Advertisement

ಕರ ಭಾರ ತಪ್ಪಿಸಲು ಇನ್ನೂ ಇವೆ ಹಲವು ಉಪಾಯ

11:28 PM Mar 24, 2019 | Sriram |

ಕಳೆದ ವಾರ ಮಾರ್ಚ್‌ 31ರ ಒಳಗಾಗಿ ಮಾಡಬೇಕಾದ ಕರ ಲೆಕ್ಕ ಹಾಗೂ ಹೂಡಿಕೆಯ ಬಗ್ಗೆ ಮಾಹಿತಿಯ ಮೊದಲ ಕಂತನ್ನು ನೀಡಿದ್ದೇನೆ (ಅನುಕ್ರಮ ಸಂಖ್ಯೆ 1-6). ಇದೀಗ ಆ ಲೇಖನದ ದ್ವಿತೀಯ ಭಾಗದಲ್ಲಿ ತೆರಿಗೆ ಹೊರೆಯಿಂದ ಬಚಾವಾಗುವ ಇನ್ನಿತರ ಕೆಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳೋಣ. (ಅನುಕ್ರಮ ಸಂಖ್ಯೆ 7- 12):

Advertisement

1.ವಿದ್ಯಾ ಸಾಲದ ಬಡ್ಡಿ (ಸೆಕ್ಷನ್‌ 80ಇ)
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ ಎಂಟು ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ. ಇಲ್ಲಿ ಅಸಲಿನ ಮರುಪಾವತಿಗೆ ವಿನಾಯಿತಿ ಇಲ್ಲ. ಗಮನಿಸಬೇಕಾದ ಅಂಶ ಏನೆಂದರೆ ಬ್ಯಾಂಕಿನಲ್ಲಿ ಸಾಲ ಯಾರ ಹೆಸರಿನಲ್ಲಿ ಇರುತ್ತದೋ ಅವರ ಹೆಸರಿಗೆ ಮಾತ್ರ ಕರ ವಿನಾಯಿತಿ ಸಿಗುತ್ತದೆ. ಹಾಗಾಗಿ ಅರ್ಜಿ ಹಾಕುವಾಗ ಈವಿಚಾರವಾಗಿ ಕಾಳಜಿ ವಹಿಸಬೇಕು.

2.ಡೊನೇಶನ್‌ (ಸೆಕ್ಷನ್‌ 80 ಜಿ)
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ.50 ಅಥವಾ ಶೇ.100 ಸರ್ಕಾರ ನಿಗದಿಪಡಿಸಿದಂತೆ, ಸಂಬಳದ ಶೇ.10 ಮೀರದಂತೆ ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.

3. ಬಾಡಿಗೆ ರಿಯಾಯಿತಿ (ಸೆಕ್ಷನ್‌ 80 ಜಿಜಿ)
ಸಂಬಳ ಮೂಲಕ ಎಚ್‌ಆರ್‌ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ. 60,000 ವರೆಗೆ ವಿನಾಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ.

4.ಸ್ವಂತ ಅಂಗವೈಕಲ್ಯ (ಸೆಕ್ಷನ್‌ 80 ಯು)
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ 75,000 ರೂ. ಮತ್ತು ಗಂಭೀರ ಊನಕ್ಕೆ 1,25,000 ರೂ. ವಾರ್ಷಿಕ ರಿಯಾಯಿತಿ ಲಭ್ಯವಿದೆ.

