Advertisement

ವೃದ್ಧಾಪ್ಯದ ಸಮಸ್ಯೆ ಹಲವಾರು

07:25 AM May 07, 2019 | mahesh |

ಕಾಯಿಲೆಗಳು ಬರುವುದು ಸಾಮಾನ್ಯ. ಆದರೆ ವೃದ್ಧಾಪ್ಯದಲ್ಲಿ ಅದರಲ್ಲೂ 50 ವರ್ಷ ದಾಟಿದ ಹಿರಿಜೀವಗಳನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು ಹಲವಾರು. ಕೆಲವು ಕಾಯಿಲೆಗಳು ಔಷಧದಿಂದ ಕಡಿಮೆಯಾದರೆ, ಇನ್ನು ಕೆಲವು ಸೈಡ್‌ ಎಫೆಕ್ಟ್ ಉಂಟು ಮಾಡಿ ರೋಗಿಯನ್ನು ಇನ್ನಷ್ಟು ಹೈರಾಣಾಗಿಸುತ್ತದೆ. ಅವುಗಳಲ್ಲಿ ಮುಖ್ಯವಾಗಿ..

Advertisement

ಸ್ನಾಯು ಸೆಳೆತ

ಸ್ನಾಯು ಸೆಳೆತ, ಮಂಡಿ ನೋವು ಹಿರಿಯ ರ ಚಲನೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಇತರರ ಸಹಾಯವಿಲ್ಲದೆ ಅಥವಾ ಇತರರನ್ನು ಅವಲಂಬಿಸದೆ ಎಲ್ಲಿಗೂ ಹೋಗಲಾಗದಂತಹ ಪರಿಸ್ಥಿತಿ ಉಂಟು ಮಾಡುತ್ತದೆ.

ಹೃದಯರೋಗಗಳು
ಹೃದಯ ಸಮಸ್ಯೆ ಇಳಿವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆಹಾರ ಸೇವನೆ ಹಾಗೂ ವ್ಯಾಯಾಮದ ಕೊರತೆಯಿಂದ ಹೃದಯ ರೋಗಗಳು ಕಾಣಿಸಿಕೊಳ್ಳುತ್ತವೆ.

ಮನೆಯಲ್ಲೇ ಪರಿಹಾರ
ಇಳಿ ವಯಸ್ಸಿನಲ್ಲಿ ಕಾಡುವ ಹೆಚ್ಚಿನ ರೋಗಗಳಿಗೆ ವೈದ್ಯರು ಹೇಳುವ ಚಿಕಿತ್ಸೆ ಪಡೆದುಕೊಳ್ಳಬೇಕು. ಅದಕ್ಕೆ ಪೂರಕ ವಾತಾವರಣ ಮನೆಯಲ್ಲಿ ಸೃಷ್ಟಿಸಬೇಕು. ಆಹಾರ ಕ್ರಮದಲ್ಲಿ ಶಿಸ್ತು, ದೇಹಕ್ಕೆ ಪೂರಕವಾದ ವ್ಯಾಯಾಮ, ನಡಿಗೆ ಮಾಡುವ ಮೂಲಕ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು.

ಡಯಾಬಿಟಿಸ್‌
ಡಯಾಬಿಟಿಸ್‌ ಅಥವಾ ಸಕ್ಕರೆ ಕಾಯಿಲೆ ಹಿರಿಯರಿಗೆ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ. ಆದರೂ ಹಿರಿಯರಲ್ಲಿ ಇದು ಅಧಿಕ. ಸಿಹಿ ಪದಾರ್ಥಗಳ ಸೇವನೆ ಹಾಗೂ ಹೆಚ್ಚಿನ ಆಹಾರಗಳ ಸೇವನೆಯನ್ನು ನಿಯಂತ್ರಿಸುವ ಮೂಲಕ ಈ ರೋಗ ವಯೋವೃದ್ಧರ ಮಾನಸಿಕ ಶಕ್ತಿಯನ್ನು ಕುಂದಿಸುತ್ತದೆ.

ರಕ್ತದೊತ್ತಡ
ಅಧಿಕ ರಕ್ತದೊತ್ತಡ ಹಿರಿಯರು ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಎಣ್ಣೆ ಪದಾರ್ಥಗಳ ಹೆಚ್ಚು ಸೇವನೆ ರಕ್ತದೊತ್ತಡಕ್ಕೆ ಮೂಲ ಕಾರಣ. ಇತರ ಹಲವು ರೋಗಗಳ ಸೃಷ್ಟಿಗೆ ಇದು ಕಾರಣವಾಗುತ್ತದೆ.
Advertisement

-ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next