Advertisement

ಗಿಡಮೂಲಿಕೆ ಕಳವು: ರಹಸ್ಯವಾಗಿ ಹಿಮಾಲಯ ತಪ್ಪಲಿಗೆ ಚೀನ ಲಗ್ಗೆ

12:45 AM Dec 26, 2022 | Team Udayavani |

ಹೊಸದಿಲ್ಲಿ/ಬೀಜಿಂಗ್‌: ಲಡಾಖ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ಪದೇ ಪದೆ ಚೀನ ಸೇನೆ ವಿನಾಕಾರಣ ಅತಿ ಕ್ರಮಿಸಿ ತಂಟೆ ಮಾಡುತ್ತಿದೆ. ಆದರೆ ಡ್ರ್ಯಾಗನ್‌ ಸೇನೆ ಹಿಮಾಲಯ ಪರ್ವತ ವ್ಯಾಪ್ತಿಯಲ್ಲಿ ಬೆಳೆಯುವ ಕಾರ್ಡಿಸೆಪ್ಸ್‌ ಎಂಬ ಗಿಡಮೂಲಿಕೆ¿ನ್ನು ಪಡೆದು ಕೊ ಳ್ಳಲೂ ಚೀನ ಸೇನೆ ದೇಶದ ನೆಲಕ್ಕೆ ಸದ್ದಿಲ್ಲದೆ ಬಂದು ಹೋಗು ತ್ತಿರುವ ಅಂಶ ರವಿವಾರ ಬೆಳಕಿಗೆ ಬಂದಿದೆ.

Advertisement

ಇಂಡೋ-ಪೆಸಿಫಿಕ್‌ ಸೆಂಟರ್‌ ಫಾರ್‌ ಸ್ಟ್ರಾಟಜಿಕ್‌ ಕಮ್ಯೂನಿಕೇಶನ್ಸ್‌ ಎಂಬ ಸಂಸ್ಥೆ ಚೀನ ಯೋಧರ ಮತ್ತೂಂದು ಕಳ್ಳಾಟವನ್ನು ದೃಢಪಡಿಸಿದೆ. ಈ ಗಿಡ ಮೂಲಿಕೆ ಭಾರತದ ವ್ಯಾಪ್ತಿಯಲ್ಲಿ ಇರುವ ಸಿಕ್ಕಿಂ ಸಹಿತ ಹಿಮಾಲಯ ಪರ್ವತ ಮತ್ತು ಚೀನದ ಕ್ವಿಂಘೈ-ಟಿಬೆಟಿಯನ್‌ ವ್ಯಾಪ್ತಿ ಯಲ್ಲಿ ಬೆಳೆಯುತ್ತಿದೆ. ಜಗತ್ತಿನ ಮಾರು ಕಟ್ಟೆಯಲ್ಲಿ ಅದಕ್ಕೆ 1,072.50 ಮಿಲಿಯನ್‌ ಡಾಲರ್‌ ಬೆಲೆ ಇದೆ.

ಚೀನ ವ್ಯಾಪ್ತಿಯಲ್ಲಿ ಸದ್ಯ ಅದು ಹೇರಳವಾಗಿ ಬೆಳೆಯುತ್ತಿಲ್ಲ. ಹೀಗಾಗಿ ಕಾರ್ಡಿ ಸೆಪ್ಸ್‌ ಅನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ರಹಸ್ಯ ವಾಗಿ ಭಾರತಕ್ಕೆ ಬರುತ್ತಿದೆ.

ಅನುಕೂಲವೇನು?
ಇದೊಂದು ಸಾಂಪ್ರದಾಯಿಕ ಔಷಧವಾಗಿದೆ. ಅದನ್ನು ಬಳಕೆ ಮಾಡುವುದರಿಂದ ಉತ್ತಮ ರೀತಿಯ ನಿದ್ರೆ, ಶಕ್ತಿ, ಹಸಿವು, ಕಾಮಾಸಕ್ತಿ, ಸಹನೆ ಸಹಿತ ಹಲವು ಅಂಶಗಳನ್ನು ವೃದ್ಧಿಸಿ ಕೊಳ್ಳಲು ನೆರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next