Advertisement

20 ಲಕ್ಷ ಕೋಟಿ ರೂ.ರೈತರಿಗಿಲ್ಲ

06:19 AM Jul 02, 2020 | Lakshmi GovindaRaj |

ಬಂಗಾರಪೇಟೆ: ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‌ನಲ್ಲಿ ಕೇವಲ ಕೈಗಾರಿಕೆಗಳಿಗೆ ಮಾತ್ರ ಒತ್ತು ನೀಡಿದ್ದು, ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ  ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಡಿಸಿಸಿ ಬ್ಯಾಂಕ್‌ ಆವರಣದಲ್ಲಿ ತಾಲೂಕಿನ ಹುಲಿಬೆಲೆ ವಿಎಸ್‌ಎಸ್‌ಎನ್‌ ವತಿಯಿಂದ ಮಹಿಳಾ ಸಂಘಗಳಿಗೆ 50 ಲಕ್ಷ ರೂ. ಸಾಲ ವಿತರಿಸಿ ಮಾತನಾಡಿದರು.

Advertisement

ಮೂರು ತಿಂಗಳಿಂದ ಕೋವಿಡ್‌ 19ಕ್ಕೆ  ದೇಶವೇ ತಲ್ಲಣಗೊಂಡಿದೆ. ರೈತರು, ಬಡ ಜನರು, ಕೂಲಿಕಾರ್ಮಿಕರ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಇಂತಹ ಸಮಯದಲ್ಲಿ ಪ್ರಧಾನಿ ಮೋದಿ ವಿಶೇಷ ಪ್ಯಾಕೇಜ್‌  ಘೋಷಣೆಯಿಂದ ರೈತರ ಬದುಕು ಹಸನಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದು ಹುಸಿಯಾಗಿದೆ ಎಂದು ಹೇಳಿದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ಮಾತನಾಡಿ, ಲಾಕ್‌ಡೌನ್‌ನಿಂದ ರೈತರು, ಮಹಿಳಾ  ಸಂಘಗಳಿಂದ ಡಿಸಿಸಿ ಬ್ಯಾಂಕಿಗೆ ಬರಬೇಕಿರುವ ಕಂತುಗಳ ಬಾಕಿ ಬಾರದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ,

ಈಗಾಗಲೇ ತಾಲೂಕಿನಲ್ಲಿ 100 ಕೋಟಿ ರೂ. ಸಾಲ ವಿತರಣೆಯಾಗಿದೆ. ಆದರೂ, ಧೃತಿಗೆಡದೆ ಬ್ಯಾಂಕಿರುವುದೇ ರೈತರ  ಉದ್ದಾರಕ್ಕಾಗಿ ಎಂಬ ಗುರಿಯಿಂದ ಬ್ಯಾಂಕ್‌ ಕೆಲಸ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಹುಲಿಬೆಲೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ವೆಂಕಟೇಶ್‌, ಡಿಸಿಸಿ ಬ್ಯಾಂಕಿನ ಮ್ಯಾನೇಜರ್‌ ಚಂದ್ರಶೇಖರರೆಡ್ಡಿ, ಕಾರ್ಯದರ್ಶಿ ಶ್ರೀನಿವಾಸ್‌ ಮಂಜುನಾಥಗೌಡ, ನಿರ್ದೇಶಕ ಮುನಿಯಪ್ಪ,  ಬೋಡಗುರಿ ಲಕ್ಷ್ಮಮ್ಮ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next