‌ ಪ್ರವಾಹ ಉಂಟಾ ಗುವ ಸಾಧ್ಯ ತೆ ಯಿದೆ ಎಂದು ಹವಾ ಮಾನ ಇಲಾಖೆ ಮುನ್ಸೂ ಚನೆ ನೀಡಿ ದೆ.

Advertisement

ಭೂಕುಸಿತ: 2 ವೈಷ್ಣೋದೇವಿ ಯಾತ್ರಿಕರ ಸಾವು
ಶ್ರೀನಗರ: ಜಮ್ಮು-ಕಾಶ್ಮೀ ರದ ರಿಯಾಸಿ ಜಿಲ್ಲೆ ಯಲ್ಲಿ ಸೋಮ ವಾರ ಭೂಕು ಸಿತ ಸಂಭ ವಿಸಿ, ವೈಷ್ಣೋ ದೇವಿ ಯಾತ್ರಿ ಕ ರಿ ಬ್ಬರು ಮೃತ ಪ ಟ್ಟಿ ದ್ದಾರೆ. ಇದೇ ಘಟನೆಯಲ್ಲಿ ಬಾಲ ಕಿ ಯೊ ಬ್ಬಳು ಗಾಯ ಗೊಂಡಿ ದ್ದಾಳೆ. ಮೃತರು ಉತ್ತ ರ  ಪ್ರ ದೇಶ ಮತ್ತು ಪಂಜಾಬ್‌ ಮೂಲದವರು ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಭೂಕು ಸಿತ ಹಿನ್ನೆ ಲೆ ಯಲ್ಲಿ ಹಿಮ ಕೋಟಿ ಮಾರ್ಗದಲ್ಲಿ ಯಾತ್ರಿ ಕರ ಸಂಚಾರ ರದ್ದು ಮಾಡಲಾಗಿದೆ.

ಶ್ರೀಶೈಲಂ ಡ್ಯಾಂ 2 ಗೇಟ್‌ಗೆ ಹಾನಿ, ದುರಸ್ತಿ: ಅಧಿಕಾರಿ
ಹೈದರಾಬಾದ್‌: ಕೃಷ್ಣಾ ನದಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಶ್ರೀಶೈಲಂ ಡ್ಯಾಂನ 2 ಮತ್ತು 3ನೇ ಗೇಟ್‌ ನಿರ್ವಹಣೆಯಲ್ಲಿ ತಾಂತ್ರಿಕೆ ತೊಂದರೆ ಎದು ರಾಗಿದೆ. ಪ್ರವಾಹ ನಿರ್ವಹಣೆ ವೇಳೆ ಡ್ಯಾಂನ 2 ಮತ್ತು 3ನೇ ಗೇಟ್‌ ಮೇಲೆತ್ತುವಾಗ ಗೇಟ್‌ಗಳ ಪ್ಯಾನೆಲ್‌ಗ‌ಳ ಬ್ರೇಕ್‌ ಕಾಯಿಲ್‌ ಸುಟ್ಟ ಪರಿಣಾಮ ಸಮಸ್ಯೆ ಎದುರಾಗಿತ್ತು.ಹೆಚ್ಚಿನ ತೊಂದರೆಯನ್ನು ತಪ್ಪಿಸಲು ಈಗ ಹಾನಿಗೊಳಗಾದ ಬ್ರೇಕ್‌ ಕಾಯಿಲ್‌ಗ‌ಳನ್ನು ಬದ ಲಿಸಲಾಗುತ್ತಿದೆ. ಎಷ್ಟು ಬೇಗವೋ ಅಷ್ಟು ಬೇಗ ಗೇಟ್‌ಗಳ ತಾಂತ್ರಿಕ ತೊಂದರೆಯನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕಾಶಂ ಬ್ಯಾರೇಜ್‌ಗೆ ಅಪ್ಪಳಿಸಿದ ಬೋಟ್‌ಗಳು: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಬೋಟ್‌ಗಳು ಕೊಚ್ಚಿ ಹೋಗಿದ್ದು, ಪ್ರಕಾಶಂ ಬ್ಯಾರೇಜ್‌ನ ಗೇಟ್‌ಗಳಿಗೆ ಬಂದು ಅಪ್ಪಳಿಸಿವೆ. ಕೃಷ್ಣಾ ನದಿ ತುಂಬಿ ಹರಿಯುತ್ತಿರು ವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.