Advertisement

ಚಿನ್ನದ ಮೂಗುತಿಗಳ ಕಳವು

11:56 PM Apr 28, 2023 | Team Udayavani |

ಉಡುಪಿ: ಜುವೆಲರಿ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಮೂಗುತಿಗಳು ಕಳವಾದ ಘಟನೆ ನಡೆದಿದೆ.

Advertisement

ಉಡುಪಿಯ ಕನಕದಾಸ ರಸ್ತೆಯಲ್ಲಿರುವ ಹರ್ಷಿತಾ ಜುವೆಲರಿ ಶಾಪ್‌ನಲ್ಲಿ ಎ. 27ರಂದು ಅಂದಾಜು 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ಪುರುಷರು ಅಂಗಡಿಗೆ ಬಂದು ಮೂಗುತಿ ಬಗ್ಗೆ ಕೇಳಿದ್ದರು. ಈ ವೇಳೆ ಅಂಗಡಿ ಮಾಲಕರು ಚಿನ್ನದ ಮೂಗುತಿ ಇರುವ ಪ್ಯಾಕೆಟ್‌ಗಳನ್ನು ತೋರಿಸಿದ್ದರು. ಆರೋಪಿಗಳು ಸ್ವಲ್ಪ ಹೊತ್ತು ಮಾತನಾಡುತ್ತಾ ಮೂಗುತಿಗಳನ್ನು ನೋಡಿ ಅದರಲ್ಲಿದ್ದ 1 ಮೂಗುತಿ ಪ್ಯಾಕೆಟ್‌ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಅದರಲ್ಲಿ ಅಂದಾಜು 20 ಗ್ರಾಂ ಚಿನ್ನದ ಮೂಗುತಿಗಳಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ 1,20,000 ರೂ. ಆಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next