Advertisement
ಹೌದು, ಆರ್ಕಿಟೆಕ್ಚರಿಕ್ ಆಸಕ್ತಿ ಹೊಂದಿದ್ದರೆ ಒಂದು ಕಟ್ಟಡವನ್ನು ಯಾವರೀತಿ ಸುಸಜ್ಜಿತವಾಗಿ, ಹಲವು ವಿಭಿನ್ನತೆ, ವೈಶಿಷ್ಟ್ಯತೆಗಳನ್ನೊಳಗೊಂಡಂತೆ ನಿರ್ಮಿಸುವ ಚಾಕಚಕ್ಯತೆಯನ್ನು ಕರಗತ ಮಾಡಿಕೊಳ್ಳುವ ಶಿಕ್ಷಣವನ್ನು ಇದೇ ಪದವಿಯಲ್ಲಿ ಪಡೆಯಬಹುದು. ಆ ಮೂಲಕ ಆಸಕ್ತಿಯನ್ನು ವೃತ್ತಿಯನ್ನಾಗಿ ಕಲಿತು ಮುಂದೆ ಸುವ್ಯವಸ್ಥಿತ ಕಟ್ಟಡ ನಿರ್ಮಾಣವನ್ನು ಮಾಡಲು ಮುಂದಾಗಬಹುದು.
ಆರ್ಕಿಟೆಕ್ಚರ್ ವಿಷಯದ ಬಗ್ಗೆ ಪದವಿ, ಸ್ನಾತಕೋತ್ತರ ಪದವಿ ಅಥವಾ ಎಂಜಿನಿಯರಿಂಗ್ ಅನ್ನು ಮಾಡಬಹುದು. ಇನ್ನು ಕೇವಲ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಿ ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಬಹುದು. ಸ್ಟೆಟಜಿಕ್ ಟು ಡೆವಲಪ್ ಆ್ಯಂಡ್ ರಿಫೈನ್ ಐಡಿಯಾಸ್, ಆರ್ಕಿಟೆಕ್ಚರ್ ಆ್ಯಂಡ್ ಇಂಟಿರಿಯಲ್ ಡಿಸೈನ್ ಕೋರ್ಸ್, ಬಿಸಿನೆಸ್ ಆಫ್ ಆರ್ಕಿಟೆಕ್ಚರ್, ಮಾಡೆಲ್ ಬಿಲ್ಡಿಂಗ್, ಆರ್ಕಿಟೆಕ್ಚರ್ ಡ್ರಾಫ್ಟಿಂಗ್ ಹೀಗೆ ಹಲವು ಕೋರ್ಸ್‌ಗಳಿವೆ. ಇವುಗಳಲ್ಲಿ ಕೆಲವು ಪೂರ್ಣ ಪ್ರಮಾಣದ ತರಗತಿಗಳಾದರೆ ಕೆಲವು ಡಿಪ್ಲೋಮಾ ಕೋರ್ಸ್‌ಗಳು.
Related Articles
ಕನಸಿನ ಮನೆಯನ್ನು ಕಟ್ಟುವ ಮೂಲಕ ಯಜಮಾನನ ಹಂಬಲವನ್ನು ಸಾಕಾರಗೊಳಿಸುವ ಮಾಸ್ಟರ್ ಆರ್ಕಿಟೆಕ್ಚರ್ ಆಗಿರುತ್ತಾನೆ. ಹಾಗಾಗಿ ಕಟ್ಟಡ ನಿರ್ಮಾಣದ ಪ್ಲ್ರಾನಿಂಗ್, ಕಂಪ್ಯೂಟರ್ ಆ್ಯಡೆಡ್ ಡಿಸೈನಿಂಗ್, ಬಿಲ್ಡಿಂಗ್ ಇನ್‌ಫಾರ್ಮೇಶನ್ ಮಾಡೆಲಿಂಗ್, ಬಿಲ್ಡಿಂಗ್ ಇನ್‌ಸ್ಪೆಕ್ಟರ್, ಪ್ರೊಡಕ್ಷನ್ ಡಿಸೈನ್, ಪ್ರೊಜೆಕ್ಟ್ ಮ್ಯಾನೇಜರ್, ಕನ್‌ಸ್ಟ್ರಕ್ಷನ್ ಮ್ಯಾನೇಜರ್, ಲೆಕ್ಚರರ್ ಆಗಿ ವೃತ್ತಿಯನ್ನು ನಿರ್ವಹಿಸಬಹುದು. ಜತೆಗೆ ಉತ್ತಮ ಸಂಭಾವನೆಯನ್ನು ಗಳಿಸಬಹುದು.
Advertisement
ಇನ್ನು ಪ್ರತಿಷ್ಠಿತ ಕನóಕ್ಷನ್ ಕಂಪೆನಿಗಳಲ್ಲಿ, ಮಾಡೆಲ್‌ಗಳ ನಿರ್ಮಾಣ ಅಥವಾ ಪ್ರಾಜೆಕ್ಟ್ಗಳನ್ನು ತಯಾರಿಸಿ ಮನ್ನಣೆಯನ್ನು ಪಡೆದುಕೊಳ್ಳಬಹುದು. ರಿಯಲ್ ಎಸ್ಟೇಟ್ ಬಿಸಿನೆಸ್, ಸ್ವಂತ ಬಿಸಿನೆಸ್ ಅನ್ನು ಮಾಡಬಹುದು. ಕೆಲವೊಂದು ಕಂಪೆನಿಗಳಲ್ಲಿ ಪಾರ್ಟ್ ಟೈಮ್ ಕೆಲಸವನ್ನು ಮಾಡಬಹುದು. ಒಟ್ಟಿನಲ್ಲಿ ಪ್ಲ್ರಾನಿಂಗ್, ಕನ್‌ಸ್ಟ್ರಕ್ಷನ್, ಟೆಕ್ನಾಲಜಿ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಈ ವಿಭಾಗ ಸೂಕ್ತವಾಗಿದೆ.
ಭರತ್‌ರಾಜ್ ಕರ್ತಡ್ಕ