Advertisement

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

02:22 PM May 05, 2024 | Team Udayavani |

ಹಾವೇರಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಘಟನೆ ನಡೆದಿದೆ.

Advertisement

ನಿನ್ನೆ ರಾತ್ರಿ ಸವಣೂರ ಪಟ್ಟಣದಲ್ಲಿ ಧಾರವಾಡ ಕ್ಷೇತ್ರದ ಕೈ ಅಭ್ಯರ್ಥಿ ‌ವಿನೋದ ಅಸೂಟಿ ಪರ ಪ್ರಚಾರಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುರಸಬೆ ಸದಸ್ಯ ಅಲ್ಲಾವುದ್ದೀನ್ ಮನಿಯಾರ್ ಎಂಬಾತನಿಗೆ ಡಿಕೆಶಿ ಕಪಾಳ ಮೋಕ್ಷ ಮಾಡಿದ್ದು, ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿಕೆಶಿ ಬಂದಾಗ ಕೈ ಕಾರ್ಯಕರ್ತರು ಡಿಕೆ ಡಿಕೆ ಎಂದು ಕೂಗುತ್ತಿದ್ದರು. ಡಿಕೆಶಿ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಕೈ ಮುಖಂಡ, ಪುರಸಬೆ ಸದಸ್ಯ ಅಲ್ಲಾವುದ್ದೀನ್ ಡಿಕೆಶಿ ಹೆಗಲ ಮೇಲೆ ಕೈ ಹಾಕಿದರು.

ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಡಿಕೆಶಿ ಕೈ ಮುಖಂಡನ ಕಪಾಳಕ್ಕೆ ಹೊಡೆದಿದ್ದು, ಆತನಿಗೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next