Advertisement

Lok Sabha election: ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಅಭ್ಯರ್ಥಿಗಳೇ ಹೆಚ್ಚು!

05:29 PM Apr 13, 2024 | Team Udayavani |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಪ್ರಚಾರದ ಭರಾಟೆ ತೀವ್ರಗೊಂಡಿದೆ. ಅಭ್ಯರ್ಥಿಗಳು ಉರಿ ಬಿಸಿಲಿನಲ್ಲಿ ಮತಬೇಟೆ ಶುರು ಮಾಡಿದ್ದಾರೆ. ಆದರೆ ಲೋಕಸಭಾ ಚುನಾವಣಾ ಅಖಾಡದಲ್ಲಿ ಮಾತ್ರ ಈ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿ ಇದ್ದಾರೆ.

Advertisement

ಹೌದು.. ಕ್ಷೇತ್ರದ ಪ್ರಬಲ ಅಭ್ಯರ್ಥಿಗಳಾದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ತುಮಕೂರಿನ ಸಿದ್ದಾರ್ಥ ವೈದ್ಯಕಿಯ ಕಾಲೇಜಿನಲ್ಲಿ ಎಂಬಿಬಿಎಸ್‌ ವ್ಯಾಸಂಗ ಮುಗಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಲಂಡನ್‌ನ ವೇಲ್ಸ್‌ ಕಾರ್ಡಿಪ್‌ ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಎಸ್ಸೆಸ್ಸೆಲ್ಸಿ, ಪಿಯುಸಿ ಓದಿವರೆ ಹೆಚ್ಚು: ಐ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಬರೊಬ್ಬರಿ 20 ಮಂದಿ ಪಕ್ಷೇತರ ಅಭ್ಯರ್ಥಿಗಳ ಪೈಕಿ ಬಹುಕರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಓದಿದ್ದರೆ ಕೆಲವರು,4, 5 ಮತ್ತು 6ನೇ ತರಗತಿ ವ್ಯಾಸಂಗ ಮಾಡಿರುವರು ಇದ್ದಾರೆ. ಆ ಪೈಕಿ ಪಕ್ಷೇತರರಾಗಿ ಸ್ಪರ್ಧಿಸಿರುವ ಕೆ.

ಲೋಕ ಸಭಾ ಚುನಾವಣೆ : ಡಾ.ಕೆ.ಸುಧಾಕರ್‌ ಎಂಬಿಬಿಎಸ್‌ ವೈದ್ಯರು, ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಕೈ ಅಭ್ಯರ್ಥಿ ರಕ್ಷಾ ರಾಮಯ್ಯ ವೆಂಕಟೇಶ್‌ ಎಸ್ಸೆಸ್ಸೆಲ್ಸಿ ಓದಿದ್ದರೆ ಎನ್‌.ಸುಧಾಕರ್‌ ಬಿ. ಕಾಂ ಪದವೀದರರಾಗಿದ್ದಾರೆ.

ಇನ್ನೂ ಎಚ್‌.ಸಿ.ಚಂದ್ರಶೇಖರ್‌ ಎಸ್ಸೆಸ್ಸೆಲ್ಸಿ ಓದಿದ್ದರೆ ಡಿ. ಸುಧಾಕರ್‌ ಎಸ್ಸೆಸ್ಸೆಲ್ಸಿ ಹಾಗೂ ಐಟಿಐ ಮಾಡಿದ್ದಾರೆ. ಇನ್ನೂ ಮೋಹಿತ್‌ ನರಸಿಂಹಮೂರ್ತಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದಾರೆ. ನಸುರುಲ್ಲಾ ಕೇವಲ 4ನೇ ತರಗತಿ ಓದಿದ್ದಾರೆ.

Advertisement

ಡಾ.ಎಂ.ಆರ್‌.ರಂಗನಾಥ್‌ ಡಾಕ್ಟರ್‌ ಆಫ್ ಪಿಲಾಸಫಿ ಇನ್‌ ಮ್ಯಾನೆಜ್‌ಮ್ಮೆಂಟ್‌ ಓದಿದ್ದಾರೆ. ಡಿ.ಚಿನ್ನಪ್ಪ ದ್ವಿತೀಯ ಪಿಯುಸಿ ಓದಿದ್ದು, ಜಿ.ಎನ್‌. ರವಿ ಎಂಬುವರು ಐಟಿಐ ಮಾಡಿದ್ದಾರೆ. ರಾಜಣ್ಣ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಶಿಕ್ಷಣ ಪಡೆದಿದ್ದಾರೆ.

