Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 87 ಹಾಗೂ ಉಡುಪಿ ಜಿಲ್ಲೆಯಲ್ಲಿ 38 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ನೇಮಕ ಆಗಿಲ್ಲ. ಹೀಗಾಗಿ ಇಷ್ಟೂ ಕಡೆಯ ಕಂದಾಯ ಸೇವೆಗೆ ತೊಡಕುಂಟಾಗುತ್ತಿದೆ.
ಸದ್ಯ ದ. ಕ. ಜಿಲ್ಲೆಯಲ್ಲಿ 238 ಹಾಗೂ ಉಡುಪಿ ಜಿಲ್ಲೆಯಲ್ಲಿ 177 ಮಂದಿ ಕರ್ತವ್ಯದಲ್ಲಿದ್ದಾರೆ. ಯಾವ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ ಇಲ್ಲವೋ ಆ ಗ್ರಾಮಕ್ಕೆ ಪ್ರಭಾರ ನೆಲೆಯಲ್ಲಿ ಇವರನ್ನೇ ನಿಯುಕ್ತಿಗೊಳಿಸಲಾಗಿದೆ. ಹೀಗಾಗಿ ಕೆಲವರು 3-4 ಗ್ರಾಮ ಗಳ ಜವಾಬ್ದಾರಿಯನ್ನೂ ನಿರ್ವಹಿಸು ವಂತಾಗಿದೆ. ಇದರಿಂದಾಗಿ ಜನರಿಗೆ ಸೂಕ್ತ ಸಮಯದಲ್ಲಿ ಕಂದಾಯ ಸೇವೆ ಸಿಗುವುದಕ್ಕೆ ಸಮಸ್ಯೆ ಉಂಟಾಗಿದೆ.
Related Articles
Advertisement
ಜತೆಗೆ ಜನನ ಮರಣ ನೋಂದಣಾಧಿಕಾರಿಯಾಗಿಯೂ ಅವರು ಕಾರ್ಯ ನಡೆಸಬೇಕಾಗುತ್ತದೆ. ಆದರೆ ಆಡಳಿತಾಧಿಕಾರಿ ಇಲ್ಲದೆ ಜನರಿಗೆ ಈ ಎಲ್ಲ ಸೇವೆ ಪಡೆಯಲು ದೀರ್ಘ ಕಾಯುವಂತಾಗಿದೆ!
ಕಂದಾಯ ಇಲಾಖೆ: ಬಹು ಹುದ್ದೆಗಳು ಖಾಲಿ!ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತಹಶೀ ಲ್ದಾರ್ ಗ್ರೇಡ್ 2 ಹುದ್ದೆ 10 ಮಂಜೂರಾಗಿದ್ದರೂ 7 ಖಾಲಿ ಇವೆ. ಗ್ರೂಪ್ ಡಿಯಲ್ಲಿ 59ರಲ್ಲಿ 48 ಖಾಲಿ ಇವೆ. ಉಡುಪಿಯಲ್ಲಿ ಉಪತಹಶೀಲ್ದಾರ್ ಹುದ್ದೆ 4 ಖಾಲಿ ಇವೆ. ಡಿ ಗ್ರೂಪ್ 38ರಲ್ಲಿ 24 ಖಾಲಿ ಇವೆ. ಹೀಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಹುದ್ದೆಗಳು ಖಾಲಿ ಇರುವುದರಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಖಾಲಿ ಹುದ್ದೆ ಭರ್ತಿ ಮಾಡಲು ಸರಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಸದ್ಯ ಮಾತುಕತೆ ನಡೆಯುತ್ತಿದ್ದು, ಅಂತಿಮ ತೀರ್ಮಾನವನ್ನು ಸರಕಾರ ಕೈಗೊಳ್ಳಲಿದೆ. ಖಾಲಿ ಇರುವಲ್ಲಿಗೆ ಸಮಸ್ಯೆ ಆಗದಂತೆ ಇತರ ಗ್ರಾಮ ಆಡಳಿತ ಅಧಿಕಾರಿಗಳನ್ನು ಅಧಿಕ ಪ್ರಭಾರದಲ್ಲಿ ನಿಯೋಜಿಸಲಾಗಿದೆ.
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.