Advertisement

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

01:18 AM Apr 28, 2024 | Team Udayavani |

ಹೈದರಾಬಾದ್‌: “ನಾನು ಮಹಿಳೆಯಲ್ಲ, ನನ್ನನ್ನು ಹಾಗೆ ಕರೆಯಬೇಡಿ’. ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ ಮಾಧವಿ ನೀಡಿದ್ದ ಈ ಹೇಳಿಕೆ ಇತ್ತೀಚೆಗೆ ಭಾರೀ ವೈರಲ್‌ ಆಗಿತ್ತು. ಇದೇ ವೀಡಿಯೋ ಬಳಸಿ ಮಾಧವಿ ಬಗ್ಗೆ ಹಲವರು ವ್ಯಂಗ್ಯವಾಡಿದ್ದರು. ವೀಡಿಯೋದಲ್ಲಿ ಹೇಳಿಕೆಯನ್ನು ತಿರುಚಲಾಗಿದ್ದು, ಅದು ಸಂಪೂರ್ಣ ಹೇಳಿಕೆ ಅಲ್ಲ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.

Advertisement

ಮಾಧವಿ ಇತ್ತೀಚೆಗಷ್ಟೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ನೀಡಿದ್ದ ಹೇಳಿಕೆಯ ಕೆಲವೇ ಸಾಲುಗಳನ್ನು ಮಾತ್ರ ಬಳಸಿ ವೀಡಿಯೋ ವೈರಲ್‌ ಮಾಡಲಾಗಿತ್ತು. ಆದರೆ ಸಂದರ್ಶನದಲ್ಲಿ “ಮಹಿಳೆಯಾಗಿ ನಿಮ್ಮಿಂದ ಇದೆಲ್ಲ ಹೇಗೆ ಸಾಧ್ಯ ಎಂದು ಕೇಳಬೇಡಿ, ನನ್ನನ್ನು ಬರೀ ಮಹಿಳೆ ಎನ್ನುವಂತೆ ಕರೆಯಬೇಡಿ, ನಾನು ಬರೀ ಮಹಿಳೆಯಲ್ಲ, ಶಕ್ತಿ’ ಎಂದು ಮಾಧವಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next