ಭಾಸ್ಕರ್‌ ಅಂಕಾಲಮಡಗು ಶಿವಾರೆಡ್ಡಿ ಎಸ್ಸೆಸ್ಸೆಲ್ಸಿ ಓದಿದ್ದಾರೆ. ವಿ.ಎನ್‌.ನರಸಿಂಹರಾವ್‌ ಎಸ್ಸೆಸ್ಸೆಲ್ಸಿ, ಟಿ.ವೆಂಕಟಶಿವವುಡು ಎಸ್ಸೆಸ್ಸೆಲ್ಸಿ, ಎಸ್‌ .ನಾಗೇಶ್‌ 5ನೇ ತರಗತಿ ಓದಿದ್ದಾರೆ. ಇನ್ನೂ ದೇವರಾಜ್‌ ಕೋರೋನಾ ವಾರಿಯರ್ ದ್ವಿತೀಯ ಪಿಯುಸಿ ಓದಿದ್ದಾರೆ.

ವೆಂಕಟೇಶಮೂರ್ತಿ ಬಿ.ಎ. ಎಲ್‌ಎಲ್‌ ಬಿ ಓದಿದ್ದಾರೆ. ರಾಜಾರೆಡ್ಡಿ ಎಸ್ಸೆಸ್ಸೆಲ್ಸಿ, ಜಿ.ಎನ್‌.ಕೋದಂಡರೆಡ್ಡಿ ಎಂಎಸ್‌ಸಿ ಪದವೀಧರರಾಗಿದ್ದಾರೆ. ಜಿ.ಎನ್‌. ವೆಂಕಟೇಶ್‌ ಬಿ.ಎ. ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ.

ವಲಸಪಲ್ಲಿ ಉತ್ತಪ್ಪ ಎಂಬುವರು 6ನೇ ತರಗತಿ ಓದಿದ್ದರೆ, ಜಿ.ಸಂದೇಶ್‌ 10ನೇ ತರಗತಿ ಓದಿದ್ದಾರೆ. ಇನ್ನೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿ.ವಿ.ಲೋಕೇಶ್‌ ನ್ಯಾಷನಲ್‌ ಇನ್ಸಿಟ್ಯೂಟ್‌ ಆಪ್‌ ಎಂಜಿನಿಯರಿಂಗ್‌ ಮೈಸೂರು ವಿಶ್ವ ವಿದ್ಯಾಲಯದಲ್ಲಿ 1989 ರಲ್ಲಿ ಎಂಜನಿಯರಿಂಗ್‌ ಪದವಿ ಪೂರೈಸಿದ್ದಾರೆ.

ಏಕೈಕ ಮಹಿಳಾ ಅಭ್ಯರ್ಥಿ ಕಲಾವತಿ ಎಂ.ಎ. ಅರ್ಥಶಾಸ್ತ್ರ : ಸಿಪಿಎಂ ಪಕ್ಷದ ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಬಾಗೇಪಲ್ಲಿ ನ್ಯಾಷನಲ್‌ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಪಿ.ಮಹದೇವ್‌ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದಾರೆ. ಇನ್ನೂ ಎಸ್‌ಯುಸಿಐ ಪಕ್ಷದಿಂದ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎನ್‌.ಕಲಾವತಿ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸಾತ್ನಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಜಿ.ಸುಬ್ರಮಣಿ ಶೆಟ್ಟಿ ಪಿಯುಸಿ ಓದಿದ್ದಾರೆ. ದಿಗ್ವಿಜಯ ಜನತಾ ಪಾರ್ಟಿ ಎಸ್‌.ನಾಗೇಶ್‌ 5ನೇ ತರಗತಿ ಓದಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಬ್ರಮಣ್ಯ ಶೆಟ್ಟಿ ಪಿಯುಸಿ ಓದಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದ ವಿ.ವೆಂಕಟೇಶಮೂರ್ತಿ ಬಿ.ಎ. ಪದವೀದರರು ಆಗಿದ್ದಾರೆ.

 -ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next