Advertisement

ಉತ್ಸವದಲ್ಲಿ ಬದುಕು ರೂಪಿಸುವ ದಾರಿ ಇದೆ : ಒಡಿಯೂರು ಶ್ರೀ

06:10 AM Aug 22, 2017 | Team Udayavani |

ವಿಟ್ಲ : ಕೃಷ್ಣ ಎನ್ನುವ ಶಬ್ದದಲ್ಲಿ ಆಕರ್ಷಣೆಯ ಶಕ್ತಿ ಇದೆ. ಜಗತ್ತಿನ ಗೊಂದಲಗಳಿಗೆ ಪರಿಹಾರ ಕೃಷ್ಣತಣ್ತೀದಲ್ಲಿದೆ. ಆಡಳಿತವೂ ಹೇಗಿರಬೇಕೆನ್ನುವುದನ್ನು ಭಗವದ್ಗೀತೆ ಮೂಲಕ ತಿಳಿದುಕೊಳ್ಳಬಹುದು. ನರ ನಾರಾಯಣನಾಗುವುದು ಹೇಗೆ ಎಂಬುದನ್ನು ರಾಮ-ಕೃಷ್ಣರು ಅವತರಿಸಿ ತೋರಿಸಿದ್ದಾರೆ. 

Advertisement

ಇಂತಹ ಪುಣ್ಯಪುರುಷರ ವೇಷ ಹಾಕುವ ಮೂಲಕ ಆತ್ಮಶಕ್ತಿ ಉದ್ದೀಪನಗೊಳಿಸಲು ಸಾಧ್ಯವಾಗುತ್ತದೆ. ಅವರ ಜನ್ಮ ಉತ್ಸವದ ಆಚರಣೆಯಲ್ಲಿ ಬದುಕನ್ನು ರೂಪಿಸುವ ದಾರಿಯೂ ಇದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.ಅವರು ರವಿವಾರ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಆಯೋಜಿಸಿದ್ದ ಮುದ್ದುಕೃಷ್ಣ ವೇಷಸ್ಪರ್ಧೆಯ ಬಹುಮಾನ ವಿತರಿಸಿ ಆಶೀರ್ವಚನ ನೀಡಿದರು.

ಭವ್ಯ ಭಾರತ ನಿರ್ಮಾಣವಾಗಲಿ
ಶ್ರೀಕೃಷ್ಣನ ತತ್ವ ಅನುಸರಿಸುವ  ಮೂಲಕ ನಾವೆಲ್ಲರೂ ಅಮೃತಪುತ್ರರಾಗೋಣ. ಆದರ್ಶ ಮಕ್ಕಳನ್ನು ಬೆಳೆಯುವಂತೆ ಮಾಡುವುದರೊಂದಿಗೆ ಭವ್ಯ ಭಾರತವನ್ನು ನಿರ್ಮಿಸುವಲ್ಲಿ ತಾಯಂದಿರ ಪಾತ್ರ ಮಹತ್ತರವಾದುದು. 

ಅನುಸಂಧಾನ ಸಾಧ್ಯ
ಕಲಿಯುಗ ಎಂದರೆ ಕಲಿಯುವ ಯುಗವೂ ಹೌದು. ಈ ಯುಗದಲ್ಲಿ ನಾಮಸಂಕೀರ್ತನೆಯಿಂದ ಭಗವಂತನ ಅನುಸಂಧಾನ ಸಾಧ್ಯ ಎಂದು ಅವರು ಹೇಳಿದರು. ಸಾಧ್ವಿà ಶ್ರೀ ಮಾತಾನಂದಮಯೀಯವರು ಸ್ಪರ್ಧೆಗೆ ಚಾಲನೆ ನೀಡಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾ| ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಒಡಿಯೂರು, ಯಶವಂತ್‌ ವಿಟ್ಲ, ಮುಖ್ಯ ಶಿಕ್ಷಕ ಜಯಪ್ರಕಾಶ್‌ ಶೆಟ್ಟಿ ತೀಪುìಗಾರರಾಗಿ ಸಹಕರಿಸಿದರು. ಅಜಿತ್‌ನಾಥ್‌ ಶೆಟ್ಟಿ, ಮಾತೇಶ್‌ ಭಂಡಾರಿ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next