Advertisement

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

04:30 PM Aug 07, 2023 | Team Udayavani |

ಪ್ರತೀಕ್ಷಾ ರವಿಶಂಕರ್ ಬೆಂಗಳೂರಿನ MCC ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಕಮ್ಯುನಿಕೇಷನ್ ಡಿಸೈನಿಂಗ್ ನಲ್ಲಿ ಉನ್ನತ ವ್ಯಾಸಂಗ ಪಡೆದು ದೃಶ್ಯ ವಿನ್ಯಾಸಕಿಯಾಗಿ ಕೆಲಸ ಮಾಡುತಿದ್ದಾರೆ.

Advertisement

ಸಾಮಾನ್ಯವಾಗಿ ಅಮೇರಿಕಾ ಎಂದರೆ ಮಾಹಿತಿ ತಂತ್ರಜ್ಞರಿಗಷ್ಟೇ ಅವಕಾಶಗಳು ಅಮಿತವಾಗಿವೆ ಎಂದು ಜನ ಬಾವಿಸಿದ್ಧಾರೆ. ಇವರಿಗೆ ಚಿಕ್ಕಂದಿನಿಂದಲೂ ಛಾಯಾಗ್ರಹಣದಲ್ಲಿ ಆಸಕ್ತಿ ಇತ್ತು, ಮೌಂಟ್ ಕಾರ್ಮೆಲ್ ಕಾಲೇಜು ನಲ್ಲಿ ಓದುವಾಗ ಛಾಯಾಗ್ರಹಣ ಹಾಗು ದೃಶ್ಯ ವಿನ್ಯಾಸಕ್ಕೆ ಸಿಕ್ಕ ಉತ್ತೇಜನ, ಏಕೆ ಈ ಆಸಕ್ತಿಯನ್ನೇ ವೃತಿಯನ್ನಾಗೆ ಸ್ವೀಕರಿಸಬಾರದೆಂಬ ಆಲೋಚನೆ ಬಂದಿತು. ಅವರ ತಂದೆ ತಾಯಿಕೂಡ ಅವರ ಬಯಕೆಗೆ ಒತ್ತಾಸೆಯಾಗಿ ನಿಂತರು. ಗ್ರಾಜುಯೇಷನ್ ಮುಗಿಸಿದನಂತರ ಬೆಂಗಳೂರು ಮೂಲದ ಪ್ರವಾಸೋದ್ಯಮ ಕಂಪನಿಯಲ್ಲಿ ಮಾರಾಟ ವಿಶ್ಲೇಷಕಿಯಾಗಿ ಕೆಲಸ ಸಿಕ್ಕಿತು. ಅಲ್ಲಿ ತಮ್ಮ ಕೌಶಲ್ಯಗಳನ್ನು ಬಳಸಿ ಕಂಪನಿಯ ಜಾಲತಾಣ ಮತ್ತು ಆಪ್ ಗಳ ವಿನ್ಯಾಸವನ್ನು ಹೇಗೆ ಸುಧಾರಿಸಬಹುದೆಂದು ಮನಗಂಡರು. ನಂತರ ತಮ್ಮ ಆಸಕ್ತಿಗೆ ತಕ್ಕಂತಹ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರೆ ತಮ್ಮ ವೃತ್ತಿಯಲ್ಲಿ ಹೆಚ್ಚಿನದನ್ನು ಸಾಧಿಸಬಹುದೆಂದು ಆಲೋಚಿಸಿ ಅಮೆರಿಕಾದ ಪ್ರತಿಷ್ಠಿತ parsons ಯೂನಿವೆರ್ಸಿಟಿಯಲ್ಲಿ ಸಂವಹನ ವಿನ್ಯಾಸದಲ್ಲಿ ಪದವಿ ಪಡೆದರು.

ಅವರ ಪ್ರಕಾರ ಅಮೇರಿಕಾ ಅದರಲ್ಲೂ ನ್ಯೂಯಾರ್ಕ್ ನಗರ ಬೇರೆಲ್ಲ ಪ್ರದೇಶಗಳಿಗಿಂತ ಕಲೆ ಮತ್ತು ವಿನ್ಯಾಸದಲ್ಲಿ ಹಲವಾರು ಮೈಲಿಗಳಷ್ಟು ಮುಂದಿದೆ. ಈ ನಗರದ ವೈವಿಧ್ಯಮಯ ಹಾಗು ಪ್ರತಿಭಾ ಪುರಸ್ಕಾರ ಒಂದು ದೊಡ್ಡ ವರ. ಇಲ್ಲಿ ಹಲವಾರು ಜನಾಂಗ, ಸಂಸ್ಕೃತಿಯ ಒಡನಾಟ ಸಂವಹನ ಪ್ರಕ್ರಿಯೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮತ್ತು ವೈವಿಧ್ಯಮಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ.

