Advertisement
ಇದೀಗ ಅತ್ಯಂತ ಪ್ರಕಾಶಮಾನವಾಗಿರುವ ಗುರು ಮತ್ತು ಶನಿ ಗ್ರಹಗಳ ಮಧ್ಯದಿಂದ ಇಂಟರ್‌ನ್ಯಾಶನಲ್ ಸ್ಪೇಸ್ ಸ್ಟೇಷನ್ (ಐಖಖ) ಸೆ. 13ರಂದು ಸಂಜೆ ಹಾದು ಹೋಗಲಿದ್ದು, ಐಎಸ್‌ಎಸ್ ಉಪಗ್ರಹದೊಂದಿಗೆ ಗುರು ಗ್ರಹದ ಹೊಳಪು ಮತ್ತಷ್ಟು ವರ್ಧಿಸಲಿದೆ. ಐಎಸ್‌ಎಸ್‌ನಲ್ಲಿ ಈಗ ಮೂವರು ಗಗನಯಾತ್ರಿಗಳಿದ್ದಾರೆ.
ಕೆಲವು ತಿಂಗಳಿಂದ ರಷ್ಯಾ ದೇಶದ ಏನಾಟೊಲಿ ಇವ್ಯಾನಿಶಿನ್ ಮತ್ತು ಇವಾನ್ ವ್ಯಾಗನರ್ ಹಾಗೂ ಅಮೆರಿಕಾದ ಕ್ರಿಸ್ ಕ್ಯಾಸಿಡಿ ಈ ಉಪಗ್ರಹದಲ್ಲಿ ವಾಸಿಸುತ್ತಿದ್ದಾರೆ. ಇವರನ್ನು ಹೊತ್ತ ಐಎಸ್‌ಎಸ್ ಸೆ.13ರಂದು 7.30ರ ಹೊತ್ತಿಗೆ ನೈಋತ್ಯ ದಿಕ್ಕಿನ ಕ್ಷಿತಿಜ ದಿನ ಉದಯವಾಗಿ ವಾಯುವ್ಯ ದಿಕ್ಕಿನಲ್ಲಿ ಹಾದು ಹೋಗುವುದು ಗೋಚರಿಸಲಿದೆ. ಈ ಪ್ರಯಾಣದಲ್ಲಿ ಐಎಸ್‌ಎಸ್ ಅನ್ನು ಗುರು ಹಾಗು ಶನಿ ಗ್ರಹಗಳ ನಡುವಿನಲ್ಲಿ 7.32ಕ್ಕೆ ಕಾಣಬಹುದಾಗಿದೆ. ಎಲ್ಲರೂ ನೋಡಬಹುದು
ಐಎಸ್‌ಎಸ್ ಸೆ. 13ರಂದು ಸಂಜೆ 7.30ರಿಂದ 7.33ರ ವರೆಗೆ ಆಕಾಶ ದಲ್ಲಿ ಅತಿ ಪ್ರಕಾಶಮಾನವಾಗಿ ಹೊಳೆಯುತ್ತದೆ. 520 ಕಿ.ಮೀ. ಎತ್ತರದಲ್ಲಿ ಈ ಎರಡು ಗ್ರಹಗಳ ಮಧ್ಯದಲ್ಲಿ ಹಾದು ಹೋಗುವ ಈ ದೃಶ್ಯವನ್ನು ಪ್ರತಿಯೋರ್ವರು ಕಣ್ತುಂಬಿಸಿಕೊಳ್ಳಬಹುದು.
Related Articles
ಹಲವು ದೇಶಗಳು ಒಟ್ಟುಗೂಡಿ ಐಎಸ್‌ಎಸ್ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಕಳೆದ 21 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಇದು ಸುಮಾರು 410 ಕಿ.ಮೀ. ಎತ್ತರದಲ್ಲಿ ಪ್ರತಿ ಗಂಟೆಗೆ 27,500 ಕಿ.ಮೀ. ವೇಗದಲ್ಲಿ ಭೂಮಿಯ ಸುತ್ತ ದಿನಕ್ಕೆ ಸುಮಾರು 15 ಬಾರಿ ಪರಿಭ್ರಮಿಸುತ್ತಿದೆ. ಇಲ್ಲಿಯವರೆಗೆ ಐಎಸ್‌ಎಸ್ ಮೂಲಕ ಅಂತರಿಕ್ಷದ ಬಗ್ಗೆ ಹಲವು ಪ್ರಯೋಗಗಳು ಮತ್ತು ಸಂಶೋಧನೆಗಳು ನಡೆದಿದ್ದು, ಈ ಹಿಂದೆ ಒಂದು ವರ್ಷಗಳ ಕಾಲ ಓರ್ವ ಗಗನಯಾತ್ರಿ ಇಲ್ಲಿ ವಾಸಿಸಿದ್ದಾರೆ.
Advertisement
ಈ ದಿನ ಐಎಸ್‌ಎಸ್ -3.5 ಪ್ರಮಾಣ (magnitude)ದಷ್ಟು ಹೊಳಪು ಹೊಂದಿದೆ ಖಗೋಳಶಾಸ್ತ್ರಜ್ಞರು ಎಂದು ಗುರುತಿಸುತ್ತಾರೆ. ಇದರೊಂದಿಗೆ ಗುರು ಗ್ರಹ 2.48 ಹಾಗೂ ಶನಿ ಗ್ರಹ 0.38ರಷ್ಟು ಪ್ರಮಾಣ ಇರುತ್ತದೆ. ಹಾಗಾಗಿ ಅಂದು ಸಂಜೆ ಸಂಜೆ 7.30ರಿಂದ 7.33ರ ವರೆಗೆ ಆಕಾಶದಲ್ಲಿ ಐಎಸ್‌ಎಸ್ ಉಪಗ್ರಹ ಅತೀ ಪ್ರಕಾಶಮಾನವಾಗಿ ಹೊಳೆಯುತ್ತದೆ.