Advertisement

ತೆಕ್ಕಟ್ಟೆ : ಕಾರು ಪಲ್ಟಿಯಾಗಿ ಪೊಲೀಸ್ ಸಿಬ್ಬಂದಿಗೆ ಗಾಯ

08:34 AM May 17, 2020 | sudhir |

ತೆಕ್ಕಟ್ಟೆ: ಕಾರ್ಕಳ ದಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಕಾರೊಂದು ಚಾಲಕನ ‌ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಸಿಬಂದಿಯೊಬ್ಬರು ಗಾಯಗೊಂಡ ಘಟನೆ ಶನಿವಾರ ‌ಮುಂಜಾನೆ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ಬೈಂದೂರು ಶಿರೂರು ಟೊಲ್ ಗೇಟ್ ನಿಂದ ಕ್ವಾರಂಟೈನ್ ಗಾಗಿ ವ್ಯಕ್ತಿಯೊಬ್ಬರನ್ನು ಕಾರ್ಕಳಕ್ಕೆ ಬಿಟ್ಟು ಹಿಂದಿರುಗುತ್ತಿದ್ದಾಗ ಪೊಲೀಸ್ ಕಾರ್ಯ ನಿರ್ವಹಣೆಯ ಖಾಸಗಿ ವಾಹನ ತೆಕ್ಕಟ್ಟೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಏರಿ ಪಲ್ಟಿಯಾಗಿದೆ. ಪರಿಣಾಮ ಪೊಲೀಸ್ ಸಿಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಚಿತ್ರ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next