ಮಂಗಳೂರು: ಕುಡ್ಲ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭದೊಂದಿಗೆ ಕರಾವಳಿ ಜನತೆಗೆ ಬೆಂಗಳೂರಿಗೆ ಸಂಚರಿಸಲು ಇದೀಗ ಒಟ್ಟು 3 ರೈಲುಗಳು ಲಭ್ಯವಾಗಿವೆ. ಕಾರವಾರ-ಮಂಗಳೂರು-ಯಶವಂತಪುರ ರಾತ್ರಿ ರೈಲು ಮಂಗಳೂರಿನಿಂದ ರಾತ್ರಿ 8.45ಕ್ಕೆ ಹೊರಟು ಮರುದಿನ ಬೆಳಗ್ಗೆ 8.25ಕ್ಕೆ ಬೆಂಗಳೂರು ತಲುಪುತ್ತದೆ. ಈ ರೈಲು ಮಂಗಳೂರು, ಸುಬ್ರಹ್ಯಣ – ಹಾಸನ- ಹೊಳೆನರಸಿಪುರ-ಮೈಸೂರು, ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದೆ. ಒಟ್ಟು 505 ಕಿ.ಮೀ. ದೂರವನ್ನು ಕ್ರಮಿಸಲು 11 ತಾಸು ಬೇಕಾಗುತ್ತದೆ.
ಇನ್ನೊಂದು ರೈಲು ಹಗಲುಹೊತ್ತು ವಾರದಲ್ಲಿ ಮೂರು ದಿನ ಮಂಗಳೂರು-ಯಶವಂತಪುರ ನಡುವೆ ಸಂಚರಿಸುತ್ತಿದೆ. ಈ ರೈಲು ಕಾರವಾರ-ಮಂಗಳೂರು- ಸುಬ್ರಹ್ಮಣ್ಯ- ಹಾಸನ- ಅರಸೀಕೆರೆ- ತುಮಕೂರು ಮಾರ್ಗವಾಗಿ ಯಶವಂತಪುರಕ್ಕೆ ಹೋಗುತ್ತಿದೆ. ಒಟ್ಟು 405 ಕಿ.ಮೀ. ದೂರವನ್ನು ಪ್ರಯಾಣಿಸಲು ಹತ್ತೂವರೆ ತಾಸು ಬೇಕಾಗುತ್ತದೆ.
ಇದೀಗ ಆರಂಭಗೊಂಡಿರುವ ನೂತನ ರೈಲು ಮಂಗಳೂರು ಜಂಕ್ಷನ್‌ನಿಂದ ಹೊರಟು ಸುಬ್ರಹ್ಮಣ್ಯ -ಹಾಸನ-ಶ್ರವಣಬೆಳಗೂಳ- ಚೆನ್ನರಾಯಪಟ್ಟಣ- ಕುಣಿಗಲ್-ನೆಲಮಂಗಲ ಮಾರ್ಗವಾಗಿ ಯಶವಂತಕ್ಕೆ ಹೋಗಲಿದೆ. ಒಟ್ಟು 400 ಕಿ.ಮೀ. ದೂರ ಕ್ರಮಿಸಲು 9 ತಾಸುಗಳು ಬೇಕು. ಶ್ರವಣಬೆಳಗೊಳ ಮಾರ್ಗದ ಮೂಲಕ ಸಂಚರಿಸುವ ಬೆಂಗಳೂರು-ಮಂಗಳೂರು ಪ್ರಯಾಣದಲ್ಲಿ ಒಟ್ಟು 3 ತಾಸುಗಳು ಕಡಿತವಾಗಲಿದೆ.
ಕುಡ್ಲ ಎಕ್ಸ್‌ಪ್ರೆಸ್ ರೈಲು ವಾರಕ್ಕೆ ಮೂರು ಬಾರಿ ಮಂಗಳೂರು ಹಾಗೂ ಯಶವಂತಪುರದಿಂದ ಸಂಚರಿಸಲಿದೆ. ರೈಲು ನಂ. 16576 ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಗಾಡಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 11.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು ರಾತ್ರಿ 8.30ಕ್ಕೆ ಯಶವಂತ ಪುರ ತಲುಪಲಿದೆ. ಯಶವಂತಪುರದಿಂದ ರೈಲು ನಂ. 16575 ಪ್ರತಿ ರವಿವಾರ, ಮಂಗಳವಾರ ಹಾಗೂ ಗುರುವಾರ ಸಂಚರಿಸಲಿದೆ. ಯಶವಂತಪುರದಿಂದ ಬೆಳಗ್ಗೆ 7.50ಕ್ಕೆ ಹೊರಡಲಿದ್ದು ಸಂಜೆ 5.30ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿದೆ. ಒಟ್ಟು 14 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 4 ದ್ವಿತೀಯ ದರ್ಜೆ ಚೆಯರ್ ಕಾರ್, 8 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 2 ಸೆಕೆಂಡ್‌ಕಾÉಸ್ ಲಗೇಜ್ -ಕಮ್-ಬ್ರೇಕ್‌ವ್ಯಾನ್ ಅಂಗವಿಕಲರ ಬೋಗಿಗಳು ಸೇರಿವೆ.
ಪ್ರಯಾಣದ ದರ
ಕುಡ್ಲ ಎಕ್ಸ್‌ಪ್ರೆಸ್‌ನಲ್ಲಿ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಪ್ರಯಾಣದರ ಒಟ್ಟು 130 ರೂ. ಆಗಿದೆ. ಬಂಟ್ವಾಳ-30 ರೂ. ಕಬಕ ಪುತ್ತೂರು-30 ರೂ., ಸುಬ್ರಹ್ಮಣ್ಯ ರೋಡ್- 45 ರೂ., ಸಕಲೇಶಪುರ-75 ರೂ., ಹಾಸನ- 85 ರೂ., ಚೆನ್ನರಾಯಪಟ್ಣ-95 ರೂ., ಶ್ರವಣಬೆಳಗೊಳ-95 ರೂ., ಬಿ.ಜಿ. ನಗರ-105 ರೂ., ಯಡಿಯೂರು-110 ರೂ., ಕುಣಿಗಲ್-115 ರೂ., ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ-130 ರೂ.