ಕೋಲಾರ: ನಗರದ ಪ್ರಸಿದ್ಧ ಅಂತರಗಂಗೆ ಬೆಟ್ಟದಲ್ಲಿನ ಶ್ರೀ ಕಾಶಿವಿಶ್ವೇಶ್ವರ ದೇವಾಲಯದಲ್ಲಿ ದುಷ್ಕರ್ಮಿಗಳು ಕಳ್ಳತನ ಮಾಡಲು ಪ್ರಯತ್ನಿಸಿರುವ ಪ್ರಕರಣ ಶುಕ್ರವಾರ ರಾತ್ರಿ ಜರುಗಿದೆ.
ದೇಗುಲ ಹಿಂಬಾಗಿಲು ಒಡೆದಿರುವ ಚೋರರು ಹುಂಡಿ ಒಡೆಯಲು ಯತ್ನ ನಡೆಸಿದ್ದಾರೆ.
ಕೋಲಾರ ನಗರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿರುವ ಕಾಶಿವಿಶ್ವೇಶ್ವರ ದೇವಾಲಯಕ್ಕೆ ಶನಿವಾರ ಬೆಳಗ್ಗೆ ಅಯ್ಯಪ್ಪಸ್ವಾಮಿ ಭಕ್ತರು ಭೇಟಿ ನೀಡಿದಾಗ ಕಳ್ಳತನ ಯತ್ನ ಘಟನೆ ಬೆಳಕಿಗೆ ಬಂದಿದೆ.
ತಡರಾತ್ರಿ ದೇಗುಲಕ್ಕೆ ಕನ್ನ ಹಾಕಲು ಯತ್ನಿಸಿರುವ ಕಳ್ಳರ ಪ್ರಯತ್ನ ವಿಫಲವಾಗಿದೆ.
ಕೋಲಾರ ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಬರುವ ಅಂತರಗಂಗೆ ಶಿವನ ದೇಗುಲದಲ್ಲಿ ಕಾರ್ತಿಕ ಸೋಮವಾರ, ಹಾಗು ಲಕ್ಷ ದೀಪೋತ್ಸವ ವಿಶೇಷ ಹಿನ್ನಲೆ ಇತ್ತೀಚೆಗೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ದೇವಾಲಯದ ಹುಂಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಹಣ ಶೇಖರಣೆ ಹಿನ್ನಲೆ ಕಳುವು ಯತ್ನ ನಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.