Advertisement

ಸದಭಿರುಚಿಯ ಚಿತ್ರಗಳಿಗೆ ಭವಿಷ್ಯವಿದೆ: ನಾಗತಿಹಳ್ಳಿ

10:35 AM Apr 18, 2020 | Suhan S |

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಹೊಸ ಪ್ರಯೋಗದ ಚಿತ್ರವಾಗಿ ಅನೇಕರಿಗೆ ಇಷ್ಟವಾಗಿದೆ. ಈಗ ಚಿತ್ರ ಅಮೆಜಾನ್‌  ಪ್ರೈಮ್ ‌ನಲ್ಲಿದ್ದು, ಜನ ಇಲ್ಲೂ ಸಿನಿಮಾ ನೋಡಿ ಎಂಜಾಯ್‌ ಮಾಡುತ್ತಿದ್ದಾರೆ. ಈಗ ಹೊಸ ವಿಚಾರವೆಂದರೆ ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಚಿತ್ರವನ್ನು ದೂರದ ಪಾಕಿಸ್ತಾನದಲ್ಲಿ ಅಭಿಮಾನಿಗಳು ಅಮೆಜಾನ್‌ ಪ್ರೈಮ್ ನಲ್ಲಿ ನೋಡಿ ಮೆಚ್ಚಿಕೊಂಡಿದ್ದು, ಇದು ವೈರಲ್‌ ಆಗಿದೆ.

Advertisement

ಮುವತ್ನಾಲ್ಕು ದೇಶಗಳಲ್ಲಿ ಇಂಗ್ಗಿಷ್‌ ಸಬ್‌ ಟೈಟಲ್‌ನೊಂದಿಗೆ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರ ಲಕ್ಷಾಂತರ ಪ್ರೇಕ್ಷಕರನ್ನು ಮುಟ್ಟಿದೆ ಎಂಬ ಖುಷಿ ನಾಗತಿಹಳ್ಳಿಯವರದು. ಕೋವಿಡ್ 19 ದಿಂದ ಮನೆಯಲ್ಲಿರಬೇಕಾದ ಮಂದಿಗೆ ಮನೆಯಲ್ಲೇ ಉತ್ತಮ ರಂಜನೆ ನೀಡುತ್ತಿದೆ. ಹಿಂದಿಯೂ ಸೇರಿ ಇತರ ಭಾಷೆಗಳಿಗೆ ಡಬ್‌ ಮಾಡಿ ಓಟಿಟಿ ಮೂಲಕವೇ ಹೆಚ್ಚು ಜನರನ್ನು ತಲುಪಲು ನಿರ್ಮಾಪಕರು ಯೋಚಿಸುತ್ತಿದ್ದಾರೆ.

ಅಪಾರ ಅಭಿಮಾನಿಗಳನ್ನುಳ್ಳ ಕಲಾವಿದರ ಚಿತ್ರಗಳನ್ನು ಹೊರತು ಪಡಿಸಿ ಜನ ಥೇಟರಿಗೆ ಬರುವುದು ಅನುಮಾನ ಮೂಡಿಸಿರುವ ಈ ದಿನಗಳಲ್ಲಿ ಇದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಹೀಗಿರುವಾಗ ಡಿಜಿಟಲ್‌ ಮೀಡಿಯಾಗಳಲ್ಲಿ ಈ ತರಹದ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಸದಭಿರುಚಿಯ ಚಿತ್ರಗಳು ತಾಳ್ಮೆಯಿಂದ ಕಾದರೆ ಭವಿಷ್ಯವಿದೆ ಎನ್ನುವುದಕ್ಕೆ ಈ ಚಿತ್ರದ ಯಶಸ್ಸು ಸಾಕ್ಷಿಯಾಗಿದೆ. ಇನ್ನು ಪ್ರಯೋಗಶೀಲರಿಗೆ ಓಟಿಟಿ ಮಾಧ್ಯಮ ಅನಿವಾರ್ಯವೇನೋ ಎನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ.

Advertisement

Udayavani is now on Telegram. Click here to join our channel and stay updated with the latest news.

Next