ಅಂಚೆ ಕಚೇರಿಗೆ ನಿವೇಶನ ಮೀಸಲಿರಿಸಿ ಹಲವು ವರ್ಷಗಳೇ ಸಂದಿವೆ. ಆದರೆ ಕಟ್ಟಡ ನಿರ್ಮಾಣಕ್ಕೆ ಅಂಚೆ ಇಲಾಖೆ ಮುಂದಾಗಿಲ್ಲ. ಕಾರಣ ಈ ನಿವೇಶನ ತುಸು ದೂರದಲ್ಲಿರುವುದು ಮತ್ತು ಕಟ್ಟಡ ನಿರ್ಮಾಣ, ನಿರ್ವಹಣೆ ವೆಚ್ಚಕ್ಕಿಂತಲೂ ಸದ್ಯ ಖಾಸಗಿ ಕಟ್ಟಡದಲ್ಲಿರುವ ಪುಟ್ಟ ಜಾಗದಲ್ಲೇ ದಿನದ ವ್ಯವಹಾರ ನಡೆಯುತ್ತಿದೆ.
Advertisement
ಗಿಡಗಂಟಿಗಳಿಂದ ಆವೃತಅಂಚೆ ಕಚೇರಿಗಾಗಿ ಸ.ನಂ. 233/4 ಬಿ2ರಲ್ಲಿ ತೆಕ್ಕಟ್ಟೆ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡದ ಸಮೀಪ ಸುಮಾರು 15 ಸೆಂಟ್ಸ್ ಜಾಗ ಕಾದಿರಿಸಲಾಗಿದೆ. ಅಂಚೆ ಕಚೇರಿ ಜಾಗ ಎಂದು ಫಲಕವಿದೆ.
ಈಗಿರುವ ಕಚೇರಿಯಲ್ಲಿ ಉಳೂ¤ರು, ಕೆದೂರು, ಕೊರ್ಗಿ ಸೇರಿದಂತೆ ಗ್ರಾಮೀಣ ಶಾಖೆಗಳ ಆರ್‌ಡಿ, ರೂರಲ್ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ದಾಖಲೆಗಳ ಕ್ರೋಡೀಕರಣ ಸೇರಿ ದಂತೆ ಇನ್ನಿತರ ಕಾರ್ಯ ಒತ್ತಡಗಳು ಹೆಚ್ಚಾಗಿವೆ.
ಪ್ರಸ್ತುತ ಅಂಚೆ ಕಚೇರಿಯಲ್ಲಿ ಉಪ ಅಂಚೆ ಪಾಲಕರು ಹಾಗೂ ಇಡಿಡಿ ಅಡಿಯಲ್ಲಿ ಇಬ್ಬರು ಸಿಬಂದಿ ಕಾರ್ಯನಿರ್ವಹಿಸುತ್ತಿದ್ದು ಓರ್ವ ಸಿಬಂದಿ ನಿವೃತ್ತಿ ಹೊಂದಿದ್ದು, ಹುದ್ದೆ ಖಾಲಿ ಇದೆ.
Related Articles
ಅಂಚೆ ಇಲಾಖೆಗೆ ಸಂಬಂಧಪಟ್ಟ ಕಾದಿರಿಸಿದ ಜಾಗದ ಮರು ಸರ್ವೆ ಕಾರ್ಯವಾಗಬೇಕಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ರಿಗೆ ಪತ್ರ ಬರೆದಿದ್ದು, ಸರ್ವೆಗೆ ದಿನಾಂಕ ನಿಗದಿ ಪಡಿಸಿದ್ದಾರೆ. ವರದಿ ಕೈಸೇರಿದ ಬಳಿಕವಷ್ಟೇ ಕೇಂದ್ರ ಕಚೇರಿಗೆ ವರದಿ ಕಳುಹಿಸುತ್ತೇವೆ. ಮುಂದಿನ ದಿನಗಳಲ್ಲಿ ಕೇಂದ್ರ ಕಚೇರಿಯ ಫಂಡ್ಸ್‌ನ ಸ್ಥಿತಿಗತಿಯ ಆಧಾರದ ಮೇಲೆ ಕಾದಿರಿಸಿದ ಸ್ಥಳದಲ್ಲಿಯೇ ಅಂಚೆ ಕಚೆೇರಿಯ ಕಟ್ಟಡ ನಿರ್ಮಾಣವಾಗಲಿದೆ.
– ರಾಜಶೇಖರ್ ಭಟ್, ಅಂಚೆ ಅಧೀಕ್ಷಕರು, ಉಡುಪಿ
Advertisement