ನಮ್ಮಂತೆ, ಎಲ್ಲರೂ ಎಂದು ಯೋಚಿಸುವವರು ಕಡಿಮೆ. ಎಲ್ಲರೂ ನಮ್ಮ ಥರಾನೇ ಇರಬೇಕು ಎಂದು ಯೋಚಿಸುವವರು ಅಧಿಕ. ನೋವು, ದುಃಖ, ಬೇಸರ, ಎಲ್ಲರಿಗೂ ಸಹಜವಾಗಿ ಇರುವಂತದ್ದೇ. ಆದರೆ ಬರಬರುತ್ತಾ ಜನರು ನಾವು ಯಾವಾಗಲೂ ಸರಿಯಾಗಿ ಇದ್ದೇವೆ. ಎಂತಹ ಸಮಸ್ಯೆಗೂ ನಮ್ಮ ಬಳಿ ಪರಿಹಾರ ಇದೆ ಎಂಬ ನಂಬಿಕೆಗಿಂತ ಸಮಸ್ಯೆಗೆ ಹೆದರುವವರ ಸಂಖ್ಯೆ ಈಗ ಹೆಚ್ಚಾಗಿದೆ.
ಒತ್ತಡ ಮನಸ್ಸಲ್ಲೇ ಇಟ್ಟುಕೊಂಡು ಹೃದಯಕ್ಕೆ ನೋವು ಕೊಡುತ್ತಿರುತ್ತಾರೆ ಅವರಿಗೆ ಗೊತ್ತಿಲ್ಲದೆ ಆ ಹೃದಯ ಎಷ್ಟು ನೋವು ತಡೆದಿಟ್ಟುಕೊಂಡಿರಬಹುದು. ಎಲ್ಲದರಲ್ಲೂ ಪರಿಪೂರ್ಣತೆ ಸಾಧಿಸಬೇಕು ಅನ್ನೋ ಮನಸ್ಥಿತಿಯಿಂದ ಹೊರಗೆ ಬರಬೇಕು ಎಲ್ಲರೂ ಎಲ್ಲದ್ದನ್ನೂ ಎಲ್ಲ ಕಾಲಕ್ಕೂ ಮಾಡೋಕೆ ಆಗಲ್ಲ ಅನ್ನೋದು ಶಾಶ್ವತ ಸತ್ಯ ಜತೆಗೆ ನಾವು ಯಾರ ಮುಂದೆ ಹೋಗಿ ನಿಂತರೂ ನಮಗೆ ಗೊತ್ತಿಲ್ಲದೆ ಇರೋ ಯಾವುದೋ ಒಂದು ವಿಷಯ ಅವರಿಗೆ ಗೊತ್ತಿರುತ್ತೆ.
ನಾವು ಮನಸ್ಸುಬಿಚ್ಚಿ ಯಾರ ಜತೆಯಲ್ಲಾದರೂ ಮಾತಾಡಿದರೆ ಅವರು ಏನು ಹೇಗೆ ಅನ್ನೋದು ಆ ಕ್ಷಣದಲ್ಲಿ ಗೊತ್ತಾಗಿರುತ್ತೆ ಮನುಷ್ಯನ ಮನಸ್ಸಿನ ಆಳ ತಿಳಿದುಕೊಳ್ಳೋಕೆ ಒಂದು ನಿಮಿಷ ಸಾಕಾಗಲ್ಲ ಎಷ್ಟೋ ಸಲ ನಾವು ಒಳ್ಳೆಯವರು ಅಂತ ನಂಬಿದವರೆ ನಮ್ಮ ಬೆನ್ನಿಗೆ ಚೂರಿ ಹಾಕಬಹುದು. ಇದು ಎಲ್ಲರಿಗೂ ಗೊತ್ತಿರೋ ಸತ್ಯನೇ ಗೊತ್ತಿದ್ದು ಗೊತ್ತಿದ್ದು ಮನುಷ್ಯರು ಯಾಕೆ ದಾರಿತಪ್ಪಿ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.
ನಮ್ಮ ಐದು ಬೆರಳು ಒಂದೇ ರೀತಿ ಇಲ್ಲ ಎಂದ ಮೇಲೆ ನಮ್ಮ ಸಮಸ್ಯೆಯನ್ನು ನಾವು ಸ್ವೀಕರಿಸುವ ರೀತಿ ಹೇಗೆ ಒಂದೇ ತರ ಇರುತ್ತದೆ. ಅನಗತ್ಯ ವಿಚಾರಗಳ ಕಡೆ ತೀರಾ ಯೋಚನೆ ಮಾಡಿದರೆ ಆರೋಗ್ಯ ಹಾಳುಮಾಡಿಕೊಂಡಂತೆ ಎನ್ನಬಹುದು. ಇತ್ತೀಚಿನ ದಿನದಲ್ಲಿ ಸಣ್ಣ ಪುಟ್ಟ ಕಾರಣಕ್ಕೂ ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಿದ್ದಾರೆ.
ಅಪ್ಪ ಬೈದರು, ಫೋನ್ ಕೊಡಲಿಲ್ಲ ಇಂತಹ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಮ್ಮೆ ಬಾರದ ಲೋಕಕ್ಕೆ ಹೋದರೆ ಇದ್ದವರಿಗೆ ಬದುಕಿದ್ದಷ್ಟು ದಿನ ನೋವೊಂದೇ ಜೀವನವಾಗಲು ಬಹುದು. ಹಾಗಾಗಿ ನಮ್ಮ ಯೋಚನೆ ಉತ್ತಮ ವಿಚಾರಗಳ ಕಡೆ ಇರಲಿ, ಸಮಸ್ಯೆ ಯಾವುದಿದ್ದರೂ ಪರಿಹಾರ ಹುಡುಕುವ ಮನಸ್ಥಿತಿ ನಮ್ಮಲ್ಲಿ ಬೆಳೆಯಲಿ.
-ಭೂಮಿಕಾ,
ತುರಗನೂರು