Advertisement

5.ಸೆಕ್ಷನ್‌ 80 ಸಿ/ಸಿಸಿಸಿ/ಸಿಸಿಡಿ
ಈ 3 ಸೆಕ್ಷನ್‌ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ 1.5 ಲಕ್ಷ ರೂ.)
– ಎಂಪ್ಲಾಯೀಸ್‌ ಫ್ರಾವಿಡೆಂಟ್‌ ಫ‌ಂಡ್‌ (ಇಪಿಎಸ್‌) – ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಛೆಯಿಂದ ಸ್ವಯಂಪ್ರೇರಣೆಯಿಂದ ಪಿಎಫ್ಗೆ ನೀಡಿದ್ದು ಸಹಿತ. (ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಅದು ಪ್ರತ್ಯೇಕ)
– ಪತಿ ಅಥವಾ ಪತ್ನಿ, ಮಕ್ಕಳ ಜೀವ ವಿಮೆ/ಯುಲಿಪ್‌ನ ವಾರ್ಷಿಕ ಪ್ರೀಮಿಯಂ -ವಿಮಾ ಮೊತ್ತದ ಶೇ.10 ಮಿತಿಯೊಳಗೆ ಪ್ರತಿ ಪಾಲಿಸಿಗೆ. ಸರಿ ಸುಮಾರು ಜೀವ ವಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕರ ವಿನಾಯಿತಿಗೆ ಅರ್ಹವಾದ ಆ ಪ್ರೀಮಿಯಂ ಮೊತ್ತವನ್ನು ಮೊದಲು ತೆಗೆದುಕೊಳ್ಳಿ.
– ಗರಿಷ್ಠ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ ಟ್ಯೂಶನ್‌ ಫೀ. (ಬೇರೆ ಯಾವುದೇ ಫೀಸ್‌ ಆಗಲ್ಲ, ಟ್ಯೂಶನ್‌ ಫೀ ಹೆಸರಿನಲ್ಲಿರುವ ಫೀ ಮಾತ್ರ)
– ಗೃಹಸಾಲದ ಮರುಪಾವತಿಯಲ್ಲಿ (ಇಎಮ…ಐನ) ಅಸಲು ಭಾಗ (ಬಡ್ಡಿ ಬಿಟ್ಟು)
– ಈ ವಿತ್ತ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್‌, ಸ್ಟಾಂಪ್‌ಡ್ನೂಟಿ ವೆಚ್ಚಗಳು.
– ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ ದೇಣಿಗೆ.
– ಅಂಚೆ ಕಚೇರಿಯ ಎನ್‌ಎಸ್‌ಸಿ ಮತ್ತದರ ಬಡ್ಡಿಯ ಮರುಹೂಡಿಕೆ: ಈ ಯೋಜನೆಯ ಮೇಲಿನ ಬಡ್ಡಿಯನ್ನೂ ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ.
– ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್‌ (ELSS) ನಾಮಾಂಕಿತ ಮ್ಯೂಚುವಲ್‌ ಫ‌ಂಡ್‌. ಇಲ್ಲಿ ಯಾವುದೇ ಈಕ್ವಿಟಿ ಫ‌ಂಡುಗಳು ಬರುವುದಿಲ್ಲ. ಇವುಗಳು ಇ.ಎಲ….ಎಸ್‌.ಎಸ್‌ ಅಥವಾ ಟ್ಯಾಕ್ಸ್‌ ಸೇವರ್‌ ಎಂಬ ನಿರ್ದಿಷ್ಟ ಲೇಬಲ್‌ಗ‌ಳೊಂದಿಗೆ ಬಿಡುಗಡೆಯಾಗುತ್ತವೆ.
– ಮ್ಯೂಚುವಲ್‌ ಫ‌ಂಡ್‌ಗಳ ಯುನಿಟ್‌ ಲಿಂಕ್ಡ್ ಪೆನ್ಶನ್‌ ಪ್ಲಾನ್‌ಗಳು (UTI&RBP, Franklin Templeton&TIPP and Reliance Retirement Fund)
– ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರ ನೋಂದಾಯಿತ ಎಫ್ಡಿ: ಇಲ್ಲೂ ಕೂಡಾ 80ಸಿ ಸೆಕ್ಷನ್‌ ಅನ್ವಯ ಕರ ಉಳಿತಾಯಕ್ಕೆ ಎನ್ನುವ ಲೇಬಲ್‌ ಅಗತ್ಯ.ಇವುಗಳ ಮೇಲೆ ಐದು ವರ್ಷಗಳ ಲಾಕ್‌ಇನ್‌ ಇರುತ್ತದೆ.
– ಅಂಚೆ ಕಚೇರಿಯ 5 ವರ್ಷದ ಸೀನಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ (SCSS) ನಲ್ಲಿ ಮಾಡಿದ ಹೂಡಿಕೆ.
– ಸುಕನ್ಯಾ ಸಮೃದ್ಧಿ ಯೋಜನೆ: ಕೇವಲ ಹತ್ತು ವರ್ಷ ಮೀರದ ಹೆಣ್ಮಕ್ಕಳಿಗಾಗಿ ಮಾತ್ರ ತೆರೆಯಬಹುದಾದ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ.
– ಎಲ್‌ಐಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಶನ್‌ ಪ್ಲಾನುಗಳು (ಸೆಕ್ಷನ್‌ 80ಸಿಸಿಸಿ)
– ನ್ಯಾಶನಲ್‌ ಪೆನ್ಶನ್‌ ಸ್ಕೀಂ (NPS)/ಅಟಲ್‌ ಪೆನ್ಶನ್‌ (ಸೆಕ್ಷನ್‌ 80ಸಿಸಿಡಿ): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ ಎರಡು ಸೆಕ್ಷನ್ನುಗಳಲ್ಲಿ ಬರುತ್ತವೆ -80CCD(1) ಮತ್ತು 80CCD(1b). ಮೊದಲೇ ಹೇಳಿದಂತೆ ನಿಮಗೆ ಬೇಕಾದಂತೆ ಬೇಕಾದ ಸೆಕ್ಷನ್‌ಗಳಲ್ಲಿ ರಿಯಾಯಿತಿ ಪಡಕೊಳ್ಳಬಹುದು. ಇದರಲ್ಲಿ ಲಾಭವನ್ನು ಮೊತ್ತ ಮೊದಲು 80CCD(1b) ಅಡಿಯಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. ಅದರಡಿಯಲ್ಲಿ ಬೇರೆ ಆಯ್ಕೆಗಳಿಲ್ಲ. 80CCD(1) ಸೆಕ್ಷನ್‌, 80ಸಿ ಸೆಕ್ಷನ್‌ ಜೊತೆಯಲ್ಲಿ ಬರುವ ಕಾರಣ ಅಲ್ಲಿ ಇತರ ಆಯ್ಕೆಗಳಿವೆ. ಹಾಗಾಗಿ 80ಇಇಈ(1b) ಮಿತಿ ಮೀರಿದರೆ ಉಳಿದ ಮೊತ್ತವನ್ನು 80ಇಇಈ(1) ಅಡಿಯಲ್ಲಿ ತೆಗೆದುಕೊಳ್ಳಬಹುದು.

