Advertisement
ಶ್ರೀ ರಾಮನವಮಿಯನ್ನು ಕಳೆದ ಕಳೆದ 43 ವರ್ಷಗಳಿಂದಲೂ ತೆಕ್ಕಟ್ಟೆ ಶೇಷ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಶ್ರೀ ರಾಮನವಮಿಯ ಭಜನ ಮಂಗಲೋತ್ಸವದ ಬಳಿಕ ಸಂಪ್ರದಾಯ ದಂತೆ ರಾಮ, ಲಕ್ಷಣ, ಹನುಮಂತನ ವೇಷ ತೊಟ್ಟ ಪುಟಾಣಿಗಳು ಮೆರವಣೆಗೆಯ ಮೂಲಕ ಸಾಗಿ ಬಂದು, ಶ್ರೀರಾಮ ವೇಷಧಾರಿ ತನ್ನ ಬಾಣದಿಂದ ಹತ್ತು ತಲೆಯ ರಾವಣನ ಬೃಹತ್ ಪ್ರತಿಕೃತಿಯನ್ನು ದಹಿಸಿದರು. ದುಷ್ಟ ಸಂಹಾರದ ಬಳಿಕ ನೆರೆದಿದ್ದ ಭಕ್ತರು ಬಣ್ಣಗಳನ್ನು ಎರಚಿ ಸಂಭ್ರಮ ಪಟ್ಟರು.