Advertisement

ದ್ವಿಚಕ್ರ ವಾಹನದಲ್ಲಿದ್ದ  ಚಿನ್ನಾಭರಣ ಕಳ್ಳತನ-ಬಂಧನ

05:21 PM Apr 12, 2018 | |

ಹುಬ್ಬಳ್ಳಿ: ದ್ವಿಚಕ್ರ ವಾಹನಗಳ ಡಿಕ್ಕಿಯಲ್ಲಿಟ್ಟಿದ್ದ ನಗ-ನಾಣ್ಯ, ಇನ್ನಿತರೆ ವಸ್ತುಗಳನ್ನು ಕದ್ದೊಯ್ಯುತ್ತಿದ್ದ ಖದೀಮನನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 1.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 5 ಮೊಬೈಲ್‌, 12 ವಾಚ್‌ ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಗಂಗಾಧರ ನಗರ ಸೆಟ್ಲಮೆಂಟ್‌ನ ನಾಗೇಶ ಸಿ. ಬೆಸ್ತರ ಎಂಬಾತನೆ ಬಂಧಿತನಾದವ. ಏ. 4ರಂದು ಉಳ್ಳಾಗಡ್ಡಿಮಠ ಓಣಿಯ ಸಂಜು ಬಾರ್‌ ಬಳಿ ಹಳೇಹುಬ್ಬಳ್ಳಿ ನೇಕಾರ ನಗರದ ವಿಶ್ವನಾಥ ರೇಣಕೆ ಎಂಬುವವರು ದ್ವಿಚಕ್ರವಾಹನ ನಿಲ್ಲಿಸಿ ಡ್ರಾಯ್‌ಫ್ರುಟ್ಸ್‌ ತರಲು ಹೋಗಿದ್ದರು.

Advertisement

ಆಗ ಕಳ್ಳನೊಬ್ಬ ಅವರ ವಾಹನದ ಡಿಕ್ಕಿಯಲ್ಲಿಟ್ಟಿದ್ದ ಅಂದಾಜು 82,600 ರೂ. ಮೌಲ್ಯದ ಚಿನ್ನಾಭರಣಗಳನ್ನು ಖದೀಮರು ಕಳುವು ಮಾಡಿದ್ದರು. ಈ ಕುರಿತು ಶಹರ ಠಾಣೆಯಲ್ಲಿ ದೂರು ಕೊಟ್ಟಿದ್ದರು. ದೂರಿನನ್ವಯ ಶಹರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ, ಕಲಾದಗಿ ಓಣಿಯಲ್ಲಿ ದ್ವಿಚಕ್ರ ವಾಹನಗಳ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ನಾಗೇಶನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.

ಆಗ ಅವನು ತನ್ನ ಬಳಿಯಿರುವ ಕೀಗಳ ಮೂಲಕ ದ್ವಿಚಕ್ರವಾಹನಗಳ ಡಿಕ್ಕಿಯಲ್ಲಿಟ್ಟಿದ್ದ ವಸ್ತುಗಳನ್ನು ಕಳುವು ಮಾಡುತ್ತಿದ್ದುದಾಗಿ ಬಾಯಿಬಿಟ್ಟಿದ್ದಾನೆ. ನಂತರ ಪೊಲೀಸರು ಆತನಿಂದ ಕಳುವು ಮಾಡಿದ್ದ 28ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಗಳ 5 ಮೊಬೈಲ್‌, 12 ವಾಚ್‌ ವಶಪಡಿಸಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next