6. ಎಸ್‌ಬಿ/ಎಫ್ಡಿ/ಆರ್‌ಡಿ ಬಡ್ಡಿಗೆ ಕರವಿನಾಯಿತಿ (ಸೆಕ್ಷನ್‌ 80 ಟಿಟಿಎ/ಟಿಟಿಬಿ)
ಸೆಕ್ಷನ್‌ 80TTA ಅನುಸಾರ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ.10,000ದ ವರೆಗೆ ಬಡ್ಡಿಯ ಮೊತ್ತದಲ್ಲಿ ಸೆಕ್ಷನ್‌ 80ಟಿಟಿಎ ಅನುಸಾರ ಕರ ವಿನಾಯಿತಿ ಇದೆ.

ಅಲ್ಲದೆ ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್‌ 80ಖಖಆಅನುಸಾರ 50,000 ರೂ. ವರೆಗೆ ಬ್ಯಾಂಕ್‌ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. (ಹಿರಿಯ ನಾಗರಿಕರಿಗೆ 80ಖಖಅ ಅನ್ವಯವಾಗುವುದಿಲ್ಲ). ಈ ರೂ. 50000ದಲ್ಲಿ ಎಸ್‌ಬಿ ಬಡ್ಡಿಯ ಜೊತೆಗೆ ಎಫ್ಡಿ ಮತ್ತು ಆರ್‌ಡಿಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next