Advertisement
ಇದೀಗ ಕಟಪಾಡಿ ಗ್ರಾ.ಪಂ. ಆಡಳಿತ ಮಂಡಳಿಯು ಸೂಕ್ತ ರೂಪುರೇಖೆಯೊಂದಿಗೆ ಸರಕಾರಿಗುಡ್ಡೆ ಸಾರ್ವಜನಿಕ ಹಿಂದೂ ರುದ್ರಭೂಮಿಯ ತ್ಯಾಜ್ಯ ಭರಿತ ಬ್ಲ್ಯಾಕ್ ಸ್ಪಾಟ್‌ನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಗ್ರೀನ್ ಸ್ಪಾಟ್ ಆಗಿ ಬದಲಾಯಿಸಿದೆ.
ಇಲ್ಲಿ ಕಹಿಬೇವು, ಲಿಂಬೆ, ಮಟ್ಟುಗುಳ್ಳ, ನೆಲ್ಲಿಕಾಯಿ ಸಹಿತ ಆಯುರ್ವೇದಿಕ್, ಔಷಧೀಯ ಗುಣವುಳ್ಳ ಅನೇಕ ಗಿಡಗಳನ್ನು ನೆಡಲಾಗಿದೆ. ಅದಕ್ಕೆ ಸೂಕ್ತ ಕಟ್ಟೆಯನ್ನು ಕಟ್ಟಿ ಪ್ರತಿಯೊಂದೂ ಗಿಡದ ಬುಡಕ್ಕೆ ಪೈಪ್‌ಲೈನ್ ಕೂಡ ಅಳವಡಿಸಿ ಹನಿ ನೀರಾವರಿ ತಂತ್ರಜ್ಞಾನದ ಮೂಲಕ ಗಿಡಗಳ ಬೆಳವಣಿಗೆಗೆ ಪ್ರಾಶಸ್ತ್ಯವನ್ನು ನೀಡಲಾಗಿದೆ. ಮಟ್ಟುಗುಳ್ಳದ ಫಸಲು
ಇಲ್ಲಿ ನೆಡ ಲಾಗಿರುವ ಮಟ್ಟುಗುಳ್ಳದ ಗಿಡದಲ್ಲಿ ಈಗಾಗಲೇ ಮಟ್ಟುಗುಳ್ಳದ ಫಸಲು ಲಭಿಸಿದೆ. ಪ್ರಥಮ ಫಸಲನ್ನು ಗ್ರಾಮ ದೇಗುಲಕ್ಕೆ ಸಮರ್ಪಿಸಲಾಗಿದೆ ಎನ್ನುವ ಶ್ಮಶಾನ ನಿರ್ವಾಹಕ ಕಿಶೋರ್ ಪೂಜಾರಿ ಹಾಗೂ ಸಿಬಂದಿ ಹಸುರು ವಲಯವನ್ನು ಪಾಲನೆ ಮಾಡುತ್ತಿದ್ದಾರೆ.
Related Articles
ಸುಮಾರು ವಿವಿಧ ಬಗೆಯ 85 ಗಿಡಗಳನ್ನು ನೆಡಲಾಗಿದ್ದು, ಸುಸಜ್ಜಿತ ಹಸುರುವನದ ನಿರ್ಮಾಣಗೊಂಡಿದೆ. ಹಣ್ಣು ಹಂಪಲುಗಳ ಗಿಡಗಳು ಬಾನಾಡಿಗಳಿಗೂ ಆಹಾರ, ಆಶ್ರಯ ನೀಡು ತ್ತಿದೆ. ಕಹಿಬೇವಿನ ಸೊಪ್ಪುಗಳನ್ನು ಈಗಾ ಗಲೇ ಕೆಲವು ಮಂದಿ ಕೇಳಿ ಪಡೆದುಕೊಂಡು ಉಪಯೋಗಿಸುತ್ತಿದ್ದಾರೆ.
Advertisement
ಗ್ರಾಮದ ಸ್ವಚ್ಛತೆಗೆ ಸಹಕರಿಸಿ ಈ ಭಾಗದಲ್ಲಿ ಕಸದ ರಾಶಿಗೆ ಮುಕ್ತಿ ಹಾಗೂ ಸ್ವಚ್ಛತೆಗೆ ಮಹತ್ವ ನೀಡುವ ದೃಷ್ಟಿಯಿಂದ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿ ಪಂಚಾಯತ್ ಆಡಳಿತವು ಕಾರ್ಯೋ ನ್ಮುಖವಾಗಿದ್ದು, ಆ ನಿಟ್ಟಿನಲ್ಲಿ ಪ್ರಥಮವಾಗಿ ಶ್ಮಶಾನ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಗ್ರೀನ್ ಸ್ಪಾಟ್ ನಿರ್ಮಾಣ ಮಾಡಿದ್ದು, ಯಶಸ್ವಿಯಾಗಿದ್ದೇವೆ. ಸಾರ್ವಜನಿಕರು, ಗ್ರಾಮಸ್ಥರು ನಮ್ಮ ಗ್ರಾಮದ ಸ್ವಚ್ಛತೆಗಾಗಿ ಇನ್ನಷ್ಟು ಹೆಚ್ಚು ಸಹಕರಿಸಿರಿ
– ಇಂದಿರಾ ಎಸ್. ಆಚಾರ್ಯ, ಅಧ್ಯಕ್ಷೆ,, -ಅಬೂಬಕರ್ ಎ.ಆರ್., ಉಪಾಧ್ಯಕ್ಷ,
ಮಮತಾ ವೈ.ಶೆಟ್ಟಿ., ಪಿ.ಡಿ.ಒ., ಕಟಪಾಡಿ ಗ್ರಾ.ಪಂ. – ವಿಜಯ ಆಚಾರ್ಯ ಉಚ್ಚಿಲ