Advertisement
ಆದರೆ, ಆಡಳಿತಾತ್ಮಕ ತಿಕ್ಕಾಟದಿಂದ ಅವ್ಯವಹಾರಗಳ ಕೊಂಪೆ ಎಂಬ ಕಳಂಕ ಅಂಟಿಸಿಕೊಂಡಿದೆ. ಇದೀಗ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿಯಿಂದ ಹಿಡಿದು ಬಡ್ತಿ ವಿಚಾರದಲ್ಲೂ ಸ್ವಜನ ಪಕ್ಷಪಾತ ಹಾಗೂ ಶಿಸ್ತು ಪ್ರಕರಣಗಳ ಹೆಸರಲ್ಲಿ ಅಧಿಕಾರಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು, ಸೇವಾ ಜ್ಯೇಷ್ಠತೆ ಇಲ್ಲದಿದ್ದರೂ ಪ್ರಮುಖ ರಾಜಕಾರಣಿಯೊಬ್ಬರ ಸಂಬಂಧಿ ಎನ್ನುವ ಕಾರಣಕ್ಕೆ ಹೇಗಾದರೂ ಮಾಡಿ ಅವರಿಗೆ ಬಡ್ತಿ ನೀಡಬೇಕೆಂಬ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
Related Articles
Advertisement
ಒಬ್ಬರಿಗಾಗಿ ಇನ್ನೊಬ್ಬರಿಗೆ ಹಿಂಬಡ್ತಿ ಚಿಂತನೆ: ಲೆಕ್ಕಪತ್ರ ಶಾಖೆ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಬೇಕು ಎಂದು ಆಡಳಿತ ಮಂಡ ಳಿಯ ನಿರ್ಧಾರವಾಗಿದ್ದು, ಕ್ಲಾಸ್ ಒನ್ ಸೀನಿಯರ್ ಎರಡು ಹುದ್ದೆಗಳು ಇರುವುದರಿಂದ ಜ್ಯೇಷ್ಠತಾ ಪಟ್ಟಿ ಪ್ರಕಾರ ಇಬ್ಬರು ಅರ್ಹತೆ ಹೊಂದಿದ್ದು, ಮೂರನೇ ವ್ಯಕ್ತಿಗೆ ಬಡ್ತಿ ನೀಡುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಬಡ್ತಿ ಪಡೆ ದಿದ್ದ ಅಧಿಕಾರಿಯೊಬ್ಬರಿಗೆ ನೋಟಿಸ್ ಜಾರಿ ಮಾಡಿ ಹಿಂಬಡ್ತಿ ಯಾಕೆ ಮಾಡಬಾರದು ಎಂದು ಕಾರಣ ಕೇಳಲಾಗಿದೆ. ವಿಪ ರ್ಯಾಸ ಅಂದರೆ ಬಡ್ತಿ ಕೇಳದ ಅಧಿಕಾರಿಗೆ ಬಡ್ತಿ ನೀಡಿ ಇದೀಗ ಇನ್ನೊಬ್ಬರಿಗಾಗಿ ಹಿಂಬಡ್ತಿ ನೀಡಲು ಮುಂದಾಗಿರುವುದು ಯಾವ ನ್ಯಾಯ ಎಂಬುದು ಅಧಿಕಾರಿಗಳ ವಾದ.
ಸಂಸ್ಥೆಯಲ್ಲಿ ನಡೆದಿದ್ದ ಅವ್ಯವಹಾರ, ಸಂಸ್ಥೆಗೆ ನಷ್ಟ ಮಾಡು ವಂತಹ ಪ್ರಕರಣದಲ್ಲಿ ದಿಟ್ಟ ಕ್ರಮ ಕೈಗೊಂಡ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉನ್ನತಾಧಿಕಾರಿಯ ಮೇಲೆ ಬಡ್ತಿಗಾಗಿ ಒತ್ತಡ ಹಾಕುತ್ತಿದ್ದು, ಇದಕ್ಕೆ ಒಪ್ಪದಿರುವ ಕಾರಣದಿಂದ ಬಡ್ತಿ ಪಟ್ಟಿಗೆ ಹಂತಿಮ ಅಂಕಿತ ಬಿದ್ದು ಹೊರಬೀಳಲು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಸರ್ಕಾರಿ ಆದೇಶಕ್ಕೂ ಕಿಮ್ಮತ್ತಿಲ್ಲ: ಇಲಾಖೆಯಲ್ಲಿ ರಾಜಕೀಯ ಒತ್ತಡ, ಇನ್ನಾವುದೇ ಕಾರಣದಿಂದ ಅಧಿಕಾರಿಗಳ ಮೇಲಿನ ಶಿಸ್ತು ಪ್ರಕರಣದ ಹೆಸರಲ್ಲಿ ಬಡ್ತಿ, ಸೇರಿದಂತೆ ಇತರೆ ಸೌಲಭ್ಯಗಳು ತಡೆ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ.ಆದೇಶ ಸಮರ್ಪಕವಾಗಿ ಪಾಲನೆಯಾಗ ದಿ ರುವುದು ಸಣ್ಣ ಪುಟ್ಟ ಶಿಸ್ತು ಪ್ರಕರಣಗಳ ಬಾಕಿಯಿಟ್ಟು ಬಡ್ತಿಯಿಂದ ವಂಚಿಸಲಾಗುತ್ತಿದೆ.
ಸ್ವಜನ ಪಕ್ಷ , ಪ್ರಾಮಾಣಿಕ ಅಧಿಕಾರಿಗಳನ್ನು ಹತ್ತಿಕ್ಕುವ ಪ್ರಕರಣಗಳು ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಜ್ಯೇಷ್ಠತಾ ಪಟ್ಟಿ ಪ್ರಕಾರ ಬಡ್ತಿಗೆ ಅರ್ಹತೆಯಿದೆ. ಯಾವುದೇ ಶಿಸ್ತು ಪ್ರಕರಣಗಳಿಲ್ಲ. ಇನ್ನೇನು ಬಡ್ತಿ ದೊರೆಯುತ್ತದೆ ಎನ್ನುವ ಲೆಕ್ಕಾಚಾರ ತಲೆಕೆಳಗಾಗುತ್ತಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ.-ಹೆಸರು ಹೇಳಲಿಚ್ಛಿಸದ ಅಧಿಕಾರಿ * ಹೇಮರಡ್ಡಿ ಸೈದಾಪುರ