Advertisement
ಎರಡು ದಿನಗಳ ಹಿಂದೆ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 15 ಕೆ.ಜಿ. ಬಾಕ್ಸ್ ಟೊಮೇಟೊ 1,600ರಿಂದ 2,000 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಮತ್ತೆ ಬಾಂಗ್ಲಾ ಗಡಿ ಪ್ರದೇಶಗಳಿಗೆ ಟೊಮೇಟೊ ಬೇಡಿಕೆ ಹೆಚ್ಚಿದೆ. ಜತೆಗೆ ಛತ್ತೀಸ್‌ಗಢ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ದಿಲ್ಲಿ ಸಹಿತ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೇಡಿಕೆ ಇರುವುದರಿಂದ ಈಗ ರಾಜ್ಯದ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆಗಳಲ್ಲಿ ಏರಿಕೆಯಾಗಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಟೊಮೇಟೊ ಬೆಳೆಯಲ್ಲಿ ಬಿಳಿನೊಣದ ಹಾವಳಿ ಕಂಡುಬಂದಿದ್ದು ಬೆಳೆ ಕುಂಠಿತವಾಗಿದೆ.
Related Articles
3000 ಸಾವಿರ ರೂ.
ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ಈ ಹಿಂದೆ ಪ್ರತಿ ಕೆ.ಜಿಗೆ 120ರಿಂದ 130 ರೂ. ಇದ್ದುದು ಈಗ 150ರಿಂದ 160 ರೂ. ತಲುಪಿದೆ. ನಾಲ್ಕೈದು ದಿನಗಳಿಂದ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ಜಿಗಿತ ಕಂಡು ಬಂದಿದೆ. ಹೊಸ ಬೆಳೆ ಪೂರೈಕೆ ಆಗುವವರಿಗೂ ಇದೇ ಪರಿಸ್ಥಿತಿ ಇರಲಿದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.
Advertisement
-ದೇವೇಶ ಸೂರಗುಪ್ಪ