Advertisement

ನಮ್ಮ ದೇಶದಲ್ಲಿ ಪ್ರತಿಭೆಗೇನು ಕೊರತೆಯಿಲ್ಲ, ಯುವಜನತೆ ಹಲವಾರು ಸಾಮಾಜಿಕ ನೆಲೆಗಟ್ಟಿನ ವಿಚಾರಧಾರೆಗಳಿಗೆ ತೆರೆದುಕೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ಅವರಿಗೆ ಸ್ವಾಭಾವಿಕವಾಗಿ ಕಲೆ. ವಿನ್ಯಾಸಗಳ ಅರಿವು ನಿಖರವಾಗಿ ಅಲ್ಲದಿದ್ದರೂ ಸ್ಟೂಲವಾಗಿಯಾದರೂ ಇದ್ದೇಇರುತ್ತದೆ. ಈ ಅರಿವು ಬೇರೆ ದೇಶದ ಯುವಜನತೆ ಈ ಮಾಧ್ಯಮವನ್ನು ಅರಿಯುವುದಿಕ್ಕಿಂತ ಹೆಚ್ಚು ಬೇಗ ನಮ್ಮ ಯುವಜನತೆ ಅನುಷ್ಠಾನಗೊಳಿಸಲು ಅತ್ಯಂತ ಸಹಕಾರಿಯಾಗಿದೆ. ನಮ್ಮ ಯುವಜನತೆ ಸ್ತೂಲನಕ್ಷೆಯಿಂದ ಹಿಡಿದು ಛಾಯಾಗ್ರಹಣದ ತನಕ ಎಲ್ಲಿಂದರಾದರೂ, ಹೊಸ ವಿನ್ಯಾಸಗಳ ಆವಿಷ್ಕಾರಗಳನ್ನು ಪ್ರಾರಂಭಿಸಬಹುದು. ನಾನು ಕೂಡ ಈ ದಿಕ್ಕಿನಲ್ಲಿ ನನ್ನ ಪ್ರಯಾಣವನ್ನು ಛಾಯಾಗ್ರಾಹಕಿಯಾಗಿ ಆರಂಭಿಸಿದ್ದೆ. ನಿಜ ಇದು ದೃಶ್ಯ ವಿನ್ಯಾಸಕ್ಕಿಂತ ತೀರಾ ಭಿನ್ನ ಆದರೆ ಛಾಯಾಗ್ರಹಣದ ಸೂಕ್ಷ್ಮ ಎಳೆಗಳನ್ನ ದೃಶ್ಯ ವಿನ್ಯಾಸದಲ್ಲಿ ಅಳವಡಿಸಿದ್ದ ಕಾರಣದಿಂದ ನನ್ನ ವಿನ್ಯಾಸ, ಬೇರೆ ವಿನ್ಯಾಸಿಗರಿಗಿಂತ ಪ್ರತ್ಯೇಕವಾಗಿ ಕಾಣಿಸಿತು.

ವಿನ್ಯಾಸ ಒಂದು ಬಹುಮುಖ ಪ್ರತಿಭೆಯ ಕ್ಷೇತ್ರ. ನೀವು ಸೃಜನಾತ್ಮಕ ಕೋಡಿಂಗ್ ನಿಂದ ಹಿಡಿದು ದೃಶ್ಯ ಕಲೆ ತನಕ ಹಲವಾರು ವಿಷಯಗಳನ್ನು ಆಯ್ದುಕೊಳ್ಳಬಹುದು. ಅದರಲ್ಲೂ ನ್ಯೂಯಾರ್ಕ್ ನಂತಹ ನಗರದಲ್ಲಿ ಉತ್ಪನ್ನಗಳ ವಿನ್ಯಾಸ, ಇತರ ರಂಗಗಳಲ್ಲೂ ವಿಪುಲ ಅವಕಾಶಗಳಿವೆ. ಅದರಲ್ಲೂ ಹೊಸ ಆವಿಷ್ಕಾರಗಳಿಗೆ, ಪ್ರಯೋಗಗಳಿಗೆ ದೃಶ್ಯ ವಿನ್ಯಾಸದಲ್ಲಿ ಆಕಾಶದೆತ್ತರ ಅಮಿತ ಅವಕಾಶಗಳಿವೆ. ಇವರಿಗೆ ಚಿಕ್ಕಂದಿನಿಂದಲೂ ಛಾಯಾಗ್ರಹಣದಲ್ಲಿ ಆಸಕ್ತಿ ಇತ್ತು. ಆಸಕ್ತಿಯನ್ನೇ ವೃತ್ತಿಯಾಗಿ ಸ್ವೀಕರಿಸಲು ನಿರ್ಧರಿಸಿ ಅಮೆರಿಕಾಗೆ ತೆರಳಿ ದೃಶ್ಯ ವಿನ್ಯಾಸಕಿಯಾಗಿ ಕೆಲಸ ಮಾಡುತಿದ್ದಾರೆ. ಯುವಜನರು ತಮ್ಮ ಪ್ರತಿಭೆಗಳನ್ನು ಗುರುತಿಸಿ ತಮ್ಮ ಹೃತ್ಪೂರ್ವಕ ಆಸಕ್ತಿಗಳನ್ನು ನಿರಂತರವಾಗಿ ಮುಂದುವರಿಸಿದರೆ ಅವಕಾಶಗಳು ಹುಡುಕಿ ಬರಬಹುದೆಂದು ಅಭಿಪ್ರಾಯ ಪಡುತ್ತಾರೆ.

– ಪ್ರತೀಕ್ಷಾ ಎಸ್. ಆರ್
30 River Court, Apt 1810, Jersey City 07310, United States of America

Advertisement

Udayavani is now on Telegram. Click here to join our channel and stay updated with the latest news.

Next