Advertisement
ಮಾಜಿ ಸಚಿವ, ಸಹಕಾರಿ ಧುರೀಣ ಎಸ್.ಆರ್. ಪಾಟೀಲ್ ತಮ್ಮ ಹುಟ್ಟೂರಿನಲ್ಲಿ ಈ ಬೃಹತ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆರಂಭಿಸಿ ತಮ್ಮ 75ನೇ ಜನ್ಮದಿನವಾದ ಜು. 31ರಂದು ಲೋಕಾರ್ಪಣೆಗೊಳಿಸುತ್ತಿದ್ದಾರೆ.”ಆರೋಗ್ಯ ಧಾಮ’ ಹೆಸರಿನ ಇಲ್ಲಿ ಆಯುರ್ವೇದ ಕಾಲೇಜು, ಸಿಬಿಎಸ್‌ಇ ಸ್ಕೂಲ್ ಸಹಿತ ಶೈಕ್ಷಣಕ ಸಂಸ್ಥೆಗಳು ಒಂದೇ ಸೂರಿನಡಿ ಇವೆ. ಎಸ್.ಆರ್. ಪಾಟೀಲ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಕೇಂದ್ರಕ್ಕೆ ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರವೂ ಅನುಮತಿ ನೀಡಿದೆ. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಇದು 4ನೇ ವೈದ್ಯಕೀಯ ಕಾಲೇಜು.
ಒಟ್ಟು 630 ಹಾಸಿಗೆಯ ಆಸ್ಪತ್ರೆ ಹಾಗೂ 100 ಎಂಬಿಬಿಎಸ್ ಸೀಟುಗಳ ಅನುಮತಿ ಪಡೆದಿದ್ದು, ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಜೀವರಸಾಯನಶಾಸ್ತ್ರ, ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಫಾರ್ಮಕಾಲಜಿ, ಫೋರೆನ್ಸಿಕ್ ಮೆಡಿಸಿನ್, ಟಾಕ್ಸಿಕಾಲಜಿ, ಸಮುದಾಯ ಔಷಧ, ಜನರಲ್ ಮೆಡಿಸಿನ್, ಪಿಡಿಯಾಟ್ರಿಕ್ಸ್, ಮನೋವೈದ್ಯಶಾಸ್ತ್ರ, ಡರ್ಮಟಾಲಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಆಥೋಪೆಡಿಕ್ಸ್, ರೇಡಿಯೋ-ರೋಗ ನಿರ್ಣಯ, ಓಟೋ-ರೈನೋಲಾರಿಂಗೋಲಜಿ, ನೇತ್ರವಿಜ್ಞಾನ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಅರಿವಳಿಕೆ ಶಾಸ್ತ್ರ, ದಂತ ವೈದ್ಯಶಾಸ್ತ್ರ, ಇಂಟಿಗ್ರೇಟಿವ್ ಮೆಡಿಕಲ್ ರಿಸರ್ಚ್ ಹೀಗೆ ಒಟ್ಟು 21 ವಿಭಾಗ ಹೊಂದಿದೆ.
Related Articles
Advertisement
ಸಹಕಾರ, ಶಿಕ್ಷಣ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಜನ್ಮದಿನಕ್ಕೆ ಜನರ ಸೇವೆಗಾಗಿ ವೈದ್ಯಕೀಯ ಕಾಲೇಜು ಕಾಣಿಕೆಯಾಗಿ ನೀಡಬೇಕೆಂಬ ಹಂಬಲ ನನ್ನದು. ಜು. 31ರಂದು ನನಗೆ ಜನ್ಮಕೊಟ್ಟ ಬಾಡಗಂಡಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಗೊಳ್ಳಲಿದೆ.– ಎಸ್.ಆರ್. ಪಾಟೀಲ, ಮಾಜಿ ಸಚಿವ