ಬಳ್ಳಾರಿ: ಬೆಳೆಗಳನ್ನು ಕಾಡುವ ರೋಗಗಳನ್ನು ಪತ್ತೆ ಹಚ್ಚಿ, ಕೆಲವೇ ಕ್ಷಣಗಳಲ್ಲಿ ಪರಿಹಾರ ನೀಡುವ ಪ್ಲಾಂಟಿಕ್ಸ್ ಮೊಬೈಲ್ ಆ್ಯಪ್ ಒಂದನ್ನು ಆವಿಷ್ಕರಿಸಲಾಗಿದ್ದು ಕೆಲವೇ ದಿನಗಳಲ್ಲಿ ಈ ಆ್ಯಪ್ ಕನ್ನಡ ಭಾಷೆಯಲ್ಲಿಯೂ ದೊರೆಯಲಿದೆ. ಜರ್ಮನಿಯ PEAT ಎಂಬ ಸಂಸ್ಥೆ ಪ್ಲಾಂಟಿಕ್ಸ್ ಆ್ಯಪ್ ಅಭಿವೃದ್ಧಿಪಡಿಸಿದ್ದು. ಹೈದ್ರಾಬಾದ್‌ನ ICRISAT (International Crops Research Insftitute For Semi Arid Tropics) ಸಂಸ್ಥೆ ಈ ಆ್ಯಪ್‌ನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ ಪ್ಲಾಂಟಿಕ್ಸ್ ಮೊಬೈಲ್ ಆ್ಯಪ್ ಲಭ್ಯವಿದೆ. ಇಕ್ರಿಸ್ಯಾಟ್ ಸಂಸ್ಥೆಯ ಡಿಜಿಟಲ್ ಕೃಷಿ ವಿಭಾ ಗದ ವಿಜ್ಞಾನಿ ಹಾಗೂ ಪ್ಲಾಂಟಿಕ್ಸ್ ಆ್ಯಪ್ ಅನ್ನು ದೇಶೀಕರಣಗೊಳಿಸುವ ಜವಾಬ್ದಾರಿ ಹೊತ್ತಿರುವ ಡಾ| ಶ್ರೀಕಾಂತ್ ರೂಪಾವತಾರಂ ರಾಜ್ಯದ ಕೃಷಿ ಸಚಿವ ಕೃಷ್ಣ ಭೈರೇಗೌಡರನ್ನು ಭೇಟಿ ಮಾಡಿ ಆ್ಯಪ್ ಅನ್ನು ಕನ್ನಡ ಭಾಷೆಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚರ್ಚಿಸಿದ್ದು, ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.
ಡಿಜಿಟಲ್ ಗ್ರಂಥಾಲಯ: ಆ್ಯಪ್‌ನಲ್ಲಿ ಡಿಜಿಟಲ್ ಗ್ರಂಥಾಲಯವಿದ್ದು, ಇದರಲ್ಲಿ ಪ್ರಸ್ತುತ 350 ವಿವಿಧ ಬೆಳೆಗಳನ್ನು ಕಾಡುವ ಕೀಟಗಳ ಕುರಿತು ವಿವರಣೆ ಹಾಗೂ ಪರಿಹಾರೋಪಾಯ ಮಾರ್ಗ ನೀಡಲಾಗಿದೆ. ಪ್ರಾದೇಶಿಕವಾಗಿ ಅಭಿವೃದ್ಧಿಪ ಡಿಸಲಾಗುತ್ತಿರುವ ಆ್ಯಪ್‌ನಿಂದ ಸ್ಥಳೀಯ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯವನ್ನೂ ಈ ಗ್ರಂಥಾಲಯ ಮಾಡುತ್ತದೆ.
ಸಮುದಾಯ ವೇದಿಕೆ: ಜತೆಗೆ ಪ್ಲಾಂಟಿಕ್ಸ್‌ನಲ್ಲಿ ರೈತರ, ವಿಜ್ಞಾನಿಗಳಿರುವ ವೇದಿಕೆಯೂ ಇದ್ದು, ಇಲ್ಲಿ ಒಬ್ಬ ರೈತ ತನ್ನ ಸಮಸ್ಯೆ ಹೇಳಿಕೊಂಡು ಮತ್ತೂಬ್ಬ ಅನುಭವಿ ರೈತ ಅಥವಾ ಕೃಷಿ ವಿಜ್ಞಾನಿಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆ್ಯಪ್‌ನಲ್ಲಿ ವಾತಾವರಣ ಮುನ್ಸೂಚನೆ ಪಡೆಯುವ ಅವಕಾಶವಿದ್ದು, ರೈತರು ಇದನ್ನು ಬಳಸಿಕೊಂಡು ಬಿತ್ತನೆ ಸಮಯ, ಬೆಳೆ ಕಟಾವು, ಬೆಳೆ ಒಣಗಿಸುವ, ಕಣ ಮಾಡುವ ಹಾಗೂ ಸಂಗ್ರಹವನ್ನು ವ್ಯವಸ್ಥಿತವಾಗಿ ಮಾಡಬಹುದಾಗಿದೆ.
ಆ್ಯಪ್‌ನಲ್ಲಿ ಏನಿದೆ
ಪ್ಲಾಂಟಿಕ್ಸ್ ಆ್ಯಪ್‌ನ ಹೋಂ ಪೇಜ್‌ನಲ್ಲಿ ಕೆಮರಾ, ಸಮುದಾಯ (ಕಮ್ಯೂನಿಟಿ), ವಾತಾವರಣ, ಗ್ರಂಥಾಲಯ ಆಯ್ಕೆಗಳು ಕಂಡು ಬರುತ್ತವೆ. ಕೆಮರಾ ಮೂಲಕ ಬೆಳೆಯನ್ನು ಬಾಧಿ ಸುವ ಕೀಟ, ಪೋಷಕಾಂಶಗಳ ಕೊರತೆಯ ಲಕ್ಷಣಗಳನ್ನು ಸೆರೆ ಹಿಡಿದು ಅಪ್‌ಲೋಡ್ ಮಾಡಬೇಕು. ಹೀಗೆ ಮಾಡಿದ 10 ಸೆಕೆಂಡ್ ಒಳಗಡೆ ರೈತರಿಗೆ ಸಮಸ್ಯೆಯ ವಿವರಣೆ, ಬಾ ಧಿಸುವ ಕೀಟ, ಅದರ ಜೈವಿಕ, ರಾಸಾಯನಿಕ ಇತರ ಪರಿಹಾರೋಪಾಯ, ಪೋಷಕಾಂಶಗಳ ಕೊರತೆಯನ್ನು ವಿವರಿಸಿ ಆ ಸಮಸ್ಯೆಗೂ ಸೂಕ್ತ ಸಲಹೆಯನ್ನು ಆ್ಯಪ್ ಒದಗಿಸುತ್ತದೆ.