Advertisement
18ರಿಂದ 29 ವರ್ಷ ವಯೋ ಮಾನದ 2 ಕೋಟಿಗೂ ಅಧಿಕ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ನೋಂದಾಯಿತ ಮತದಾರರ ಸಂಖ್ಯೆ ಶೇ.6ರಷ್ಟು ಏರಿಕೆಯಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ. 2019ರಲ್ಲಿ ಮತದಾರರ ಸಂಖ್ಯೆ 91.20 ಕೋಟಿ ಆಗಿತ್ತು.
ಸುಮಾರು 2.63 ಕೋಟಿ ಮಂದಿ ಯನ್ನು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಗೊಳಿಸ ಲಾಗಿದೆ. ಈ ಪೈಕಿ 1.41 ಕೋಟಿ ಮಹಿಳೆಯರಾಗಿದ್ದರೆ, 1.22 ಕೋಟಿ ಪುರುಷರು. ಅಂದರೆ ಪುರುಷ ಮತದಾರರಿಗೆ ಹೋಲಿಸಿದರೆ ಹೊಸದಾಗಿ ಸೇರ್ಪಡೆಗೊಂಡ ಮಹಿಳೆ ಯರ ಪ್ರಮಾಣ ಶೇ. 15ರಷ್ಟು ಹೆಚ್ಚಳವಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ. 88.35 ಲಕ್ಷ ದಿವ್ಯಾಂಗರನ್ನೂ ಪಟ್ಟಿಗೆ ಸೇರಿಸಲಾಗಿದ್ದು, ಇದು ಹಕ್ಕು ಚಲಾವಣೆಯಲ್ಲಿ ಎಲ್ಲರನ್ನೂ ಪಾಲ್ಗೊಳ್ಳು ವಂತೆ ಮಾಡುವಲ್ಲಿ ನೆರವಾಗಲಿದೆ ಎಂದಿದೆ. 2019ರ ಚುನಾವಣೆಯ ವೇಳೆ ದಿವ್ಯಾಂಗ ಮತದಾರರ ಸಂಖ್ಯೆ 45.64 ಲಕ್ಷವಾಗಿತ್ತು.
Related Articles
ಈ ಬಾರಿ ಮನೆ-ಮನೆಗೆ ತೆರಳಿ ದೃಢೀಕರಣ ಪ್ರಕ್ರಿಯೆ ಕೈಗೊಂಡು, ಸುಮಾರು 1.65 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಮೃತಪಟ್ಟವರು, ಖಾಯಂ ಆಗಿ ಬೇರೆಡೆಗೆ ವಲಸೆ ಹೋದವರು ಮತ್ತು ಡುಪ್ಲಿಕೇಟ್ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದೂ ಆಯೋಗ ತಿಳಿಸಿದೆ.
Advertisement
ಇನ್ನು ತೃತೀಯ ಲಿಂಗಿ ಮತದಾರರ ಸಂಖ್ಯೆ 2014ರಲ್ಲಿ 39 ಸಾವಿರ ಇದ್ದದ್ದು, ಈ ಬಾರಿ 48 ಸಾವಿರಕ್ಕೆ ಏರಿಕೆಯಾಗಿದೆ ಎಂದೂ ಮಾಹಿತಿ ನೀಡಿದೆ.