Advertisement

Theft: ವ್ಯಾಪಾರಿ ಭವನದಿಂದ ಕಳವು

09:33 PM Mar 14, 2024 | Team Udayavani |

ಕಾಸರಗೋಡು: ನಗರದ ಹೃದಯ ಭಾಗದಲ್ಲಿರುವ ಕಾಸರಗೋಡು ಬ್ಲಾಕ್‌ ಪಂಚಾಯತ್‌ ಕಚೇರಿ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ವ್ಯಾಪಾರಿ ಭವನದಿಂದ ಸುಮಾರು 1.5 ಲಕ್ಷ ರೂ. ಕಳವಾಗಿದೆ. ಇದೇ ಕಟ್ಟಡದಲ್ಲಿ ಕಾರ್ಯಚರಿಸುವ ವ್ಯಾಪಾರಿ ಕ್ಷೇಮ ಸಹಕಾರಿ ಸಂಘದ ಲಾಕರ್‌ ಕಿತ್ತು ಹೊರಗೆ ಕೊಂಡೊಯ್ಯಲಾಗಿದೆ.

Advertisement

ವ್ಯಾಪಾರಿಗಳಿಂದ ದಿನಾ ಸಂಗ್ರಹಿಸುವ ಕಲೆಕ್ಷನ್‌ ಮೊತ್ತವಾದ 1.37 ಲಕ್ಷ ರೂ. ಇದ್ದ ಲಾಕರ್‌ ಸಾಗಿಸಲಾಗಿದೆ. ಇದಲ್ಲದೆ ಮೇಜಿನೊಳಗೆ ನೌಕರರು ಇಟ್ಟಿದ್ದ 2 ಸಾವಿರ ರೂ., ಕಲೆಕ್ಷನ್‌ ಏಜೆಂಟ್‌ಗೆ ನೀಡಲಿರಿಸಿದ 10 ಸಾವಿರ ರೂ. ಕಳವು ಮಾಡಲಾಗಿದೆ. ಸಹಕಾರಿ ಸಂಘದ ಕಾರ್ಯದರ್ಶಿ ಅನಿತಾ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next