Advertisement

ಎರಡು ದಿನ ಹಲವೆಡೆ ಭಾರೀ ಮಳೆ ಸಾಧ್ಯತೆ

01:22 AM May 24, 2019 | Lakshmi GovindaRaj |

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಇನ್ನೂ ಎರಡು ದಿನ ಹಲವೆಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ದಕ್ಷಿಣ ಒಳನಾಡಿನಲ್ಲಿ ಉಂಟಾಗಿರುವ ಮೇಲ್ಮೆ„ ಸುಳಿಗಾಳಿಯಿಂದಾಗಿ ರಾಜ್ಯದಾದ್ಯಂತ ಮಳೆಯಾಗಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಹಲವೆಡೆಗಳಲ್ಲಿ ಭಾರೀ ಮಳೆಯಾಗಿದೆ.

ಇದೇ ರೀತಿ ವಾತಾವರಣ ಮುಂದಿನ 48 ಗಂಟೆಗಳು ಇರಲಿದ್ದು, ಕೆಲವೆಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುರುವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.

ಅದರಂತೆ ತುಮಕೂರು- 61, ಚಿತ್ರದುರ್ಗ- 40, ದಾವಣಗೆರೆ- 76, ಚಾಮರಾಜನಗರ- 44, ಮೈಸೂರು- 82, ಮಂಡ್ಯ- 31, ಬಳ್ಳಾರಿ- 61, ಕೊಪ್ಪಳ- 63, ರಾಯಚೂರು- 22, ಕಲಬುರಗಿ- 22, ಬೀದರ್‌- 15, ಬೆಳಗಾವಿ- 28, ಬಾಗಲಕೋಟೆ- 56,

ವಿಜಯಪುರ- 20, ಹಾವೇರಿ- 48, ಧಾರವಾಡ- 62, ಹಾಸನ- 42, ಚಿಕ್ಕಮಗಳೂರು- 45, ಕೊಡಗು- 43, ಉತ್ತರ ಕನ್ನಡ- 26, ಯಾದಗಿರಿ- 27, ಬೆಂಗಳೂರು ನಗರ- 22, ಬೆಂಗಳೂರು ಗ್ರಾಮಾಂತರ- 27 ಮಿಲಿ ಮೀಟರ್‌ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next