ಶ್ರೀರಂಗಪಟ್ಟಣ: ದೇಗುಲದ ಬಾಗಿಲು ಮುರಿದು ದೇಗುಲದಲ್ಲಿದ್ದ ದೇವರ ಹುಂಡಿ ಹಾಗು ದೇವರ ವಿಗ್ರಹದ ಮೇಲಿನ ಆಭರಣಗಳನ್ನು ಕಳ್ಳತನ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದ್ದು ಗ್ರಾಮದ ಹಿರಿಯಮ್ಮನ ದೇಗುಲದ ಬಾಗಿಲು ಮುರಿದು ರಾತ್ರಿ ದುಷ್ಕರ್ಮಿಗಳು ಕಳ್ಳತನ ನಡೆಸಿ ಹುಂಡಿ ಸೇರಿದಂತೆ ದೇವರ ವಿಗ್ರಹದ ಮೇಲಿದ್ದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಆಕ್ರಮಿಸಿರುವ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡಿ: ಪಾಕ್ ಗೆ ಭಾರತದ ಖಡಕ್ ಉತ್ತರ
ಈ ಸಂಬಂಧ ಅರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.