Advertisement
ಇನ್ನು, ನಾಯಕ ಯೋಗಿಗೆ “ಲಂಬೋದರ’ ಚಿತ್ರದ ಗೆಲುವು ಅನಿವಾರ್ಯ. ಇತ್ತೀಚೆಗೆ ಬಂದ ಯೋಗಿ ಚಿತ್ರಗಳ್ಯಾವುವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಯೋಗಿ ಕೂಡಾ ದೊಡ್ಡ ಗೆಲುವಿಗೆ ಎದುರು ನೋಡುತ್ತಿದ್ದಾರೆ. ಹಾಗಾಗಿ, “ಲಂಬೋದರ’ ಮೂಲಕ ರೀಲಾಂಚ್ ಆಗುತ್ತಿದ್ದಾರೆಂದರೂ ತಪ್ಪಲ್ಲ. ಈ ಎರಡು ಚಿತ್ರಗಳ ಬಗ್ಗೆ ಆಯಾ ಚಿತ್ರದ ನಾಯಕ ನಟರು ಮಾತನಾಡಿದ್ದಾರೆ …
ತುಂಬಾ ಎಕ್ಸೈಟ್ ಆಗಿದ್ದೇನೆ. ಮೊದಲ ಸಿನಿಮಾನಾ ಜನ ಹೇಗೆ ತಗೋತ್ತಾರೆ ಎಂಬ ಕುತೂಹಲ ಇದೆ. ಈಗಾಗಲೇ ಟೀಸರ್, ಟ್ರೇಲರ್ ಬಿಡುಗಡೆಯಾಗಿದೆ. ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. * ಬಜಾರ್ ಮೂಲಕ ಲವರ್ ಬಾಯ್ ಆಗುತ್ತಿರೋ, ಆ್ಯಕ್ಷನ್ ಹೀರೋನಾ?
ಆ್ಯಕ್ಷನ್ ಹೀರೋ ಆಗುತ್ತಿದ್ದೇನೆ. ಅದಕ್ಕೆ ಕಾರಣ ಚಿತ್ರದ ಕಥೆ. ಕಥೆಯಲ್ಲಿ ರೌಡಿಸಂ ಅಂಶ ಅಡವಾಗಿರುವುದರಿಂದ ಅದಕ್ಕೆ ತಕ್ಕಂತಹ ಪಾತ್ರ ಸಿಕ್ಕಿದೆ. ಹೊಸ ತರಹದ ಕಥೆ ಪಾತ್ರ ಈ ಚಿತ್ರದಲ್ಲಿದೆ.
Related Articles
ಟ್ರೇಲರ್ ನೋಡಿದವರು ಈ ಚಿತ್ರದ ಮೂಲಕ ನನಗೆ ಚಿತ್ರರಂಗದಲ್ಲೊಂದು ಗಟ್ಟಿ ನೆಲೆ ಸಿಗುತ್ತದೆ ಎಂದಿದ್ದಾರೆ. ಅದಕ್ಕೆ ಕಾರಣ, ಟ್ರೇಲರ್ ಮೂಡಿಸಿದ ಭರವಸೆ. ನಾನು ಕೂಡಾ ಅದೇ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದೇನೆ.
Advertisement
* ಚಿತ್ರದಲ್ಲಿ ರೊಮ್ಯಾನ್ಸ್ ಮಾಡುವಾಗ ತುಂಬಾ ಕಷ್ಟಪಡ್ತಾ ಇದ್ರಂತೆ?ಹೌದು, ಮೊದಲ ಸಿನಿಮಾ. ಹಾಗಾಗಿ, ತುಂಬಾ ನರ್ವಸ್ ಆಗುತ್ತಿದ್ದೆ. ಬೇರೆ ದೃಶ್ಯಗಳನ್ನು ಸುಲಭವಾಗಿ ಮಾಡುತ್ತಿದ್ದೆ. ಚಿತ್ರದಲ್ಲಿ ನನಗೆ ಕಷ್ಟವಾಗುತ್ತಿದ್ದ ಅಂಶವೆಂದರೆ ರೊಮ್ಯಾನ್ಸ್. * ನಿರ್ದೇಶಕ ಸುನಿ ಜೊತೆ ಕೆಲಸ ಮಾಡಿದ ಅನುಭವ?
ಅವರು ಯಾವತ್ತೂ ನಿರ್ದೇಶಕರ ತರಹ ವರ್ತಿಸಿಲ್ಲ. ನನ್ನ ಅಣ್ಣನ ತರಹ ಪ್ರೀತಿಯಿಂದ ನಡೆದುಕೊಂಡು ನಡೆದುಕೊಳ್ಳುತ್ತಿದ್ದರು. ಒಂದು ಒಡನಾಟದೊಂದಿಗೆ ಕೆಲಸ ಮಾಡಿದ ಖುಷಿ ಇದೆ. * ನಿಮ್ಮ ಹೋಂಬ್ಯಾನರ್‌ನಲ್ಲಿ ಮುಂದೆ ಬೇರೆಯವರಿಗೆ ಸಿನಿಮಾ ಮಾಡೋ ಐಡಿಯಾ ಇದ್ಯಾ?
ನನ್ನನ್ನು ಲಾಂಚ್ ಮಾಡುವ ಉದ್ದೇಶದಿಂದ ಬ್ಯಾನರ್ ಹುಟ್ಟುಹಾಕಿದರೂ ಮುಂದೆ ಒಳ್ಳೆಯ ಕಥೆ ಸಿಕ್ಕರೆ ಬೇರೆ ಹೀರೋಗಳಿಗೂ ಸಿನಿಮಾ ಮಾಡುವ ಉದ್ದೇಶವಿದೆ. * ನಿಮ್ಮ ಬಜಾರ್‌ನ ಜನ ಯಾಕೆ ನೋಡಬೇಕು?
ಯೂತ್ಸ್ಗೆ ಈ ಕಥೆ ಹೆಚ್ಚು ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶವೂ ಇದೆ. ಆ್ಯಕ್ಷನ್ ಪ್ರಿಯರಿಗೆ ಭರ್ಜರಿ ಫೈಟ್, ಪ್ರೇಮಿಗಳಿಗಾಗಿ ಒಳ್ಳೆಯ ಹಾಡುಗಳು ಈ ಚಿತ್ರದಲ್ಲಿವೆ. ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಹ ಅಂಶ ಈ ಚಿತ್ರದಲ್ಲಿದೆ.