Advertisement

ಆಗ ಟೀಕೆ- ಈಗ ಅನುಕರಣೆ: ಬಿಎಸ್‌ವೈ

12:16 AM Apr 03, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಹಾಗೂ ಅಭಿವೃದ್ಧಿ ಮಾದರಿಗೆ ಹೆದರಿದ ಕಾಂಗ್ರೆಸ್‌ ರೈತರಿಗೆ ಪೊಳ್ಳು ಭರವಸೆ ನೀಡಿ ಚುನಾವಣೆ ಸಂದರ್ಭದಲ್ಲಿ ಜನರ ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

Advertisement

ದೇಶದಲ್ಲಿ 55 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದರೂ ಕಾಂಗ್ರೆಸ್‌ ನಾಯಕರಿಗೆ ರೈತರು ನೆನಪಾಗಲಿಲ್ಲ. ಮೋದಿಯವರು ಸಣ್ಣ ಹಿಡುವಳಿದಾರರಿಗೆ ವಾರ್ಷಿಕ 6000 ರೂ. ನೆರವು ಘೋಷಿಸಿದ ಬಳಿಕ ಗಾಬರಿಗೊಂಡಿದ್ದಾರೆ.

ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಛತ್ತೀಸ್‌ಗಡದಲ್ಲಿ ಈವರೆಗೆ ರೈತರ ಸಾಲ ಮನ್ನಾ ಆಗಿಲ್ಲ. ಹಾಗಿದ್ದರೂ ಸಾಲ ಮುಕ್ತಿ ಎಂಬ ಸುಳ್ಳು ಭರವಸೆ ನೀಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಈ ಹಿಂದೆ 2009ರಲ್ಲಿ ನಾನು ಕೃಷಿ ಬಜೆಟ್‌ ಮಂಡಿಸಿದಾಗ ಕಾಂಗ್ರೆಸ್ಸಿಗರು ಟೀಕಿಸಿದ್ದರು.

ಆದರೆ ಈಗ ಕೃಷಿ ಬಜೆಟ್‌ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ರೈತರ ಬಗ್ಗೆ ಕಾಳಜಿ ತೋರುತ್ತಿರುವ ಕಾಂಗ್ರೆಸ್‌ ಸ್ವಾಮಿನಾಥನ್‌ ವರದಿಯನ್ನು ಏಕೆ ಜಾರಿಗೊಳಿಸಿಲ್ಲ. 17 ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next