Advertisement

‘ಯೋಗ, ಪ್ರಕೃತಿ ಚಿಕಿತ್ಸೆಗೆ ಉಜ್ವಲ ಭವಿಷ್ಯ’

03:45 AM Jul 03, 2017 | Team Udayavani |

ಬೆಳ್ತಂಗಡಿ: ವೈದ್ಯರು ಹಾಗೂ ದೇವರನ್ನು ಕಷ್ಟ ಕಾಲದಲ್ಲಿ ಮಾತ್ರ ನೆನೆಯದೆ, ಪ್ರತಿಯೊಬ್ಬನೂ ಯೋಗಾಭ್ಯಾಸವನ್ನು ಮಾಡಿದರೆ ಮಾತ್ರ ರೋಗರಹಿತ ಜೀವನ ಸಾಧ್ಯ. ಯೋಗ ಪ್ರಕೃತಿ ಚಿಕಿತ್ಸೆಗಳನ್ನು ಸಮಗ್ರ ಚಿಕಿತ್ಸೆಯನ್ನಾಗಿ ಪರಿವರ್ತಿಸುವ ಗುರುತರವಾದ ಜವಾಬ್ದಾರಿ ಎಲ್ಲರ ಮೇಲಿದೆ. ಇದಕ್ಕೆ ಉಜ್ವಲ ಭವಿಷ್ಯವಿದೆ ಎಂದು ಗಣಿ ಮತ್ತು  ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು. ಅವರು ಶನಿವಾರ ಸಂಜೆ ಭಾರತರತ್ನ ಡಾ| ಬಿ. ಸಿ. ರಾಯ್‌ ಜನ್ಮದಿನಾಚರಣೆ ಅಂಗವಾಗಿ ಉಜಿರೆಯ ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Advertisement

ಪ್ರಕೃತಿಚಿಕಿತ್ಸೆ ವೈದ್ಯಪದ್ಧತಿಯಿಂದ ನಾನು ಆರೋಗ್ಯವಂತನಾಗಿದ್ದೇನೆ. ಈ ಔಷಧವಿಲ್ಲದ ಚಿಕಿತ್ಸೆ ಇಷ್ಟೊಂದು ಪರಿಣಾಮಕಾರಿ ಎಂಬುದನ್ನು ಇಲ್ಲಿಯ ಚಿಕಿತ್ಸೆಗಳಿಂದ ಮನಗಂಡಿದ್ದೇನೆ ಎಂದವರು ತಿಳಿಸಿದರು. ಕೇಂದ್ರ ಆಯುಷ್‌ ಮಂತ್ರಾಲಯದ ಯೋಗ ವಿಭಾಗದ ಜಂಟಿ ಸಲಹೆಗಾರ ಹಾಗೂ ಕೇಂದ್ರೀಯ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಸಂಶೋಧನಾ ಕೇಂದ್ರ ದಿಲ್ಲಿಯ ನಿರ್ದೇಶಕ ಡಾ| ಈಶ್ವರ ಎನ್‌. ಆಚಾರ್ಯ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ವೈದ್ಯರಿಗೆ ಉತ್ತಮ ಸ್ಥಾನವಿದೆ. ಅದರಲ್ಲಿ ಇಂದಿನ ಆಧುನಿಕ ಜೀವನ ಶೈಲಿಯಿಂದ ಬರುವ ದೇಹದ ಮನಸ್ಸಿನ ಅಸಮತೋಲನಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳೇ ಪರಿಹಾರ ಎಂದರು. 

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ| ಪ್ರಶಾಂತ್‌ ಶೆಟ್ಟಿ ವಹಿಸಿದ್ದರು. ಬಿ.ಎನ್‌.ವೈ.ಎಸ್‌. ಕಾಲೇಜಿನ ಯೋಗ ವಿಭಾಗದ ಡೀನ್‌  ಡಾ| ಶಿವಪ್ರಸಾದ್‌ ಶೆಟ್ಟಿ, ಸ್ವಾಗತಿಸಿದರು. ಪ್ರಕೃತಿಚಿಕಿತ್ಸಾ ವಿಭಾಗದ ಡೀನ್‌ ಡಾ| ಸುಜಾತಾ ವಂದಿಸಿದರು. ಯೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ| ಕಿರಣ್‌ಕುಮಾರ್‌ ರೆಡ್ಡಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next